ಅಣಬೆಗಳು ಸಹಜವಾಗಿ ಮಣ್ಣಿನಲ್ಲಿ ಮಾತ್ರ ಬೆಳೆಯುವುದನ್ನ ನಾವು ನೋಡಿದ್ದೇವೆ. ಆದರೆ, ಇಲ್ಲೊಂದು ಜೀವಂತ ಕಪ್ಪೆಯ ಪಕ್ಕೆಯಿಂದ ಅಣಬೆ ಮೊಳಕೆ ಒಡೆದು ಬೆಳೆಯುತ್ತಿರುವುದನ್ನು ಕಂಡುಹಿಡಿಯಲಾಗಿದೆ. ಹಾಗದರೆ ಆ ಕಪ್ಪೆ ಹೆಸರೇನು?, ಅದು ಹೇಗೆ ಬೆಳೆಯುತ್ತದೆ?, ಆ ಕಪ್ಪೆಯನ್ನ ಎಲ್ಲಿ ಕಾಣಬಹುದು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ….
ಜೀವಂತ ಕಪ್ಪೆಯ ಪಕ್ಕೆಯಿಂದ ಅಣಬೆ ಮೊಳಕೆ ಒಡೆದು ಬೆಳೆಯುತ್ತಿರುವುದನ್ನು ಪೋಟೋ ತೆಗೆಯುವ ಮೂಲಕ ಹೊರ ಜಗತ್ತಿಗೆ ಪ್ರಥಮ ಬಾರಿಗೆ ಡಬ್ಲ್ಯೂ ಡಬ್ಲ್ಯೂ ಎಫ್ ಸಂಸ್ಥೆಯ ಹಿರಿಯ ಯೋಜನ ಅಧಿಕಾರಿ ಹಾಗೂ ಕೀಟ, ಜೇಡಗಳ ಸಂಶೋಶಧಕ ವೈ.ಟಿ.ಲೋಹಿತ್ ಪರಿಚಿಸಿದ್ದಾರೆ.
ಈ ವೇಳೆ ಗೋಲ್ಡನ್ ಬ್ಯಾಕ್ಡ್ ಕಪ್ಪೆಯ ಈ ಅಪರೂಪದ ಬೆಳವಣಿಗೆ ಕುರಿತು ಕಂಡುಹಿಡಿದಿದ್ದಾರೆ. ನಂತರ ಕುರಿತ ಸಂಶೋಧನ ಬರಹವನ್ನು ಅಂತಾರಾಷ್ಟ್ರೀಯ ಜರ್ನಲ್ ರೇಪ್ಟೈಲ್ಸ್ ಅಂಡ್ ಅಂಫಿಬಿಯನ್ಸ್ (Reptiles & Amphibians) ನಲ್ಲಿ ಪ್ರಕಟಿಸಿದೆ.
ಪ್ರಾಣಿ ವರ್ಗ ಮತ್ತು ಸಸ್ಯ ವರ್ಗ ಎರಡಕ್ಕೂ ಸೇರದ ಅಣಬೆ ಫಂಗೈ ವರ್ಗಕ್ಕೆ ಸೇರಿದೆ. ಗೋಲ್ಡನ್ ಬ್ಯಾಕ್ಡ್ ಕಪ್ಪೆ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಣಬಹುದಾಗಿವೆ. ಮತ್ತು ಅದರ ಮೈ ಮೇಲೆ ಬೆಳೆದಿರುವ ಮೈಸಿನ ಅಥವಾ ಬಾನೆಟ್ ಮಶ್ರೂಮ್ ಎಂದು ಕರೆಯುವ ಈ ಅಣಬೆ ಕೊಳೆತ ಮರದ ಮೇಲಷ್ಟೇ ಬೆಳೆಯುತ್ತದೆ. ಒಂದು ಜೀವಂತ ಪ್ರಾಣಿಯ ಮೇಲೆ ಅಣಬೆ ಬೆಳೆದಿರುವುದು ವಿಜ್ಞಾನ ಲೋಕದಲ್ಲಿ ಮೊದಲ ದಾಖಲೆಗೆ ಪಶ್ಚಿಮ ಘಟ್ಟಗಳ ಸಾಲು ಸಾಕ್ಷಿಯಾಗಿದೆ.
ಉಭಯಚರ ಜೀವಿಗಳಿಗೆ ಕೆಲವೊಂದು ಫಂಗೈಗಳಿಂದ ಕಾಯಿಲೆಗಳು ಸಂಭವಿಸಿ ಸಾಯುತ್ತವೆ. ಇಂತಹ ಸಮಸ್ಯೆ ಕೀಟ ಮತ್ತು ಜೇಡಗಳಲ್ಲೂ ಕಾಣಬಹುದು. ಆದರೆ, ಜೀವಂತ ಕಪ್ಪೆಯ ಮೇಲಿನ ಅಣಬೆ ಇನ್ನಷ್ಟು ವೈಜ್ಞಾನಿಕ ಸಂಶೋಧನೆಗಳಿಗೆ ದಾರಿಮಾಡಿಕೊಟ್ಟಿದೆ ಎನ್ನುವ ವೈ.ಜಿ.ಲೋಹಿತ್, ಇದರ ನಿಖರ ಕಾರಣವನ್ನು ತಕ್ಷಣಕ್ಕೆ ಊಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಮೊದಲ ಬಾರಿಗೆ ಈ ಫೋಟೋಗಳನ್ನು ಗಮನಿಸಿದ ವಿಜ್ಞಾನಿಗಳು ಮತ್ತು ಪರಿಸರಾಸಕ್ತರು ಇದನ್ನು ಆರ್ಟಿಫಿಷಿಯಲ್ ಇಂಟಲಿಜೆಂನ್ಸ್ (ಎಐ) ಚಿತ್ರ ಅಥವಾ ಫೋಟೋಶಾಪ್ ಎಂದು ಅನುಮಾನಿಸಿದ್ದರು. ನಂತರ ಐ ನ್ಯಾಚುರಲಿಸ್ಟ್ ಮತ್ತು ಇಂಡಿಯಾ ಬಯೋಡೈವರ್ಸಿಟಿ ಪೋರ್ಟಲ್ನಲ್ಲಿ ಒಪ್ಪಿಕೊಂಡ ನಂತರ ಈ ಅನುಮಾನಗಳು ನಿವಾರಣೆಯಾದ ನಂತರ ಅಂತಾರಾಷ್ಟ್ರೀಯ ಜರ್ನಲ್ ರೇಪ್ಟೈಲ್ಸ್ ಅಂಡ್ ಅಂಫಿಬಿಯನ್ಸ್ನಲ್ಲಿ ಪ್ರಕಟಿಸಲಾಗಿದೆ ಎಂದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…
ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ…
ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…