ತಾಲೂಕಿನ ಕೂಗೇನಹಳ್ಳಿ ಸಮೀಪದ ಖಾಸಗಿ ಡಾಬಾ ಬಳಿ ತನ್ನ ಪಾಡಿಗೆ ತಾನು ಫೋಟೋ ಶೂಟ್ ಮಾಡುವ ವೇಳೆ ಯುವಕನೊಂದಿಗೆ ಕಿರಿಕ್ ತೆಗೆದ ಕಿಡಿಗೇಡಿಗಳು, ಈ ಕಿರಿಕ್ ತಾರಕಕ್ಕೇರಿ ಕೊಲೆಯಲ್ಲಿ ಸಮಾಪ್ತಿಗೊಂಡಿದೆ.
ನಗರದ ಕಚೇರಿಪಾಳ್ಯದ ನಿವಾಸಿ ಸೂರ್ಯ(22), ಕೊಲೆಗೀಡಾದ ಯುವಕ.
ದೀಪಾವಳಿ ವಿಶೇಷ, ರಾಮೇಶ್ವರ ಬಳಿಯ ಖಾಸಗಿ ಡಾಬದ ಮುಂಭಾಗ ಅಲಂಕರಿಸಲಾಗಿದ್ದ ಸೀನರಿ ಬಳಿ ಮೃತ ಸೂರ್ಯ ಜೊತೆ ತೆರಳಿದ್ದ ನಾಲ್ವರು ಯುವಕರು ನಡೆಸುತ್ತಿದ್ದ ಫೋಟೋ ಶೂಟ್ ಮಾಡಿಕೊಳ್ಳುತ್ತಿರುತ್ತಾರೆ. ಅಲ್ಲಿಗೆ ಬಂದ ಅಪರಿಚಿತ ಗುಂಪೊಂದು ನಮ್ಮದು ಫೋಟೋ ತೆಗೆಯುವಂತೆ ಸುಖಾಸುಮ್ಮನೆ ಕಿರಿಕ್ ತೆಗೆದಿದ್ದಾರೆ.
ಈ ವೇಳೆ ಫೋಟೋ ಯುವಕರು ತೆಗೆಯುತ್ತಾರೆ. ಅಲ್ಲಿಗೆ ಸುಮ್ಮನಾಗದ ಕಿರಿಕ್ ಗುಂಪು ಯುವಕರಿಂದ ಕ್ಯಾಮೆರಾ ಕಬಳಿಸಿ ಹಲ್ಲೆ ಮಾಡಿದ್ದಲ್ಲದೆ, ಸೂರ್ಯ ಎದೆಯ ಭಾಗಕ್ಕೆ ಕೀ ಚೈನ್ ನಿಂದ ಚುಚ್ಚಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಲವಾದ ಪೆಟ್ಟು ಬಿದ್ದಿದ್ದರಿಂದ ಸೂರ್ಯ ಅಲ್ಲೇ ಕುಸಿದು ನಿತ್ರಾಣನಾಗಿದ್ದರಿಂದ ಆಸ್ಪತ್ರೆಗೆ ರವಾನೆ ಮಾಡಲಾಗುತ್ತದೆ. ಆದರೆ ತೀವ್ರ ರಕ್ತಸ್ರಾವ ಆಗಿದ್ದರಿಂದ ಸಾವನ್ನಪ್ಪುತ್ತಾನೆ ಎಂದು ತಿಳಿದು ಬಂದಿದೆ. ಆಸ್ಪತ್ರೆ ಬಳಿ ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂ.ಆರ್.ಹರೀಶ್ ಹಾಗೂ ಸಿಬ್ಬಂದಿ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ದೊಡ್ಡಬೆಳವಂಗಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಮದುವೆಯಾದ 45 ದಿನಕ್ಕೆ ನವವಿವಾಹಿತ ಪತ್ನಿಯಿಂದ ಕಿರುಕುಳ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ವರ್ತನೆಯೇ ಸಾವಿಗೆ ಕಾರಣ ಎಂದು…
ಬೆಂಗಳೂರು ನಗರದ ಯಡಿಯೂರು ಕೆರೆ ಸಮೀಪದ ನಿವಾಸಿಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.…
ರಾಯಚೂರು: ಆಸ್ತಿ ಮೇಲಿನ ವ್ಯಾಮೋಹಕ್ಕೆ ಹೆತ್ತ ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಹೃದಯವಿದ್ರಾವಕ ಘಟನೆ ರಾಯಚೂರು…
ಆಗ್ರಾ: ಆಗ್ರಾದಲ್ಲಿ ಚೀಲದಲ್ಲಿ ಯುವತಿಯ ಶಿರರಹಿತ ಶವ ಪತ್ತೆಯಾದ ಪ್ರಕರಣದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಆಗ್ರಾದ ಪಾರ್ವತಿ ವಿಹಾರ್‌ನಲ್ಲಿ ಜನವರಿ 24…
ಕೋಲಾರ: ರಾಜ್ಯ ಸರ್ಕಾರ 2023ರ ಪಿಟಿಸಿಎಲ್ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಕಂದಾಯ ಇಲಾಖೆ, ನ್ಯಾಯಾಲಯಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ…
ಒಂದು ಸುಂದರ ಸಂಸಾರ ಸಾಲದ ಸುಳಿಗೆ ಸಿಲುಕುವುದು ಎಂದರೆ ಅದು ಕೇವಲ ಆರ್ಥಿಕ ಬಿಕ್ಕಟ್ಟಲ್ಲ; ಅದು ಆ ಮನೆಯ ನೆಮ್ಮದಿಯ…