ತಂದೆಯ ವಿರೋಧದ ನಡುವೆಯೂ ಪ್ರೀತಿಸಿದ ಯುವಕನನ್ನ ಮದುವೆಯಾದ ಯುವತಿ: ಕುಪಿತಗೊಂಡ ತಂದೆ: ಮಗಳು ಮರಣ ಹೊಂದಿದ್ದಾಳೆಂದು ಶ್ರದ್ಧಾಂಜಲಿ ಫೋಟೋ‌ ಬಿಡುಗಡೆ

ತನ್ನ ತಂದೆ ವಿರೋಧದ ನಡುವೆಯೂ ತಾನು ಪ್ರೀತಿಸಿದ ಪ್ರಿಯಕನನ್ನು ಯುವತಿ ಮದುವೆಯಾಗಿದ್ದು, ಇದನ್ನ ಸಹಿಸದ ತಂದೆ, ನನ್ನ ಮಗಳು ಸತ್ತುಹೋಗಿದ್ದಾಳೆಂದು ಶ್ರದ್ಧಾಂಜಲಿ ಫೋಟೋ ಹಾಕಿ ಆಕ್ರೋಶವ್ಯಕ್ತಪಡಿಸಿರುವ ಘಟನೆ ತೆಲಂಗಾಣದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯಲ್ಲಿ ನಡೆದಿದೆ.

ಸಿರಿಸಿಲ್ಲದ ಚಿಲುವೇರಿ ಮುರಳಿ ಎಂಬುವವರ ಮಗಳು 18 ವರ್ಷದ ಚಿಲುವೇರಿ ಅನುಷಾ ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ತಾನು ಪ್ರೀತಿಸಿದ ವ್ಯಕ್ತಿಯನ್ನು ತಂದೆಗೆ ತಿಳಿಸದೇ ಮದುವೆಯಾಗಿದ್ದಾಳೆ.

ಈ ವಿಷಯ ತಿಳಿದ ತಂದೆ ಮುರಳಿ, ಮಗಳು ಸತ್ತಿದ್ದಾಳೆ ಎಂದು ಶ್ರದ್ಧಾಂಜಲಿ ಪೋಸ್ಟರ್ ನ್ನು ಮನೆಯ ಹೊರಗೆ ಹಾಕಿದ್ದಾರೆ.

ಯುವತಿ ಚಿಲುವೇರಿ ಅನುಷಾ ಪ್ರಥಮ ವರ್ಷದ ಬಿ ಟೆಕ್ ಓದುತ್ತಿದ್ದಳು, ಯುವಕನ ಪ್ರೀತಿಯ ಬಲೆಗೆ ಬಿದ್ದು, ಆತನನ್ನೆ ಮದುವೆಯಾಗಲು ನಿರ್ಧರಿಸಿ ತಂದೆಗೆ ತಿಳಿಸಿದಾಗ ತಂದೆ ಮಗಳ ನಿರ್ಧಾರವನ್ನ ನಿರಾಕರಿಸಿ, ಪ್ರಿಯಕರನನ್ನ ಮದುವೆಯಾಗಿದ್ದಾಳೆ.

ನನ್ನ ಮಗಳ ತಲೆ ಕಡೆಸಿ ನನ್ನಿಂದ ದೂರ ಮಾಡಿದ್ದಾರೆ. ಕಷ್ಟಪಟ್ಟು ದುಡಿದು ಕಾಲೇಜಿಗೆ ಫೀಸ್ ಕಟ್ಟಿ ಓದಲು ಕಳುಹಿಸಿದರೆ ಪ್ರೀತಿಯ ಬಲೆಗೆ ಬಿದ್ದು ನನಗೆ ಮೋಸ ಮಾಡಿ ಹೋಗಿದ್ದಾಳೆ. ಯಾರೂ ತಂದೆ-ತಾಯಿಗೆ ಮೋಸ ಮಾಡಬೇಡಿ. ನನಗೆ ಆಗಿರುವ ಅನ್ಯಾಯ ಯಾವ ಪೋಷಕರಿಗೂ ಆಗಬಾರದು ಎಂದು ಯುವತಿ ತಂದೆ ಮುರಳಿ ಅವರು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

Ramesh Babu

Journalist

Recent Posts

ಯುವಕರು ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು- ವಕೀಲ ಬಿ. ಸುರೇಶ್ ಗೌಡ

ಯುವಕರು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ವೈಯಕ್ತಿಕ ಬೆಳವಣಿಗೆಗೆ ಮಾತ್ರವಲ್ಲದೆ, ಆರೋಗ್ಯಕರ ಮತ್ತು ಸಮೃದ್ಧ ಸಮಾಜದ ನಿರ್ಮಾಣಕ್ಕೂ ಅತ್ಯಗತ್ಯವಾಗಿದೆ ಎಂದು ಹೈಕೋರ್ಟ್…

3 hours ago

ಕದನ ವಿರಾಮ…., ಕೊನೆಗೆ ಗೆಲ್ಲುವುದು ಹಿಂಸೆಯಲ್ಲ ಅಹಿಂಸೆ

ಕದನ ವಿರಾಮ...... ಯುದ್ಧ ವಿರಾಮ ಘೋಷಣೆಯಾಗಿದೆ. ಸಾವಿರಾರು ಜನರ ಹತ್ಯೆಗಳ ನಂತರ, ಅಪಾರ ಪ್ರಮಾಣದ ಭೂಪ್ರದೇಶ, ನೈಸರ್ಗಿಕ ಸಂಪನ್ಮೂಲಗಳು, ತೈಲ…

3 hours ago

ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಕ್ರಮ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ

ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜಿನಲ್ಲಿ ಯಾವ ಲೋಪಗಳು ಉಂಟಾಗದಂತೆ ಮುಂಜಾಗರೂಕತಾ ಕ್ರಮ ಕೈಗೊಳ್ಳುವ ಸಲುವಾಗಿ ರಾಜ್ಯದ ಎಲ್ಲ…

13 hours ago

14 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ತಪ್ಪದೇ ಎಚ್.ಪಿ.ವಿ ಲಸಿಕೆ ಹಾಕಿಸಿ- ಡಿಸಿ ಅನುರಾಧ

ಗರ್ಭಕಂಠ ಕ್ಯಾನ್ಸರ್ ಬಾರದಂತೆ ತಡೆಯುವಲ್ಲಿ ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್.ಪಿ.ವಿ) ಲಸಿಕೆಯು ಅತ್ಯಂತ ಪರಿಣಾಮಕಾರಿಯಾಗಿದ್ದು 14 ರಿಂದ 15 ವರ್ಷದೊಳಗಿನ…

13 hours ago

ಕೃಷಿ ಹೊಂಡದಲ್ಲಿ ಈಜಲು ಹೋಗಿ 34 ವರ್ಷದ ವ್ಯಕ್ತಿ ಸಾವು

ಕೃಷಿ ಹೊಂಡದಲ್ಲಿ ಈಜಲು ಹೋಗಿ 34ವರ್ಷದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಇಂದು…

14 hours ago

ನಾಳೆ (ಏ.9ಕ್ಕೆ) ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ

ಮಾ.9ರ ಗುರುವಾರ ಮಧ್ಯಾಹ್ನ 3.00 ಗಂಟೆಗೆ 2026ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ…

18 hours ago