ನಗರದ ಸಂಜಯ್ ನಗರದಲ್ಲಿ ಜು.14 (ಭಾನುವಾರ) ಕನ್ನಡಪಕ್ಷದ ಸದಸ್ಯತ್ವ ನೋಂದಣೆ ಅಭಿಯಾನ ಕಾರ್ಯಕ್ರಮ ನಡೆಯಲಿದೆ ಎಂದು ಕನ್ನಡ ಪಕ್ಷದ ಮುಖಂಡರಾದ ಸಂಜೀವ್ ನಾಯಕ ಹೇಳಿದರು.
ನಗರದ ಕನ್ನಡ ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಸದಸ್ಯತ್ವ ನೋಂದಣೆ ಕುರಿತು ಪತ್ರಿಕಾ ಗೋಷ್ಠಿ ನಡೆಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ 30 ವರ್ಷಗಳಿಂದ ಕನ್ನಡ ಪಕ್ಷ ಸದೃಢವಾಗಿದ್ದು, ತನ್ನದೇ ಆದ ಕೊಡುಗೆಯನ್ನು ತಾಲೂಕಿಗೆ ನೀಡುತ್ತಾ ಬಂದಿದೆ. ತಾಲೂಕಿನಲ್ಲಿ ರಾಷ್ಟೀಯ ಪಕ್ಷಗಳ ನಡುವೆಯೂ ಗ್ರಾಮ ಪಂಚಾಯ್ತಿಯಿಂದ ಹಿಡಿದು ನಗರ ಸಭೆ ಸದಸ್ಯರ ಚುನಾವಣೆ ವರೆಗೂ ಸ್ಪರ್ಧಿಸಿ ಗೆಲುವುಕಂಡಿದೆ. ಮುಂಬರುವ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಿನಿಂದಲೇ ಕನ್ನಡ ಪಕ್ಷವನ್ನು ಗಟ್ಟಿಯಾಗಿ ಬೆಳೆಸುವ ನಿಟ್ಟಿನಲ್ಲಿ ಸದಸ್ಯತ್ವ ನೋಂದಣೆ ಅಭಿಯಾನ ನಡೆಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಕನ್ನಡ ಪಕ್ಷದ ರಾಜ್ಯ ಮುಖಂಡರಾದ ಪುರುಷೋತ್ತಮ್ ಆಗಮಿಸಲಿದ್ದು, ರೈತ ಸಂಘದ ಪ್ರಮುಖರಾದ ಸುಲೋಚನಾ ವೆಂಕಟರೆಡ್ಡಿ ಅವರು ಭಾಗವಹಿಸಲಿದ್ದಾರೆ ಎಂದರು.
ಈ ವೇಳೆ ಕನ್ನಡ ಪಕ್ಷದ ಮುಖಂಡರಾದ ಡಿ.ಪಿ ಆಂಜನೇಯ ಮಾತನಾಡಿ, ತಾಲೂಕಿನಲ್ಲಿ ಕನ್ನಡ ಪಕ್ಷ ಮೂರ ದಶಕಗಳಿಂದ ಎಲ್ಲ ಚಳುವಳಿಯಲ್ಲಿ ಮುಕ್ತವಾಗಿ ಭಾಗವಹಿಸಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಬೇಧಬಾವವಿಲ್ಲದೇ ದಲಿತ ಸಮುದಾಯದ ಮುಖಂಡರು, ರೈತ ಸಂಘದ ಮುಖಂಡರು ಹಾಗೂ ಕನ್ನಡ ಭಾಷೆಯನ್ನು ಅಭಿಮಾನಿಸುವ ಪ್ರತಿಯೊಬ್ಬರು ಕೂಡ ಆಗಮಿಸಿ ಕನ್ನಡ ಪಕ್ಷದ ಸದಸ್ಯತ್ವವನ್ನು ಪಡೆಯಬಹುದೆಂದು ನಮ್ಮದು ಕೇವಲ ಭಾಷೆ. ಪ್ರಾದೇಶಿಕತೆ ಹೋರಾಟಕ್ಕೆ ಸೀಮಿತವಾಗದೆ, ಎಲ್ಲಾ ಚಳುವಳಿ ಯಲ್ಲಿ ಭಾಗವಹಿಸಿ ಜನ ಸಾಮನ್ಯನ ಧ್ವನಿಯಾಗಬೇಕೆಂದು ಪಕ್ಷ ಸಿದ್ದಾಂತವಾಗಿದೆ ಎಂದರು
ಈ ವೇಳೆ ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಪಕ್ಷದ ಅಧ್ಯಕ್ಷರಾದ ವೆಂಕಟೇಶ್, ಉಪಾಧ್ಯಕ್ಷ ಗುರುಮೂರ್ತಿ, ಮುಖಂಡರಾದ ಬೋರೇಗೌಡ, ಪರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ದೊಡ್ಡಬಳ್ಳಾಪುರ ನಗರದ ಶಾಲಾ ಆವರಣದ ಸುತ್ತಮುತ್ತ ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಏ.4ರಂದು ದೊಡ್ಡಬಳ್ಳಾಪುರ…
ನಾನು ವೃತ್ತಿಯಲ್ಲಿ ವಕೀಲನಾಗಿದ್ದೇನೆ. ವಕೀಲ ವೃತ್ತಿಯಲ್ಲಿ ಬಂದಂತಹ ಹಣದಿಂದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ದಡಘಟ್ಟಮಡಗು ಸಮೀಪ ಸರ್ವೇ ನಂ…
"ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ " - ಡಾಕ್ಟರ್ ಬಾಬಾ ಸಾಹೇಬ್…
Cheap Emotional Support Animal Letter: Your Guide Understanding Cheap Emotional Support Animal Letters In recent…
Understanding ESA Letters for Mental Health Support The Role of ESA Letters in Mental Health…
ತಲಾ ಆದಾಯದಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ. ಆದ್ದರಿಂದ ದೇಶಕ್ಕೆ ಕಾಂಗ್ರೆಸ್ ಬೇಕು. ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ…