ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್: ಟ್ರೋಫಿಗೆ ಮುತ್ತಿಟ್ಟ ಸಾದಲಿ ತಂಡ

ಶಿಡ್ಲಘಟ್ಟ ತಾಲ್ಲೂಕಿನ ಬಾಶೆಟ್ಟಹಳ್ಳಿ ಹೋಬಳಿಯ ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ಪ್ರೆಂಡ್ಸ್ ಕ್ರಿಕೆಟ್ ತಂಡದ ವತಿಯಿಂದ ಮೂರು ದಿನಗಳ ಕಾಲ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು.

ಸೋಮವಾರ ನಡೆದ ಪೈನಲ್ ನಲ್ಲಿ ಸಾದಲಿ ಮತ್ತು ಚಿಕ್ಕತೇಕಹಳ್ಳಿ ಫ್ರೆಂಡ್ಸ್ ಕ್ರಿಕೆಟ್ ತಂಡಗಳ ನಡುವೆ ನಡೆಯಿತು.

ಚಿಕ್ಕತೇಕಹಳ್ಳಿ ಫ್ರೆಂಡ್ಸ್ ಕ್ರಿಕೆಟ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ತಂಡ 17 ರನ್ ಗಳಿಸಿ ಸ್ಪರ್ಧಾತ್ಮಕ ಗುರಿ ನೀಡಿತು.

ಸಾದಲಿ ತಂಡ ಬ್ಯಾಟಿಂಗ್ ಆರಂಭಿಸುವ ಮುನ್ನ ತುಂತುರು ಮಳೆಯಿಂದ ಸಾದಲಿ ತಂಡಕ್ಕೆ ಸ್ಪಲ್ಪ ಅಡಚಣೆ ಯಾದರೂ ಅಂತಿಮವಾಗಿ ಜಯಭೇರಿ ಗಳಿಸಿ ಆಕರ್ಷಕ ಟ್ರೋಫಿಯೊಂದಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಚಿಕ್ಕತೇಕಹಳ್ಳಿ ಫ್ರೆಂಡ್ಸ್ ಕ್ರಿಕೆಟ್ ತಂಡ ಅಂತಿಮ ಹಣಾ ಹಣೆಯಲ್ಲಿ ಸಾದಲಿ ತಂಡದ ವಿರುದ್ಧ ಸೋಲೊಪ್ಪಿಕೊಂಡು ದ್ವಿತೀಯ ಸ್ಥಾನಗಳಿಸಿ ಸಂಭ್ರಮಿಸಿತು.

ಇನ್ನು ಇದಕ್ಕೂ ಮೊದಲು ಸೆಮಿಫೈನಲ್ ನಲ್ಲಿ ಮೈಲಪ್ಪನಹಳ್ಳಿ ಹಾಗೂ ಸಾದಲಿ ತಂಡಗಳ ನಡುವೆ ಪಂದ್ಯ ನಡೆದು ಸಾದಲಿ ಫೈನಲ್ ಸ್ಥಾನಕ್ಕೇರಿದರೆ ಮೈಲಪ್ಪನಹಳ್ಳಿ ತಂಡದವರು ತೃತೀಯ ಸ್ಥಾನ ಗಳಿಸಿ ಟ್ರೋಫಿ ಮತ್ತು ಸಮಾಧಾನಕರ ಬಹುಮಾನ ಗಳಿಸಿ ತೃಪ್ತಿ ಪಡೆದುಕೊಂಡಿತು.

ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾದ ಟೂರ್ನಮೆಂಟ್ ಗೆ ಸುಮಾರು 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.

ಒಟ್ಟಾರೆ, ಮೂರು ದಿನಗಳ ಕಾಲ ನಡೆದ ಟೂರ್ನಿಯಲ್ಲಿ ಇದೊಂದು ರೋಚಕ ಮತ್ತು ಮನರಂಜನೆಯ ಪಂದ್ಯವಾಗಿತ್ತು. ಕ್ರಿಕೆಟ್‌ನ ನಿಜವಾದ ಸ್ಪೂರ್ತಿಯನ್ನು ಪ್ರದರ್ಶಿಸಿತು.

ಉಭಯ ತಂಡಗಳ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರಿಗೆ ಉತ್ತಮ ಪ್ರದರ್ಶನ ನೀಡಿದರು. ಅಂತಿಮವಾಗಿ ಸಾದಲಿ ತಂಡ ಪ್ರಶಸ್ತಿ ಪಡೆದುಕೊಂಡರು.

ಸಾದಲಿ ತಂಡದ ನಾಯಕ ನವೀನ್ ಕುಮಾರ್ ಮಾತನಾಡಿ, ಗ್ರಾಮಾಂತರ ಹಾಗೂ ನಗರ ತಂಡಗಳ ನಡುವೆ ನಡೆದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಅದ್ಭುತವಾಗಿ ನೆರವೇರಿತು. ನಮ್ಮ ಯಶಸ್ಸಿಗೆ ನಮ್ಮ ಶಿಸ್ತು ಮತ್ತು ನಮ್ಮ ಒಗ್ಗಟ್ಟು ಹಾಗೂ ನಾಯಕನ ನಿರ್ಣಯ ನಮ್ಮ ಗೆಲುವಿಗೆ ಕಾರಣ ಎಂದರು.

ಫ್ರೆಂಡ್ಸ್ ಕ್ರಿಕೆಟ್ ತಂಡದ ನಾಯಕ ವೆಂಕಟರೆಡ್ಡಿ ಮಾತನಾಡಿ, ಮೂರು ದಿನಗಳ ಕಾಲ ನಡೆದ ಟೂರ್ನಿಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು. ಪಂದ್ಯಗಳಲ್ಲಿ ಯಾವುದೇ ರೀತಿ ಗೊಂದಲಗಳಿಗೆ ಅವಕಾಶ ಮಾಡಿಕೊಡದೆ ಅತ್ಯುತ್ತಮವಾಗಿ ನೆರವೇರಿಸಿಕೊಂಡು ಬಂದು ಅಂತಿಮ ಪಂದ್ಯದಲ್ಲಿ ಸಾದಲಿ ತಂಡ ಜಯಭೇರಿಗಳಿಸಿದ್ದು, ನಾವು ದ್ವಿತೀಯ ಸ್ಥಾನಗಳಿಸಿದ್ದೇವೆ. ಕ್ರೀಡೆ ಎಂದರೆ ಸೋಲು ಗೆಲುವು ಸಹಜ. ನಾವು ಸೋತಿರುವುದಕ್ಕಿಂತ ಸಾದಲಿ ತಂಡದ ಆಟಗಾರರು ಅದ್ಭುತ ಆಟ ಪ್ರದರ್ಶನ ಮಾಡಿದರು.

ಟೂರ್ನಿಯಲ್ಲಿ ವಿಜೇತರಾದ ತಂಡಗಳಿಗೆ ಕೃಷ್ಣಪ್ಪ, ಮಂಜುನಾಥ್, ಟಿ.ಎಸ್ ಪ್ರದೀಪ್ ಕುಮಾರ್, ಆಂಜಿನಪ್ಪ ಪ್ರಶಸ್ತಿ ಹಾಗೂ ಬಹುಮಾನವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಪ್ರೇಕ್ಷಕರು ಹಾಜರಿದ್ದು ಮನಮೋಹಕ ಆಟವನ್ನು ನೋಡಿ ತೃಪ್ತಿ ಪಡೆದುಕೊಂಡರು.

Ramesh Babu

Journalist

Recent Posts

18 ದೇವಸ್ಥಾನಗಳಿಗೆ ಕನ್ನ ಹಾಕಿದ್ದ ಖದೀಮರ ಬಂಧನ: ಲಕ್ಷಾಂತರ ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು, ಗುಂಡುಗಳು ವಶ

  18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು‌ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…

3 hours ago

ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಎಂಬಿಎ ವಿದ್ಯಾರ್ಥಿ ಸಾವು

ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…

3 hours ago

ಮೊಬೈಲ್ ನೋಡುತ್ತಾ ಕುಳಿತಿದ್ದ 21 ವರ್ಷದ ಯುವಕನಿಗೆ ಚಾಕು ಇರಿತ: ಚಾಕು ಇರಿತ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…

6 hours ago

ರಾಹುಲ್ ಗಾಂಧಿ ಸೈದ್ಧಾಂತಿಕ ಬದ್ಧತೆಯಿರುವ ವ್ಯಕ್ತಿ….

ರಾಹುಲ್ ಗಾಂಧಿ...... ಬಿಹಾರ ಚುನಾವಣೆಯಲ್ಲಿ, ಸೀಟುಗಳ ಲೆಕ್ಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ನಂತರ ಶ್ರೀ ರಾಹುಲ್ ಗಾಂಧಿಯವರ ನಾಯಕತ್ವದ ಸಾಮರ್ಥ್ಯದ…

9 hours ago

ಇಬ್ಬರು ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಾಲೇಜಲ್ಲಿ ಶೋಕಿ ಮಾಡೋ ಖಯಾಲಿ: ಆದ್ರೆ ಜೇಬಲ್ಲಿ ಕಾಂಚಾಣ ಇಲ್ಲ: ಕಾಸಿಗಾಗಿ ಏನು ಮಾಡಿದ್ರು ಗೊತ್ತಾ……

ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…

21 hours ago

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹೀಲಿನ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ

ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…

22 hours ago