Categories: ಲೇಖನ

ಜೀವನದ ಪಯಣ ಅತ್ಯಂತ ದೀರ್ಘವೇ ….?

ಬದುಕೊಂದು ದೂರದ ಪಯಣ.
ತುಂಬಾ ತುಂಬಾ ದೂರ ನಿರಂತರವಾಗಿ ನಡೆಯಬೇಕು ಮರೆಯಾಗುವ ಮುನ್ನ………………

Life is Short ,
Make it Sweet…………..

ಈ ಎರಡು ವಿಭಿನ್ನ ಹೇಳಿಕೆಗಳನ್ನು ಗಮನಿಸಿ.

ಒಂದು ಬದುಕನ್ನು ದೀರ್ಘ ಅವಧಿಯ ಹೋರಾಟ ಎಂದು ಹೇಳಿದರೆ ಮತ್ತೊಂದು ಬದುಕು ತುಂಬಾ ಚಿಕ್ಕ ಸಮಯದ್ದು ಎಂಬ ಅರ್ಥ ಕೊಡುತ್ತದೆ.

ಹಾಗಾದರೆ ಬದುಕು ದೀರ್ಘವೇ ಅಥವಾ ಕಡಿಮೆ ಸಮಯವೇ ?………

ಭಾರತದ ಈಗಿನ ಸರಾಸರಿ ಆಯಸ್ಸು ಅಧಿಕೃತವಾಗಿ ಸುಮಾರು 63/65 ರ ಆಸುಪಾಸಿನಲ್ಲಿ ಇದೆ. ಅದನ್ನು ಸುಮಾರು 75 ಎಂದು ಭಾವಿಸಿಕೊಳ್ಳೋಣ.

75 ವಯಸ್ಸು ಕೆಲವರಿಗೆ ದೀರ್ಘ ಮತ್ತೆ ಕೆಲವರಿಗೆ ಕಡಿಮೆ ಅದು ಅವರವರ ಜೀವನ ಶೈಲಿ ಮತ್ತು ಮನೋಭಾವ ಅವಲಂಬಿಸಿರುತ್ತದೆ ಎಂದು ಲೋಕಾಭಿರಾಮವಾಗಿ ಹೇಳಬಹುದು.

ಆದರೆ ವಾಸ್ತವ ಏನು. ನಾವು ಬದುಕನ್ನು ದೀರ್ಘವೆಂದು ಪರಿಗಣಿಸಬೇಕೆ ಅಥವಾ ಸಣ್ಣ ಅವಧಿ ಎಂದು ಭಾವಿಸಬೇಕೆ ?

ನನ್ನ ದೃಷ್ಟಿಯಲ್ಲಿ ಬದುಕೊಂದು ದೀರ್ಘ ಪಯಣ. ಜೀವನದಲ್ಲಿ ನಮ್ಮ ಬಳಿ ತುಂಬಾ ತುಂಬಾ ಸಮಯವಿದೆ. ಹುಟ್ಟಿನಿಂದ ಸಾಯುವವರೆಗೆ ಸುಮಾರು ಮುಕ್ಕಾಲು ಶತಮಾನದಷ್ಟು ದೂರದ ಹಾದಿ ಇದೆ.

ನಮ್ಮ ಆಸೆ ಆಕಾಂಕ್ಷೆಗಳು, ಕನಸುಗಳು, ಸವಾಲುಗಳು, ಪ್ರಯೋಗಗಳು, ಸೋಲಿನ ಕುಸಿತ, ಗೆಲುವಿನ ಮೆಟ್ಟಿಲು…….. ಎಲ್ಲವನ್ನೂ ನಿಭಾಯಿಸಲು ಸಾಕಷ್ಟು ಸಮಯವಿರುತ್ತದೆ. ಹಣದ ಕೊರತೆ, ಪ್ರೇಮ ವೈಫಲ್ಯ, ಕೌಟುಂಬಿಕ ವಿಭಜನೆ, ನೈಸರ್ಗಿಕ ವಿಕೋಪ, ವ್ಯವಸ್ಥೆಯ ಶೋಷಣೆ, ನಿರಂತರ ಸೋಲು ಎಲ್ಲವನ್ನು ಎದುರಿಸಲು, ಅನುಭವಿಸಲು ಮತ್ತೆ ಕಟ್ಟಲು ನಮ್ಮ ಬಳಿ ಕಾಲವಿದೆ.

ಇದಕ್ಕೆ ಪ್ರತಿಯಾಗಿ,
ಜೀವನದ ಕಾಲ ತುಂಬಾ ಕಡಿಮೆ ಇದೆ ಎಂದು ಭಾವಿಸಿದಲ್ಲಿ ನಮ್ಮ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇರುವ ಸ್ವಲ್ಪ ಸಮಯದಲ್ಲಿ ಎಲ್ಲವನ್ನೂ ಮಾಡಲು ಹೋಗಿ ಬದುಕಿನ ಸ್ವಾರಸ್ಯವನ್ನೇ ಕಳೆದುಕೊಳ್ಳುತ್ತೇವೆ.

ಬೆಳಗಿನಿಂದ ರಾತ್ರಿಯವರೆಗೆ ವರ್ಷದ 365 ದಿನವೂ ಕೆಲಸದ ಒತ್ತಡಕ್ಕೆ ಸಿಲುಕಿ ನೆಮ್ಮದಿಗಾಗಿ ಹುಡುಕಾಡುವ ಸಾಧ್ಯತೆಯೇ ಹೆಚ್ಚು. ಮಧ್ಯಮ ವರ್ಗದವರಂತೂ ಸ್ವಂತ ಮನೆ, ಮಕ್ಕಳ ಶಿಕ್ಷಣ ಮತ್ತು ಮದುವೆ, ಕಾರು ಅದು ಇದು ಎಂದು ಇಡೀ ಜೀವನ ಅದಕ್ಕಾಗಿಯೇ ಮುಡುಪಿಡುತ್ತಾರೆ. ಭೌತಿಕ ವಸ್ತುಗಳ ಹುಡುಕಾಟವೇ ಜೀವನ ಎಂಬಂತಾಗಿದೆ.

ಅದರಲ್ಲೂ ಈ ಆಧುನಿಕ ವೇಗದ ಯುಗದಲ್ಲಿ ಸಮಯ ಸರಿಯುವುದೇ ತಿಳಿಯುವುದಿಲ್ಲ. ದಿನನಿತ್ಯದ ಒತ್ತಡದಲ್ಲಿ ತಿಂಗಳು – ವರ್ಷಗಳು ಬೇಗ ಬೇಗ ಸಾಗಿದಂತೆನಿಸುತ್ತದೆ.

ಅವಶ್ಯಕತೆಗಳು ಹೆಚ್ಚಾದಂತೆ,
ಆ ಅವಶ್ಯಕತೆಗಳೇ ಅನಿವಾರ್ಯಗಳಾಗಿ,
ಆ ಅನಿವಾರ್ಯಗಳೇ ಬದುಕಿನ ಭಾಗಗಳಾಗಿ,
ಆ ಭಾಗಗಳನ್ನು ಪೂರೈಸಿಕೊಳ್ಳುವುದೇ ಜೀವನದ ಉದ್ದೇಶಗಳಾಗಿ,
ಆ ಉದ್ದೇಶಗಳಿಗಾಗಿಯೇ ಸಮಯವನ್ನು ಮೀಸಲಿಡಬೇಕಾಗಿರುವುದರಿಂದ ಜೀವನದ ಸಮಯ ತುಂಬಾ ಕಡಿಮೆಯಾಗಿದೆ ಎಂದು ಭಾಸವಾಗುತ್ತದೆ.
ನಾವುಗಳ ಅದರಲ್ಲಿಯೇ ಕಳೆದು ಹೋಗುತ್ತಿದ್ದೇವೆ.

ಬದುಕನ್ನು ಒಂದು ನದಿಗೆ ಹೋಲಿಸಬಹುದು. ನದಿ ಹುಟ್ಟಿ ಸಮುದ್ರ ಸೇರುವವರೆಗೆ ದೀರ್ಘವಾಗಿ ಮತ್ತು ನಿರಂತರವಾಗಿ ಚಲಿಸುತ್ತಿರುತ್ತದೆ. ಆ ಹಾದಿಯಲ್ಲಿ ಕೆಲವೊಮ್ಮೆ ವಿಶಾಲವಾಗಿ, ಮತ್ತೆ ಕೆಲವು ಸಲ ಇಕ್ಕಟ್ಟಾದ ಜಾಗದಲ್ಲಿ, ಹಲವೊಮ್ಮೆ ರಭಸದಿಂದ, ಮತ್ತೆ ಪ್ರಶಾಂತತೆಯಿಂದ ಅನೇಕ ಎಡರು ತೊಡರುಗಳನ್ನು ಎದುರಿಸಿ ಸಾಗುತ್ತದೆ.
ಕೆಲವೊಮ್ಮೆ ಮನುಷ್ಯ ಪ್ರಾಣಿ ತನ್ನ ಸ್ವಾರ್ಥಕ್ಕಾಗಿ ಅಣೆಕಟ್ಟು ಕಟ್ಟಿ ಅದನ್ನು ಬಂಧಿಸುತ್ತಾನೆ. ಆಗಲೂ ನದಿ ಸಮುದ್ರ ಸೇರುವ ತವಕದಿಂದ ತನ್ನ ಸಮಯಕ್ಕೆ ಕಾಯುತ್ತದೆ ಅದು ಎಷ್ಟೇ ದೀರ್ಘ ಸಮಯವಾದರೂ…….

ಆದರೂ,
ಬದುಕನ್ನು ಹೀಗೆ ಎಂದು ನಿರ್ಧರಿಸುವುದು ಕಷ್ಟ. ಆದರೆ ಜೀವನವನ್ನು ಆಗಾಗ ಪುನರ್ ವಿಮರ್ಶೆಗೆ ಒಳಪಡಿಸಿ ನೆಮ್ಮದಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿರಬೇಕು.

ಏಕೆಂದರೆ ಬದುಕೊಂದು ಸುದೀರ್ಘ ಪಯಣ ಅನಂತದೆಡೆಗೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಬಾಣಂತಿ ಹಾಗೂ ನವಜಾತ ಗಂಡು ಮಗುವಿನ ಸಾ*ವು..!

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಬಾಣಂತಿ ಹಾಗೂ ಹಸುಗೂಸು ಸಾ*ವಾಗಿದೆ, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪ‌‌ ಮಾಡಿದ್ದಾರೆ.…

1 hour ago

ಬಾಗಲಕೋಟೆಯಲ್ಲಿ ಕಲ್ಲುತೂರಾಟ ಪ್ರಕರಣ: ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಬಾಗಲಕೋಟೆಯಲ್ಲಿ ನಡೆದ ಕಲ್ಲುತೂರಾಟ ಘಟನೆಯು ಸಮಾಜದ ಶಾಂತಿ, ಸೌಹಾರ್ದತೆಗೆ ಮಾರಕ. ಇದನ್ನು ನಾನು ಮತ್ತು ನಮ್ಮ ಸರ್ಕಾರ ಬಲವಾಗಿ ಖಂಡಿಸುತ್ತದೆ.…

2 hours ago

ಪ್ರತಿಭಟನೆ – ಮುಷ್ಕರ – ಮುತ್ತಿಗೆ – ಚಳವಳಿ – ಬಂದ್ – ಸತ್ಯಾಗ್ರಹ – ಹರತಾಳ – ಅಮರಣಾಂತ ಉಪವಾಸ – ಜೈಲ್ ಭರೋ ..

ಪ್ರತಿಭಟನೆ - ಮುಷ್ಕರ - ಮುತ್ತಿಗೆ - ಚಳವಳಿ - ಬಂದ್ - ಸತ್ಯಾಗ್ರಹ - ಹರತಾಳ - ಅಮರಣಾಂತ…

8 hours ago

ಕೆ.ಜಿ.ಹಳ್ಳಿ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಸೂಚನೆ

‘ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು. ಅವರು ಕೇಳಿದ ಕೆಲಸ ಮಾಡಿಕೊಡಬೇಕು, ವಿಳಂಬ ಮಾಡಬೇಡಿ’ ಎಂದು ಇಂಧನ ಸಚಿವ ಹಾಗೂ ಸರ್ವಜ್ಞ ನಗರ…

19 hours ago

ಯೂರಿಯಾ ಅಕ್ರಮ ದಾಸ್ತಾನು ಗೋದಾಮುಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳ ದಾಳಿ…18 ಲಕ್ಷ ಮೌಲ್ಯದ ಗೊಬ್ಬರ ವಶ..1296 ಮೂಟೆ ಯೂರಿಯಾ ವಶ…

ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದ ಗೋದಾಮುಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 18 ಲಕ್ಷ ಮೌಲ್ಯದ 1296…

19 hours ago

ಖಾಸಗಿ‌ ಕಂಪನಿ ಅವರಣದಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಅಸ್ಥಿಪಂಜರ ಪತ್ತೆ

ಹೊಂಗೆ ಮರದಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ತಲೆ ಬುರುಡೆ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬ್ಯಾಂಕ್ ಸರ್ಕಲ್…

1 day ago