ಬೆಂಗಳೂರು, ವೈಟ್‌ಫೀಲ್ಡ್: ಮಗಳಿಗೋಸ್ಕರ ಹೆತ್ತ ತಂದೆ ಏನೂ ಮಾಡೋಕೂ ರೆಡಿ ಅನ್ನೋದಕ್ಕೆ ಸಾಕ್ಷಿಯಂತೆ ಗಂಭೀರ ಸ್ಥಿತಿಯಲ್ಲಿದ್ದ ಮಗಳನ್ನು ರಕ್ಷಿಸಲು ತಮ್ಮ ಒಂದು ಕಿಡ್ನಿಯನ್ನು ದಾನ ಮಾಡಿದ್ದಾರೆ. ಮಗಳು ಅನುವಂಶೀಯದಿಂದ ಬರುವ ಬಹು-ಗುಳ್ಳೆ ಮೂತ್ರಪಿಂಡ ರೋಗ ( ADPKD)ದಿಂದ ಬಳಲುತ್ತಾ ಇದ್ದರು .ಇದರಿಂದ ಮೂತ್ರ ಪಿಂಡದ ವೈಫಲ್ಯವಾಗಿತ್ತು .
ಈ ಖಾಯಿಲೆ ಇವರ ಕುಟುಂಬಕ್ಕೆ ಹೊಸದೇನು ಅಲ್ಲ 2013ರಲ್ಲಿ, ಇದೇ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ಪತ್ನಿಗೆ ಕಿಡ್ನಿ ದಾನ ಮಾಡಲು ಅವರು ಮುಂದೆ ಬಂದಿದ್ದರು. ಆದರೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಎದುರಿಸಿದ ತಾಂತ್ರಿಕ ಅಡಚಣೆಗಳ ಕಾರಣದಿಂದ ಆ ವೇಳೆ ಕಿಡ್ನಿ ಟ್ರಾನ್ಸ್ ಪ್ಲಾಟ್ ಮಾಡಲು ಸಾಧ್ಯವಾಗಿರಲಿಲ್ಲ.
ಈಗ ಆ ಸಮಸ್ಯೆ ಮತ್ತೆ ಮಗಳಿಗೆ ಸಂಭವಿಸಿದಾಗ, ಅವರ ಮೂತ್ರಪಿಂಡಗಳು ವೈಫಲ್ಯಗೊಂಡಾಗ, ತಂದೆಯವರು ಕ್ಷಣಮಾತ್ರವೂ ಯೋಚಿಸದೇ – ತಮ್ಮ ಏಕೈಕ ಮಗಳನ್ನು ಉಳಿಸಲು ಮತ್ತೆ ಮುಂದೆ ಬಂದರು.
61 ವರ್ಷದ ತಂದೆಗೆ ಮಧುಮೇಹ ಮತ್ತು ರಕ್ತದೊತ್ತಡ ತೊಂದರೆ ಇದ್ದರೂ, ಮೆಡಿಕವರ್ ಆಸ್ಪತ್ರೆಯಲ್ಲಿ ನಡೆದ ಸಮಗ್ರ ಪರೀಕ್ಷೆಯಲ್ಲಿ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಯಾವುದೇ ಅಂಗ ಹಾನಿಯ ಲಕ್ಷಣಗಳು ಕಾಣಿಸಲಿಲ್ಲ. ತಜ್ಞರ ಬಹು ವಿಶಿಷ್ಟ ತಂಡ ನಡೆಸಿದ ವಿಮರ್ಶೆಯ ನಂತರ, ಅವರನ್ನು ಮಾರ್ಜಿನಲ್ ಡೋನರ್ ಎಂದು ಸ್ವೀಕರಿಸಲಾಯಿತು.
ಈ ಜೀವ ರಕ್ಷಕ ಶಸ್ತ್ರಚಿಕಿತ್ಸೆಯನ್ನುಡಾ. ಹರೀಶ ಬಾಬು ಕೆ – ಹಿರಿಯ ನೇಫ್ರಾಲಜಿಸ್ಟ್ ಮತ್ತು ಟ್ರಾನ್ಸ್‌ಪ್ಲಾಂಟ್ ತಜ್ಞ, ಡಾ. ಪ್ರಮೊದ್ – ಯೂರಾಲಜಿಸ್ಟ್ ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟ್ ತಜ್ಞ, ಡಾ. ದಿಲೀಪ್ – ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸಕ ಇವರ ತಂಡ ಯಶಸ್ವಿಯಾಗಿ ನೆರವೇರಿಸಿದರು.ದಾನ ಮಾಡಿದ ಕಿಡ್ನಿ ತಕ್ಷಣವೇ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.
“ಸಮಗ್ರ ಮತ್ತು ನಿಖರವಾದ ವೈದ್ಯಕೀಯ ಮೌಲ್ಯಮಾಪನದ ಮೂಲಕ, ನಿಯಂತ್ರಣದಲ್ಲಿರುವ ಮಧುಮೇಹ ಮತ್ತು ರಕ್ತದೊತ್ತಡವಿದ್ದರೂ ಸಹ ಹಿರಿಯ ದಾನಿಗಳನ್ನುಸುರಕ್ಷಿತವಾಗಿ ಕಿಡ್ನಿ ದಾನಕ್ಕಾಗಿ ಪರಿಗಣಿಸಬಹುದು. ಇದು ಸೂಕ್ತ ದಾನಿಗಳ ಕೊರತೆಯಿಂದ ಬಳಲುವ ಅನೇಕ ಕುಟುಂಬಗಳಿಗೆ ಹೊಸ ಆಶಾಕಿರಣವಾಗಿದೆ,” ಎಂದು ಡಾ. ಹರೀಶ ಬಾಬು ಕೆ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…
ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…
ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…
ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…
ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…
ದೊಡ್ಡಬಳ್ಳಾಪುರ: ಕುಡಿದ ಮತ್ತಿನಲ್ಲಿ ಪರಸ್ಪರ ಜಗಳವಾಡುತ್ತಿದ್ದವರನ್ನು ಬಿಡಿಸಲು ತೆರಳಿದ್ದ 112 ತುರ್ತು ಸೇವೆಯ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪ…