ತಾಲೂಕಿನ ಕೂಗೇನಹಳ್ಳಿ ಸಮೀಪದ ಖಾಸಗಿ ಡಾಬಾ ಬಳಿ ತನ್ನ ಪಾಡಿಗೆ ತಾನು ಫೋಟೋ ಶೂಟ್ ಮಾಡುವ ವೇಳೆ ಯುವಕನೊಂದಿಗೆ ಕಿರಿಕ್ ತೆಗೆದ ಕಿಡಿಗೇಡಿಗಳು, ಈ ಕಿರಿಕ್ ತಾರಕಕ್ಕೇರಿ ಕೊಲೆಯಲ್ಲಿ ಸಮಾಪ್ತಿಗೊಂಡಿದೆ.
ನಗರದ ಕಚೇರಿಪಾಳ್ಯದ ನಿವಾಸಿಯಾದ ಸುಮಾರು 22 ವರ್ಷದ ಸೂರ್ಯ (ಸೂರಿ) ಕೊಲೆಗೀಡಾದ ಯುವಕ.
ದೀಪಾವಳಿ ವಿಶೇಷ, ರಾಮೇಶ್ವರ ಬಳಿಯ ಖಾಸಗಿ ಡಾಬದ ಮುಂಭಾಗ ಅಲಂಕರಿಸಲಾಗಿದ್ದ ಸೀನರಿ ಬಳಿ ಮೃತ ಸೂರ್ಯ ಜೊತೆ ತೆರಳಿದ್ದ ನಾಲ್ವರು ಯುವಕರು ನಡೆಸುತ್ತಿದ್ದ ಫೋಟೋ ಶೂಟ್ ಮಾಡಿಕೊಳ್ಳುತ್ತಿರುತ್ತಾರೆ. ಅಲ್ಲಿಗೆ ಬಂದ ಅಪರಿಚಿತ ಗುಂಪೊಂದು ನಮ್ಮದು ಫೋಟೋ ತೆಗೆಯುವಂತೆ ಸುಖಾಸುಮ್ಮನೆ ಕಿರಿಕ್ ತೆಗೆದಿದ್ದಾರೆ.
ಈ ವೇಳೆ ಫೋಟೋ ಯುವಕರು ತೆಗೆಯುತ್ತಾರೆ. ಅಲ್ಲಿಗೆ ಸುಮ್ಮನಾಗದ ಕಿರಿಕ್ ಗುಂಪು ಯುವಕರಿಂದ ಕ್ಯಾಮೆರಾ ಕಬಳಿಸಿ ಹಲ್ಲೆ ಮಾಡಿದ್ದಲ್ಲದೆ, ಸೂರಿಯ ಎದೆಯ ಭಾಗಕ್ಕೆ ಕೀ ಚೈನ್ ನಿಂದ ಚುಚ್ಚಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಲವಾದ ಪೆಟ್ಟು ಬಿದ್ದಿದ್ದರಿಂದ ಸೂರ್ಯ ಅಲ್ಲೇ ಕುಸಿದು ನಿತ್ರಾಣನಾಗಿದ್ದರಿಂದ ಆಸ್ಪತ್ರೆಗೆ ರವಾನೆ ಮಾಡಲಾಗುತ್ತದೆ. ಆದರೆ ತೀವ್ರ ರಕ್ತಸ್ರಾವ ಆಗಿದ್ದರಿಂದ ಸಾವನ್ನಪ್ಪುತ್ತಾನೆ ಎಂದು ತಿಳಿದು ಬಂದಿದೆ. ಆಸ್ಪತ್ರೆ ಬಳಿ ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂ.ಆರ್.ಹರೀಶ್ ಹಾಗೂ ಸಿಬ್ಬಂದಿ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ದೊಡ್ಡಬೆಳವಂಗಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…