ಜಿಂಕೆಬಚ್ಚಹಳ್ಳಿಯಲ್ಲಿ ಅಷ್ಟಲಕ್ಷ್ಮೀದೇವಿಯವರ ಉತ್ಸವ; ಉತ್ಸವದ ಬಳಿಕ ಹೊರಬೀಳುತ್ತಾ ಬಿ.ಸಿ.ಆನಂದ್ ಕುಮಾರ್ ನಡೆ

ನಾಳೆಯಿಂದ ಎರಡು ದಿನಗಳ ಕಾಲ ತಾಲೂಕಿನ ಜಿಂಕೆ ಬಚ್ಚಹಳ್ಳಿ ಗ್ರಾಮದಲ್ಲಿ ಊರಿನ ಗ್ರಾಮಸ್ಥರಿಂದ ಶ್ರೀ ಅಷ್ಟಲಕ್ಷ್ಮೀದೇವಿಯವರ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಅಷ್ಟಲಕ್ಷ್ಮೀದೇವಿಯವರಾದ ಸಪ್ಪಲ್ಲಮ್ಮ ದೇವಿ, ಪಟಾಲಮ್ಮ ದೇವಿ, ವಿದ್ಯಾಚೌಡೇಶ್ವರಿ ತಾಯಿ, ದೊಡ್ಡಮ್ಮ ತಾಯಿ, ಪಳೇಕಮ್ಮ ತಾಯಿ, ಖಡ್ಗ ಮಹೇಶ್ವರಮ್ಮ ತಾಯಿ, ಮುತ್ಯಾಲಮ್ಮ ತಾಯಿ, ಮಾರಮ್ಮ ತಾಯಿ, ಯಲ್ಲಮ್ಮ ತಾಯಿ, ಕಾಳಮ್ಮ ತಾಯಿ, ಕೆಂಪಮ್ಮ ದೇವಿ, ಗಂಗಮ್ಮ ತಾಯಿ, ಮಹೇಶ್ವರಮ್ಮ ತಾಯಿ, ಚಿಕ್ಕ ಮಾರಮ್ಮ ತಾಯಿ, ನಲ್ಡಿ ಮಾರಮ್ಮ ತಾಯಿ ದೇವರುಗಳನ್ನು ಪೂಜಾ – ಕೈಂಕರ್ಯಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ, ಕುಂಭಾಭಿಷೇಕ ಮೂಲಕ ಕರೆತರಲಾಗುವುದು.

ಬಳಿಕ ಅಷ್ಟ ಲಕ್ಷ್ಮೀದೇವಿಯವರಿಗೆ ಪೂಜೆ ಪುನಸ್ಕಾರಗಳು ನಡೆಯಲಿದ್ದು, ಮಹಾಮಂಗಳಾರತಿ ನೇರವೇರಲಿದೆ. ಸಂಜೆ 6 ಗಂಟೆ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬಳಿಕ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಬುಧವಾರ ವಿಶೇಷ ಪೂಜಾಕಾರ್ಯಕ್ರಮಗಳನ್ನು ಬೆಳಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ. ಬಳಿಕ ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಊರಿನ ಗ್ರಾಮಸ್ಥರು ತಿಳಿಸಿದ್ದಾರೆ.

ಎಲ್ಲರ ಚಿತ್ತ ಬಿ.ಸಿ.ಆನಂದ್ ಕುಮಾರ್ ನಡೆಯತ್ತ:

ಸಾರ್ವತ್ರಿಕ ಚುನಾವಣೆಯ ಬಿಸಿ ಕಾವೇರುತ್ತಿದ್ದು, ಜಿಂಕೆ ಬಚ್ಚಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಬಿ.ಸಿ ಆನಂದ್ ಕುಮಾರ್ ರಾಜಕೀಯ ನಡೆ/ತೀರ್ಮಾನ ತೀವ್ರ ಕುತೂಹಲ ಕೆರಳಿಸಿದೆ. ಊರಿನಲ್ಲಿ ನಡೆಯುತ್ತಿರುವ ದೇವಿಯವರ ಉತ್ಸವದ ಬಳಿಕ ಸೂಕ್ತ ತೀರ್ಮಾನ ಪ್ರಕಟಿಸಿಲಿದ್ದಾರೆ ಎಂದು ಬಿಸಿ ಆನಂದ್ ಕುಮಾರ್ ಆಪ್ತ ಮೂಲಗಳು ತಿಳಿಸಿವೆ.

Ramesh Babu

Journalist

Recent Posts

ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್‌ಸೂಟ್, ಶೂ ವಿತರಣೆ

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…

13 hours ago

ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…

18 hours ago

ಅಕ್ಟೋಬರ್ 2….. ಶಾಸ್ತ್ರಿ ಮತ್ತು ಗಾಂಧಿ……..,

ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…

21 hours ago

ಬೆಂಬಲ ಬೆಲೆಯಡಿ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ಗೆ ಖರೀದಿಗೆ ಕೇಂದ್ರದ ಅನುಮೋದನೆ

2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…

1 day ago

ಸಿಎಂಗೆ ರೈತಪರ ಕಾಳಜಿ ಇಲ್ಲ ಶಾಸಕ ಧೀರಜ್ ಮುನಿರಾಜು ಆರೋಪ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…

1 day ago

ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ – ಡಿಸಿ ಅನುರಾಧ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಬಿಎಲ್‌ಒ ಅಥವಾ…

1 day ago