ಯಲಹಂಕ ತಾಲ್ಲೂಕಿನ ಚಲ್ಲಹಳ್ಳಿ ಗ್ರಾಮದ ವೇಣುಗೋಪಾಲಸ್ವಾಮಿ ದೇವಸ್ಥಾನ ಸನ್ನಿಧಿಯಿಂದ ಜನವರಿ 29ರ ಸೋಮವಾರದಂದು ಒಂದು ವಾರಗಳ ಕಾಲ ತಿರುಮಲ ತಿರುಪತಿ ದೇವಸ್ಥಾನಕ್ಕೆ 13ನೇ ವರ್ಷದ ಪಾದಯಾತ್ರೆ ಮೂಲಕ ಹರಿಸೇವೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಹೆಸರಘಟ್ಟ ಹೋಬಳಿಯ ಚಲ್ಲಹಳ್ಳಿಯ ವೇಣುಗೋಪಾಲಸ್ವಾಮಿ ತಿರುಪತಿ ತಿರುಮಲ ಪಾದಯಾತ್ರಾ ಸೇವಾ ಸಮಿತಿ ವತಿಯಿಂದ 30ಕ್ಕೂ ಹೆಚ್ಚು ಭಕ್ತರು, 270ಕಿ.ಮೀ ನ್ನು 6ದಿನಗಳ ಕಾಲ ಪಾದಯಾತ್ರೆ ಮೂಲಕ ನಡೆದು, 7ನೇ ದಿನ ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆಯಲಾಗುತ್ತದೆ.
ಕಳೆದ 12 ವರ್ಷದಿಂದ ಈ ಪಾದಯಾತ್ರೆ ಸೇವೆ ನಡೆಯುತ್ತಿದ್ದು, ಬೆಳಗ್ಗೆ 5ಗಂಟೆಯಿಂದ ಸಂಜೆ 6ಗಂಟೆಯವರೆಗೂ ಸೇವಾಕರ್ತರು ಪಾದಯಾತ್ರೆ ನಡೆಸಲಿದ್ದಾರೆ. ಪ್ರತಿದಿನ 30ರಿಂದ 40ಕಿ.ಮೀ. ಪಾದಸೇವೆ ನಡೆಯಲಿದೆ. ರಾತ್ರಿ ಯಾತ್ರೆ ಇರುವುದಿಲ್ಲ. ಮಾರ್ಗಮಧ್ಯೆ ಸಿಗುವ ಶಾಲೆಯ ಆವರಣ, ಮಠಗಳು ಸುಮುದಾಯಭವನ, ದೇವಾಲಯ ಆವರಣದಲ್ಲಿ ರಾತ್ರಿ ಉಳಿದುಕೊಂಡು ಬೆಳಗ್ಗೆ ಪ್ರಯಾಣ ಬೆಳೆಸಲಾಗುತ್ತದೆ ಎಂದು ಸೇವಾ ಸಮಿತಿಯ ಹಿರಿಯ ಯಾತ್ರಿ ಚೇತನ್ ಗೌಡ ಹೇಳಿದರು.
ದಾರಿಯಲ್ಲಿ ನಡೆಯುವಾಗ ಆಯಾಸವಾಗುತ್ತದೆ, ಕೆಲವರಿಗೆ ಕಾಲು ಬೊಬ್ಬೆ ಬರುತ್ತದೆ. ಆದರೆ ದಾರಿಯುದ್ದಕ್ಕೂ ಹಾಡು ಭಕ್ತಿಗೀತೆಗಳ ಮೂಲಕ ಗೋವಿಂದ ಗೋವಿಂದ ಎಂದು ನಾಮಸ್ಮರಣೆ ಮಾಡುವುದರಿಂದ ನೋವುಗಳನ್ನು ಮರೆಸುತ್ತದೆ. ಮಾರ್ಗದುದ್ದಕ್ಕೂ ಯಾತ್ರಿಗಳಿಗೆ ತಿಮ್ಮಪ್ಪನ ಭಕ್ತರು ನೀರು, ಹಾಲು ಕೋಸಂಬರಿ, ಚಹ ಬಿಸ್ಕೆಟ್ ನೀಡಿ ನಮಸ್ಕರಿಸಿ ಹೋಗುತ್ತಿರುವುದು ನಮಗೆ ಇನ್ನಷ್ಟು ಪ್ರೇರಣೆ ನೀಡುತ್ತದೆ ಎಂದು ಕಿರಿಯ ಪಾದಯಾತ್ರಿ ರಾಹುಲ್ ಅನುಭವವನ್ನು ತಿಳಿಸಿದರು.
ಒಳ್ಳೆಯ ಮಳೆಯಾಗಿ ಬೆಳೆಯಾಗಲಿ ಎಂದು ಪಾದಯಾತ್ರೆಯಲ್ಲಿ ಶ್ರದ್ಧಾ ಭಕ್ತಿಯಿಂದ ಭಾಗವಹಿಸುತ್ತಿದ್ದೇನೆ ದೇಹ ಮತ್ತು ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬಿರಿದೆ. ರಕ್ತ ಶುದ್ಧಿಯಾಗುತ್ತದೆ. ದೇಹ ಹಗುರವಾಗಿರುತ್ತದೆ ಎಂದು ನಂಜುಂಡಪ್ಪ ಹೇಳುತ್ತಾರೆ.
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…