ಟಿಎಪಿಎಂಸಿಎಸ್ ಮತದಾನದಲ್ಲಿ ಏರುಪೇರು: ಮತದಾನ ಏರುಪೇರಿಗೆ ಪ್ರತಿಸ್ಪರ್ಧಿ ಏಜೆಂಟ್ ಗಳೇ ಕಾರಣ: ಮರು ಮತದಾನಕ್ಕೆ ಪರಾಜಿತ ಅಭ್ಯರ್ಥಿ ನರಸಿಂಹ ಮೂರ್ತಿ ಒತ್ತಾಯ

ದೊಡ್ಡಬಳ್ಳಾಪುರ ತಾಲೂಕಿನ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ನ.2ರಂದು ನಡೆಯಿತು. ಈ ಚುನಾವಣೆಯಲ್ಲಿ ಕೆಲವೊಂದು ಬೂತ್ ಗಳಲ್ಲಿ ನಮ್ಮ ಏಜೆಂಟ್ ಗಳು ಇರಲಿಲ್ಲ. ವಯೋವೃದ್ಧರು ಮತದಾನ ಮಾಡುವಾಗ ಗೊಂದಲದಲ್ಲಿದ್ದಾಗ ಬೇರೆ ಏಜೆಂಟರ್ ಗಳು ಬಂದು ಮತದಾನ ಮಾಡಿಸಿದ್ದಾರೆ. ಆಗ ಮತದಾನದಲ್ಲಿ ಏರುಪೇರಾಗಿ ನಾನು ಸೋತಿದ್ದೇನೆ ಎಂದು ಎಚ್ ನರಸಿಂಹ ಮೂರ್ತಿ ಆರೋಪ ಮಾಡಿದ್ದಾರೆ.

ನ.2ರಂದು ನಡೆದ ದೊಡ್ಡಬಳ್ಳಾಪುರ ಟಿಎಪಿಎಂಸಿಎಸ್ ಚುನಾವಣೆಯಲ್ಲಿ‌ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ನೇರಳೇಘಟ್ಟ ನರಸಿಂಹಮೂರ್ತಿ ಸ್ಪರ್ಧಿಸಿದ್ದರು. ಮತ ಎಣಿಕೆಯಲ್ಲಿ ನರಸಿಂಹ‌ಮೂರ್ತಿ ಪ್ರತಿ ಸ್ಪರ್ಧಿ ಆನಂದ್ ಎಂ ಅವರು 2338 ಮತ ಪಡೆದಿದ್ದರು, ನರಸಿಂಹ ಮೂರ್ತಿ ಅವರು 2065 ಮತಗಳನ್ನು ಪಡೆದು ಸೋಲುಕಂಡಿದ್ದರು. ಚುನಾವಣಾ ಫಲಿತಾಂಶ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಫಲಿತಾಂಶದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಚುನಾವಣೆ ಪ್ರಕ್ರಿಯೆಗಳ ಬಗ್ಗೆ ಆರೋಪಿಸಿದ ಅವರು, ಇದು ಸಹಕಾರ ಕ್ಷೇತ್ರದಲ್ಲಿ ನನಗೆ ಮೊದಲ ಚುನಾವಣೆ ಆಗಿದ್ದರಿಂದ ಚುನಾವಣೆ ಪ್ರಕ್ರಿಯೆ ಮೇಲೆ ನಿಗಾವಹಿಸಲು ಸಾಧ್ಯವಾಗಿರಲಿಲ್ಲ. ಅದು ನನ್ನ ಗಮನಕ್ಕೆ ಬಂದಂತೆ 11 ಬೂತ್ ಗಳಲ್ಲಿ‌ ಕೇವಲ 4 ಬೂತ್ ಗಳಲ್ಲಿ ಮಾತ್ರ ನಮ್ಮ ಏಜೆಂಟ್ ಗಳು ಕೆಲಸ ಮಾಡುತ್ತಿದ್ದರು. ಈ ಅವಕಾಶ ಪಡೆದ ಪ್ರತಿ ಸ್ಪರ್ಧಿ ಏಜೆಂಟ್ ಗಳು ವಯಸ್ಸಾದವರಿಗೆ ನೆರವಾಗುವ ನೆಪದಲ್ಲಿ ಮತದಾನವನ್ನು ಏರುಪೇರು ಮಾಡಿದ್ದಾರೆ. 8 ಬ್ಯಾಲೆಟ್ ಗಳು ಇತ್ತು, ಇದು ವಯಸ್ಸಾದವರಿಗೆ ಗೊಂದಲ ಉಂಟುಮಾಡಿತ್ತು. ಕೆಲವರು ಮತದಾನ ಮಾಡದೇ ಖಾಲಿ ಹಾಳೆ ಬಿಟ್ಟಿದ್ದಾರೆ. ಈ ಖಾಲಿ ಪೇಪರ್ ಗಳಲ್ಲಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇದು ನನ್ನ ಸೋಲಿಗೆ ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಇದರ ಜೊತೆಯಲ್ಲಿ 825 ತಿರಸ್ಕೃತ ಮತಗಳು ಕಂಡುಬಂದಿದ್ದು, ಇಷ್ಟೊಂದು ಮತಗಳು ತಿರಸ್ಕೃತಗೊಂಡಿರುವುದು ನನ್ನ ಸಂಶಯಕ್ಕೆ ಕಾರಣವಾಗಿದೆ. ಪ್ರತಿ ಸ್ಪರ್ಧಿಯ ಷಡ್ಯಂತ್ರದಂತೆ ಕೆಲವು ಮತದಾರರು ಯಾವುದೇ ಚಿಹ್ನೆಗೆ ಮತ ಹಾಕದೇ ಖಾಲಿ ಬ್ಯಾಲೆಟ್ ಪೇಪರ್ ಬಿಟ್ಟಿರುತ್ತಾರೆ. ಮತ ತಿರಸ್ಕೃತವಾಗಲು ಖಾಲಿ ಬ್ಯಾಲೆಟ್ ಪೇಪರ್ ಗಳೇ ಕಾರಣ. ಪ್ರತಿ ಸ್ಪರ್ಧಿಗೆ ಇದು ಮೂರನೇ ಚುನಾವಣೆಯಾಗಿದ್ದು, ಈ ಹಿಂದೆ ಮಾಜಿ ಅಧ್ಯಕ್ಷರು ಸಹ ಆಗಿದ್ದರು. ತಮ್ಮ ಪ್ರಭಾವ ಬಳಿಸಿಕೊಂಡು ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ….

ಪಾರದರ್ಶಕವಾಗಿ ಚುನಾವಣೆ ನಡೆದೇ ಇರುವುದರಿಂದ ಮರು ಮತದಾನಕ್ಕೆ ಅವಕಾಶ ಮಾಡಿಕೊಡುವಂತೆ‌ ಒತ್ತಾಯಿಸಿದರು….

Ramesh Babu

Journalist

Recent Posts

ವಿ. ಶಾಂತಕುಮಾರ್ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವಿ. ಶಾಂತಕುಮಾರ್ ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಕಾಂಗ್ರೆಸ್…

13 minutes ago

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ನಗರದ ದರ್ಗಾಜೋಗಿಹಳ್ಳಿ ಸಮೀಪದ ಹೋಟೆಲ್ ನಲ್ಲಿ…

1 hour ago

ಡಿಪಿಎಲ್ ಸೀಸನ್-1  ದೊಡ್ಡಬಳ್ಳಾಪುರ ಪ್ರೀಮಿಯರ್ ಲೀಗ್ ಶಾರ್ಟ್ ಪಿಚ್ ಕ್ರಿಕೆಟ್ ಟೂರ್ನಮೆಂಟ್: ಏ.1ರಿಂದ ನೋಂದಣಿ: ಮೇ.9, 10ಕ್ಕೆ ಕ್ರಿಕೆಟ್ ಟೂರ್ನಮೆಂಟ್

ಡಿಪಿಎಲ್ ಸೀಸನ್-1  ದೊಡ್ಡಬಳ್ಳಾಪುರ ಪ್ರೀಮಿಯರ್ ಲೀಗ್ ಶಾರ್ಟ್ ಪಿಚ್ ಕ್ರಿಕೆಟ್ ಟೂರ್ನಮೆಂಟ್ ನ್ನು ಮೇ.9 ಮತ್ತು 10ರಂದು ಆಯೋಜನೆ ಮಾಡಲಾಗಿದೆ...…

1 hour ago

ಕರ್ನಾಟಕದ ಶೈಕ್ಷಣಿಕ ಭಾಷಾ ನೀತಿ…..

ಭಾಷೆ, ಪ್ರಾದೇಶಿಕತೆ, ರಾಷ್ಟ್ರೀಯತೆ ಮತ್ತು ಧರ್ಮದ ಸಂಘರ್ಷ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಸ್ವಾರ್ಥದ ಅನುಕೂಲಕರ ರಾಜಕೀಯ..... ಕನ್ನಡ ತಾಯಿ…

5 hours ago

ಮಹಾವೀರ ಜಯಂತಿ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಇಂದು ನಾಡಿನಾದ್ಯಂತ ಮಹಾವೀರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಅದೇರೀತಿ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ…

16 hours ago

ನಾನು ಯಾರ ಜಮೀನು ಕಬಳಿಕೆ‌ ಮಾಡಿಲ್ಲ- ಕಾನೂನಾತ್ಮಕವಾಗಿ ಜಮೀನು ಖರೀದಿ ಮಾಡಿದ್ದೇನೆ- ನನ್ನ ಏಳಿಗೆ ಸಹಿಸದವರಿಂದ ನನ್ನ ಮೇಲೆ ಹಲ್ಲೆ ನಡೆದಿದೆ- ಕಾನೂನು ಹೋರಾಟ ಮಾಡಿ ಗೆಲ್ಲುವೆ- ವಕೀಲ ಪ್ರತಾಪ್

ನಾನು ವೃತ್ತಿಯಲ್ಲಿ ವಕೀಲನಾಗಿದ್ದೇನೆ. ವಕೀಲ ವೃತ್ತಿಯಲ್ಲಿ ಬಂದಂತಹ ಹಣದಿಂದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ದಡಘಟ್ಟಮಡಗು ಸಮೀಪ ಸರ್ವೇ ನಂ…

17 hours ago