ಡೇಟಿಂಗ್ ಆ್ಯಪ್ ಬಳಕೆ ಮಾಡುತ್ತಿರುವ ಯುವತಿಯರೇ ಎಚ್ಚರ ಎಚ್ಚರ..! ಡೇಟಿಂಗ್ ಆ್ಯಪ್ ನಲ್ಲಿ ಆಕ್ಟಿವ್ ಆಗಿದ್ದಾರೆ ಕಾಮುಕರು: ಡೇಟಿಂಗ್ ಆ್ಯಪ್ ನಲ್ಲಿ ಫೇಕ್ ಹೆಸರಲ್ಲಿ ಹುಡುಗಿಯರಿಗೆ ಮೋಸ

ಡೇಟಿಂಗ್ ಆ್ಯಪ್ ಯೂಸ್​ ಮಾಡುತ್ತಿರುವ ಯುವತಿಯರೇ ಎಚ್ಚರದಿಂದಿರಿ. ಈ ಡೇಟಿಂಗ್ ಆ್ಯಪ್ ನಲ್ಲಿ ಕಾಮುಕರು ಆಕ್ಟಿವ್ ಆಗಿದ್ದು, ಆ್ಯಪ್ ನಲ್ಲಿ ಫೇಕ್ ಹೆಸರಲ್ಲಿ ಹುಡುಗಿಯರಿಗೆ ಮೋಸ ಮಾಡುತ್ತಿದ್ದಾರೆ.

ಕಾಮುಕರ ಅಟ್ಟಹಾಸಕ್ಕೆ ಡೇಟಿಂಗ್ ಆ್ಯಪ್​ಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆ್ಯಪ್​ ಫ್ರೋಫೈಲ್ ನಲ್ಲಿ ಹೀರೋ ರೀತಿ ಫೋಟೊ ಅಪ್ಲೋಡ್ ಮಾಡಿ, ಹುಡುಗಿಯರ ಸ್ನೇಹ ಬೆಳೆಸಿ ಮದುವೆ ಆಗುವ ನಾಟಕವಾಡೋದು.

ಯುವತಿಯೊಬ್ಬಳು ಬಂಬಲ್ ಆ್ಯಪ್ ನಲ್ಲಿ ಸಂಗಾತಿಯನ್ನ ಹುಡುಕುತ್ತಿದ್ದಳು. ಈ ವೇಳೆ ಅನಿರುದ್ದ್ ಎಂಬಾತನ ಫ್ರೋಫೈಲ್ ನಿಂದ ಮೆಸೇಜ್​ ಯುವತಿಗೆ ಬಂದಿದೆ. ಅನಿರುದ್ದ್ ಚಾಟಿಂಗ್ ಮೂಲಕ ಯುವತಿಯ ಗಮನ ಸೆಳೆದಿದ್ದನು, ನಂತರ ಮುಖಾಮುಖಿ ಭೇಟಿಯಾದಾಗ ಯುವತಿ ಶಾಕ್ ಆಗಿದ್ದಾಳೆ. ಸ್ಥಳದಲ್ಲಿ ಅನಿರುದ್ಧ್ ನನ್ನು ನೋಡಿದಾಗ ಮುಸ್ಲಿಂ ಯುವಕ ಎಂದು ಗೊತ್ತಾಗಿದೆ. ಆತ ಅನಿರುದ್ದ್ ಅಲ್ಲ ಮುದಾಸಿರ್ ಎಂಬುದು ಗೊತ್ತಾಗಿದೆ. ಈ ವೇಳೆ ಆತ ನೀನು ನನ್ನನ್ನ ಪ್ರೀತಿಸುವುದಿಲ್ಲ ಅಂದುಕೊಂಡು ಈ ರೀತಿ ಮಾಡಿದ್ದೇನೆ ಎಂದು ಮನವೊಲಿಸಿದ್ದನು, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದನು.

ತನ್ನ ತಾಯಿಗೆ ಹುಷಾರಿಲ್ಲ ಎಂದು ಯುವತಿ ಬಳಿ 1 ಲಕ್ಷ ಹಣ ಪೀಕಿದ್ದ, ಹಣ ಕೊಟ್ಟ ಒಂದು ತಿಂಗಳ ನಂತ ತನ್ನ ತಾಯಿ ತೀರಿ ಹೋಗಿದ್ದಾಳೆ ಎಂದು ನಾಟಕ ಮಾಡಿದ್ದನು. ನಾನು ನನ್ನ ತಮ್ಮನನ್ನ ನೋಡಲು ದುಬೈಗೆ ಹೋಗಿ ಬರುತ್ತೇನೆ ಎಂದು ಕಥೆ ಕಟ್ಟಿ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದನು, ನಂತರ ಕಾಮುಕ ಮುದಾಸಿರ್ ನ ಪತ್ತೆಗೆ ಯುವತಿ ಮುಂದಾಗಿದ್ದಳು. ಮುದಾಸಿರ್ ಸಹೋದರನನ್ನ ಸಂಪರ್ಕಿಸಿದ್ದಾಗ, ಆತನ ತಾಯಿ ತೀರಿ ಹೋಗಿಲ್ಲ ತಾಯಿ ಕಾಶ್ಮೀರದಲ್ಲಿ ವಾಸ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.

ಮುದಾಸಿರ್ ಬೆಂಗಳೂರಲ್ಲೇ ವಾಸ ಮಾಡಿಕೊಂಡಿದ್ದಾನೆ ಎಂಬ ಮಾಹಿತಿಯನ್ನ ಕಲೆ‌ ಹಾಕಿದ ಯುವತಿ, ಮನೆ ಬಳಿ ಹೋದಾಗ ಯುವತಿ ಗೊತ್ತಾಗಿದೆ, ಉದಾಸಿರ್ ಮದುವೆಯಾಗಿ ಹೆಂಡತಿ ಜೊತೆ ವಾಸವಿದ್ದನು ಎಂಬುದು. ನೊಂದ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು, ಘಟನೆ ಸಂಬಂಧ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

Ramesh Babu

Journalist

Recent Posts

ಗೃಹಲಕ್ಷ್ಮಿ ಹಣ ಶೀಘ್ರ ಬಿಡುಗಡೆ- ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ತಡೆ ಮಸೂದೆಯ ಬಗ್ಗೆ ಬಿಜೆಪಿಗೆ ಮಾತ್ರ ಏಕೆ ಆತಂಕ? ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು…

3 hours ago

ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ

ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್​​ಪಿ ಗುಂಜನ್…

4 hours ago

ವಿಶ್ವದ ಅತಿಮುಖ್ಯ ನಗರ, ಭಾರತದ ಆಡಳಿತ ಶಕ್ತಿ ಕೇಂದ್ರ ದೆಹಲಿಯಲ್ಲಿ ವಾಯು ಮಾಲಿನ್ಯ….

ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…

9 hours ago

ಸಿದ್ದೇನಾಯಕನಹಳ್ಳಿಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ: ಸಚಿವ ಕೆ.ಎಚ್ ಮುನಿಯಪ್ಪ ಭಾಗಿ

ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…

21 hours ago

ಬಾಶೆಟ್ಟಿಹಳ್ಳಿ ಪಪಂ ಚುನಾವಣೆ: ಶೇ.78ರಷ್ಟು ಮತದಾನ: ನಕಲಿ ಮತದಾನಕ್ಕೆ ಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು: ಕುಡಿದು ಚುನಾವಣೆ ಕೆಲಸಕ್ಕೆ ಬಂದ ಶಿಕ್ಷಕ

ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…

21 hours ago

ಒಂಟಿ ಮನೆ ಸುತ್ತಾ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು: ಗಾಬರಿಗೊಂಡ ಮಹಿಳೆ: ಗ್ರಾಮಸ್ಥರ ಕೈಗೆ ಸಿಕ್ಕ ಆಸಾಮಿಗಳು, ಸದ್ಯ ವಶಕ್ಕೆ ಪಡೆದ ಪೊಲೀಸರು

ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…

22 hours ago