ಕೊಡಗು ಜಿಲ್ಲೆಯ ವಿವಿಧೆಡೆ ಮಾದಕ ವಸ್ತು ಸರಬರಾಜು, ಮಾರಾಟ ಮತ್ತು ಬಳಕೆಯ ವಿರುದ್ದ ಸಮರ ಸಾರಿರುವ ಪೊಲೀಸ್ ಇಲಾಖೆ ಈಗಾಗಲೇ ಹಲವು ಕಾರ್ಯಾಚರಣೆ ನಡೆಸಿ ಈ ದಂಧೆಯಲ್ಲಿ ತೊಡಗಿರುವವರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ಈ ನಡುವೆ ವ್ಯಕ್ತಿಯೊಬ್ಬ ಕಾರಾಗೃಹದಲ್ಲಿ
ವಿಚಾರಣಾ ಬಂಧಿಯನ್ನು ನೋಡುವ ನೆಪದಲ್ಲಿ ಬಂದು ನಿಷೇಧಿತ ಮಾದಕ ವಸ್ತುವನ್ನು ಸರಬರಾಜು ಮಾಡಲು ಯತ್ನಿಸಿ ತಗಲಾಕಿಕೊಂಡು ಕೈಗೆ ಕೋಳ ಹಾಕಿಸಿಕೊಂಡಿದ್ದಾನೆ.
*ಪ್ರಕರಣದ ವಿವರ*
ದಿನಾಂಕ 04-03-2025 ರಂದು ಕಣ್ಣೂರು ಜಿಲ್ಲೆ ತಲಚೇರಿ ಮೂಲದ ಸುರಬೀಲ್ (26) ಎಂಬಾತ ಮಡಿಕೇರಿಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಬಂಧಿಯಾಗಿರುವ ಸನಮ್ ಎಂಬುವವನ ಸಹೋದರ ಎಂದು ಹೇಳಿಕೊಂಡು ಆತನ ಸಂದರ್ಶನಕ್ಕಾಗಿ ಬಂದಿದ್ದ.
ಹಾಗೇ ಬರುವಾಗ ಸನಮ್ ಗಾಗಿ ದಿನನಿತ್ಯ ಬಳಕೆಯ ಸಾಮಾಗ್ರಿಗಳಾದ ಟೂತ್ ಪೇಸ್ಟ್, ಟೂತ್ ಬ್ರಷ್, ಮೆಡಿಮಿಕ್ಸ್ ಸೋಪ್, ಡಕ್ಟಾರ್ ವಾಶರ್ ಬಟ್ಟೆ ಸೋಪ್, ನವರತ್ನ ಆಯಿಲ್ ಮತ್ತು ಕಾರ್ತಿಕಾ ಶ್ಯಾಂಪ್ ಗಳನ್ನು ತಂದಿದ್ದ.
ಆದರೆ, ಇವುಗಳನ್ನು ಸನಮ್ ಗೆ ನೀಡುವ ಮೊದಲು ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ಸಂಜಯ್ ಜತ್ತಿ ಅವರು ಪರಿಶೀಲಿದಾಗ ಟೂತ್ ಪೇಸ್ಟ್ ಟ್ಯೂಬ್ ನ ಒಳಗೆ ಟೂತ್ ಪೇಸ್ಟ್ ನ ಬದಲು ಕಪ್ಪು ಬಣ್ಣದ ಅಮಲು ಪದಾರ್ಥವನ್ನು ತುಂಬಿರುವುದು ಪತ್ತೆ ಆಗಿದೆ.
ಹೀಗಾಗಿ, ಈತನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ಸಂಜಯ್ ಜತ್ತಿ ಅವರು ದೂರು ನೀಡಿದ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 20(b)(ii) (A) NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ 24 ಗ್ರಾಂ ಹ್ಯಾಶಿಶ್ ನಿಷೇಧಿತ ಮಾದಕ ವಸ್ತುವಿನೊಂದಿಗೆ ಆರೋಪಿ ಸುರಬೀಲ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಯಾವುದು ನ್ಯಾಯ...... ಅಕ್ರಮ ವಲಸಿಗರು, ಬುಲ್ಡೋಜರ್ ಸಂಸ್ಕೃತಿ, ಭ್ರಷ್ಟ ಆಡಳಿತ ವ್ಯವಸ್ಥೆ, ಕೆಟ್ಟ ರಾಜಕೀಯ, ತಲೆಬುಡವಿಲ್ಲದ ಗಾಳಿ ಸುದ್ದಿಗಳು, ವಿವೇಚನೆಯಿಲ್ಲದ…
ಒರಿಸ್ಸಾದಿಂದ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯಲ್ಲಿ ಕೆಲಸಕ್ಕೆಂದು ಬಂದು ಹೊಸ ವರ್ಷ ದಿನದಂದೇ ತನ್ನ ಸ್ನೇಹಿತನಿಂದಲೇ ಕೊಲೆಯಾದ್ನಾ ಯುವಕ....? 2025ರ ಡಿಸೆಂಬರ್ 31…
ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ 2025ನೇ ಸಾಲಿನಲ್ಲಿ 300ಕ್ಕೂ ಹೆಚ್ಚು ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸುವ ಮೂಲಕ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳಲ್ಲಿ…
ಇಂದು ಹೊಸ ವರ್ಷ ಹಿನ್ನೆಲೆ 800 ವರ್ಷಗಳ ಇತಿಹಾಸಯುಳ್ಳ ಆವತಿ ತಿಮ್ಮರಾಯಸ್ವಾಮಿ ಬೆಟ್ಟದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ…
ಹೊಸ ವರ್ಷದ ಮೊದಲ ದಿನವಾದ ಇಂದು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದು ನಮ್ಮ ಪದ್ಧತಿ. ಹಿಂದೂ ಪದ್ಧತಿಯಲ್ಲಿ ಯುಗಾದಿ ಹೊಸ ವರ್ಷವಾಗಿದ್ದರೂ,…
ಇಂದು ಬೆಂಗಳೂರಿನ ಎಸ್ಪಿ ಕಚೇರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಚಂದ್ರಕಾಂತ್ ಎಂ.ವಿ ಅಧಿಕಾರ ವಹಿಸಿಕೊಂಡಿದ್ದಾರೆ.... ಬೆಂಗಳೂರು…