ಜಾಲಪ್ಪ ಲಯನ್ಸ್ ಸಂಸ್ಥೆಗೆ ಅತ್ಯುತ್ತಮ ಕ್ಲಬ್ ಪುರಸ್ಕಾರ: ಸತತ 4ನೇ ವರ್ಷವೂ 23 ಪಾರಿತೋಷಕಗಳೊಂದಿಗೆ ಅಗ್ರಸ್ಥಾನ ಪಡೆದ ಸಾಧನೆ

ದೊಡ್ಡಬಳ್ಳಾಪುರ ನಗರದ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ಗೆ 2024-25ನೇ ಸಾಲಿನ ಅತ್ಯುತ್ತಮ ಲಯನ್ಸ್ ಸಂಸ್ಥೆ ಪುರಸ್ಕಾರ ಲಭಿಸಿದೆ ಎಂದು ಕ್ಲಬ್‌ನ ನಿರ್ಗಮಿತ ಅಧ್ಯಕ್ಷ ಜೆ.ಆರ್.ರಾಕೇಶ್‌ ಹೇಳಿದರು.

ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಲಯನ್ಸ್ ಜಿಲ್ಲೆ 317ಎಫ್ ವ್ಯಾಪ್ತಿಯ 88 ಲಯನ್ಸ್ ಸಂಸ್ಥೆಗಳ ಪೈಕಿ ಸೇವಾ ಹಾಗೂ ಆಡಳಿತಾತ್ಮಕ ಕಾರ್‍ಯಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, 23 ಮಹತ್ವದ ಪಾರಿತೋಷಕಗಳನ್ನು ಪಡೆದಿದೆ. ಕಳೆದ 4 ವರ್ಷಗಳ ಹಿಂದೆಯಷ್ಟೇ ಸ್ಥಾಪನೆಯಾದ ಈ ಸಂಸ್ಥೆ ಸತತ 4ನೇ ಬಾರಿಯೂ ಅತ್ಯುತ್ತಮ ಲಯನ್ಸ್ ಕ್ಲಬ್ ಪುರಸ್ಕಾರ ಪಡೆಯುತ್ತಿರುವುದು ಮಹತ್ವದ ಸಾಧನೆಯಾಗಿದೆ. ಈ ಹಂತದಲ್ಲಿ ಶ್ರೀ ದೇವರಾಜ ಅರಸ್‌ ಶಿಕ್ಷಣ ಸಂಸ್ಥೆಯ ಸಹಕಾರವೂ ಪ್ರಮುಖವಾದದ್ದು. ಮಹತ್ವದ ಸಾಧನೆಯಲ್ಲಿ ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ತಿಳಿಸಿದರು.

ಲಯನ್ಸ್‌ ಜಿಇಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್‌ ಮಾತನಾಡಿ, ಸತತ 4ನೇ ಬಾರಿಗೆ ಅತ್ಯುತ್ತಮ ಕ್ಲಬ್‌ ಪುರಸ್ಕಾರಕ್ಕೆ ಪಾತ್ರವಾಗಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ. ನಂಬರ್‌ 1 ಉತ್ತಮ ಕ್ಲಬ್‌ ಪುರಸ್ಕಾರ, ಉತ್ತಮ ಅಧ್ಯಕ್ಷ, ಖಜಾಂಚಿ ಪ್ಲಾಟಿನಂ ಪುರಸ್ಕಾರ, ಉತ್ತಮ ಕಾರ್ಯದರ್ಶಿ ಡೈಮಂಡ್‌ ಪುರಸ್ಕಾರ ಸೇರಿದಂತೆ ಜಿಇಟಿ ಸಂಯೋಜಕ, ಡಿಸಿ ಮಧುಮೇಹ, ಮಧುಮೇಹ ತಪಾಸಣೆ, ದೃಷ್ಟಿ ತಪಾಸಣೆ-ಚಿಕಿತ್ಸೆ, ಹಸಿವು ನಿವಾರಣೆ, ಕ್ಲಬ್‌ ವಿಸ್ತರಣೆ, ಮಾನವೀಯ ಸೇವೆ, ಸ್ಕಾಪ್‌ಬುಕ್‌, ಕ್ವೆಸ್ಟ್‌ ವಿಭಾಗಗಳಲ್ಲಿ ಪ್ಲಾಟಿನಂ, ದಂತ ತಪಾಸಣೆ, ಪರಿಸರ, ಫೂಟ್‌ಪಲ್ಸ್‌ ಥೆರಪಿಯಲ್ಲಿ ಡೈಮಂಡ್, ಇಮೇಜ್‌ ಬಿಲ್ಡಿಂಗ್, ಸ್ವಚ್ಛಭಾರತ್‌ ಅಭಿಯಾನ, ಆರೋಗ್ಯ ಶಿಬಿರಗಳು, ಯುವ ಸಬಲೀಕರಣ, ರಕ್ತದಾನ ವಿಭಾಗಗಳಲ್ಲಿ ಸುವರ್ಣ ಹಾಗೂ ಪಶುವೈದ್ಯಕೀಯ ವಿಭಾಗದಲ್ಲಿ ಬೆಳ್ಳಿ ಪುರಸ್ಕಾರಗಳನ್ನು ಸಂಸ್ಥೆ ಪಡೆದಿದೆ ಎಂದು ವಿವರಿಸಿದರು.

ಕ್ಲಬ್‌ನ ನಿಯೋಜಿತ ಅಧ್ಯಕ್ಷ ಪ್ರೊ.ರವಿಕಿರಣ್‌.ಕೆ.ಆರ್ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ಕ್ಲಬ್‌ನ ಸೇವಾ ಕಾರ್ಯಗಳ ಮೂಲಕ ತಲುಪಲಾಗಿದೆ. ಪ್ರಸಕ್ತ ಅವಧಿಯಲ್ಲಿ ಜೆ.ಆರ್.ರಾಕೇಶ್‌ ಅವರ ನೇತೃತ್ವದಲ್ಲಿ ನಡೆಸಿದ ಸೇವಾ ಕಾರ್ಯಗಳು ಗಣನೀಯ. ಮಧುಮೇಹ ವಿಶೇಷ ಕ್ಲಬ್‌ ಆಗಿ ನೊಂದಾಯಿತವಾಗಿರುವ ಸಂಸ್ಥೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸೇವಾ ಕಾರ್ಯಗಳು ನಡೆಯುತ್ತಿವೆ. ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಸಹಯೋಗದಲ್ಲೂ ಮಹತ್ವದ ಯೋಜನೆಗಳು ಅನುಷ್ಠಾನಗೊಂಡಿವೆ. ಜಿಲ್ಲೆ 317ಎಫ್‌ನ ಹಲವು ಮುಖಂಡರ ಮಾರ್ಗದರ್ಶನವೂ ಗಣನೀಯ ಎಂದು ತಿಳಿಸಿದರು.

*ಜಿಲ್ಲಾ ರಾಜ್ಯಪಾಲರಿಂದ ಪುರಸ್ಕಾರ:*

ಬೆಂಗಳೂರಿನ ಹೆಬ್ಬಾಳ ಬಳಿಯ ಯುಎಎಸ್ ಕ್ಯಾಂಪಸ್ ಸಭಾಂಗಣದಲ್ಲಿ ನಡೆದ ಜಿಲ್ಲೆ317ಎಫ್‌ನ 2024-25ನೇ ಸಾಲಿನ ಪುರಸ್ಕಾರ ಪ್ರದಾನ, ಅಭಿನಂದನಾ ಕಾರ್‍ಯಕ್ರಮದಲ್ಲಿ ಜಿಲ್ಲಾ ರಾಜ್ಯಪಾಲ ಸಿ.ಎಂ.ನಾರಾಯಣಸ್ವಾಮಿ, ಅತ್ಯುತ್ತಮ ಲಯನ್ಸ್ ಕ್ಲಬ್ ಬ್ಯಾನರ್ ಅನ್ನು ಸಂಸ್ಥೆಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಇದೇ ವೇಳೆ ವಿವಿಧ 23 ಪಾರಿತೋಷಕಗಳನ್ನು ಪ್ರದಾನ ಮಾಡಲಾಯಿತು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀದೇವರಾಜ್‌ ಅರಸ್‌ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಲಯನ್ಸ್‌ ಜಿಲ್ಲಾ ಮಧುಮೇಹ ಸಂಯೋಜಕ ಎಲ್.ಎನ್.ಪ್ರದೀಪ್‌ಕುಮಾರ್‌, ಲಯನ್ಸ್‌ ಕಾರ್ಯದರ್ಶಿ ಕೆ.ಸಿ.ನಾಗರಾಜ್, ಖಜಾಂಚಿ ಎಸ್.ರವಿಕುಮಾರ್, ನಿಕಟಪೂರ್ವ ಅಧ್ಯಕ್ಷ ಡಾ.ಎಂ.ಶ್ರೀನಿವಾಸರೆಡ್ಡಿ, ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ವಿಜಯ್‌ಕಾರ್ತಿಕ್, ಲಯನ್ಸ್‌ ಉಪಾಧ್ಯಕ್ಷ ಮುನಿರಾಮೇಗೌಡ, ನಿಯೋಜಿತ ಕಾರ್ಯದರ್ಶಿ ಸುಮಾ ಪ್ರಸನ್ನ, ಮುಕೇಶ್, ಪದಾಧಿಕಾರಿಗಳಾದ ವರದರಾಜು, ವೀಣಾ, ಬಾಬುಸಾಬಿ, ಜಿಯಾವುಲ್ಲಾಖಾನ್, ಅರುಂಧತಿ, ಲಕ್ಷ್ಮಿಶ್ರೀನಿವಾಸ್, ಪ್ರಸನ್ನಕುಮಾರ್, ಹರ್ಷ, ಮಂಜುನಾಥ್, ಕಾವ್ಯ, ಮಂಜುಳಾ, ರೋಜಾ, ವೆಂಕಟೇಶ್, ರಮೇಶ್, ರಾಘವೇಂದ್ರಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಕೆ.ಸಿ.ವ್ಯಾಲಿಯಿಂದ ಜಿಲ್ಲೆಯ ರೈತರ ಬದುಕು ಹಸನು- ಕಾಂಗ್ರೆಸ್‌ ಮುಖಂಡ ಜನಪಹಳ್ಳಿ ನವೀನ್‌

ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್‌ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…

18 minutes ago

ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು  ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…

34 minutes ago

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆ: ಮಕ್ಕಳು, ಶಿಕ್ಷಕ ಭಾವುಕ

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…

3 hours ago

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.‌ ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…

11 hours ago

ಚುನಾವಣಾ ಫಲಿತಾಂಶದ ವಿಶ್ಲೇಷಣೆ…..

ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…

13 hours ago

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್: ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸಲು ಸಭೆ

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…

24 hours ago