ಜಗದ್ವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ: ಲಕ್ಷಾಂತರ ಭಕ್ತರು ಭಾಗಿ

ಜಗದ್ವಿಖ್ಯಾತ​‌ ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದ್ದು, ಈ ಭವ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಲಕ್ಷಾಂತರ ಭಕ್ತರು ಒಡಿಶಾದ ಪುರಿಯತ್ತ ಆಗಮಿಸುತ್ತಿದ್ದಾರೆ.

ವಿಶ್ವದಲ್ಲಿಯೇ ಪ್ರಸಿದ್ಧವಾದ ಪುರಿ ಜಗನ್ನಾಥ ರಥಯಾತ್ರೆ ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯಾ ದಿನ ಆರಂಭವಾಗಿ ದಶಮಿಯಂದು ಪೂರ್ಣಗೊಳ್ಳುತ್ತದೆ.

ಒಡಿಶಾ ರಾಜ್ಯದ ಕರಾವಳಿ ನಗರವಾದ ಪುರಿಯಲ್ಲಿ 12ನೇ ಶತಮಾನದಲ್ಲಿ ಈ ಜಗನ್ನಾಥ ದೇವಾಲಯವನ್ನು ನಿರ್ಮಿಸಲಾಯ್ತು. ವಿಷ್ಣುವಿನ ಅವತಾರವಾದ ಜಗನ್ನಾಥ, ಆತನ ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರಾ ಮೂವರು ಮೂಲ ದೇವರುಗಳಾಗಿ ಇಲ್ಲಿ ನೆಲೆಸಿದ್ದಾರೆ. ಅವರನ್ನು ವಿಶೇಷವಾಗಿ ಪೂಜಿಸುವ ಉದ್ದೇಶದಿಂದ ಇಲ್ಲಿ ಪ್ರತಿ ವರ್ಷ ಭವ್ಯ ರಥೋತ್ಸವವನ್ನು ಆಚರಿಸಲಾಗುತ್ತದೆ. ಈ ದೇವಾಲಯದಲ್ಲಿ ನಡೆಯುವ ಜಗನ್ನಾಥನ 12 ಯಾತ್ರೆಗಳಲ್ಲಿ ಈ ರಥಯಾತ್ರೆ ಅತ್ಯಂತ ಪವಿತ್ರವಾದದ್ದು ಎಂದು ಪರಿಗಣಿಸಲಾಗಿದೆ. ಇದನ್ನು ನೋಡಲು ದೇಶದ ವಿವಿಧ ಭಾಗಗಳಿಂದ ಭಕ್ತರು ಪುರಿಗೆ ಬಂದು ಸೇರುತ್ತಾರೆ.

ಈ ದಿವ್ಯಯಾತ್ರೆಯಲ್ಲಿ ಜಗನ್ನಾಥ ದೇವರು, ಸಹೋದರ ಬಲರಾಮ, ಮತ್ತು ಸಹೋದರಿ ಸುಭದ್ರಾ ಇರಲಿದ್ದಾರೆ. ಬೃಹತ್‌ ರಥಗಳಲ್ಲಿ ಜಗನ್ನಾಥ ದೇವಾಲಯದಿಂದ ಗುಂಡಿಚಾ ದೇವಾಲಯದವರೆಗೆ ಪ್ರಯಾಣ ಬೆಳಸಲಾಗುತ್ತದೆ.

ರಥಗಳ ವಿಶೇಷತೆಗಳು:

ದೇವರು: ಜಗನ್ನಾಥ ರಥದ ಹೆಸರು: ನಂದಿಘೋಷ ಚಕ್ರಗಳು: 18 , ಎತ್ತರ: 46 ಅಡಿ

ದೇವರು: ಬಲರಾಮ ರಥದ ಹೆಸರು: ತಾಳಧ್ವಜ, ಚಕ್ರಗಳು: 16, ಎತ್ತರ: 45 ಅಡಿ

ದೇವರು: ಸುಭದ್ರಾ ರಥದ ಹೆಸರು: ಪದ್ಮಧ್ವಜ,  ಚಕ್ರಗಳು: 14,  ಎತ್ತರ: 42 ಅಡಿ

ಪುರಿ ಜಗನ್ನಾಥ ದೇಗುಲ – ಗುಂಡಿಚಾ ದೇವಾಲಯದವರೆಗೆ 2.5 ಕಿಮೀ ದೇವರು ಸ್ವತಃ ಭಕ್ತರನ್ನು ಭೇಟಿ ಮಾಡಲು ಹೊರಡುವ ಪವಿತ್ರ ಕ್ಷಣ. ಗುಂಡಿಚಾದಲ್ಲಿ 8 ದಿನಗಳ ವಾಸ. ನಂತರ ಮೂಲ ದೇಗುಲಕ್ಕೆ ಹಿಂತಿರುಗುವನ್ನು “ಬಾಹುಡಾ ಯಾತ್ರೆ” ಎಂದು ಕರೆಯುತ್ತಾರೆ.

ರಥಯಾತ್ರೆಯನ್ನು ಜೀವನ ಯಾನ ಮತ್ತು ಆತ್ಮ ವಿಮೋಚನೆಯನ್ನು ವಿವರಿಸುವ ರೀತಿಯಲ್ಲಿ ಆಚರಿಸಲಾಗುತ್ತದೆ. ಪುರಿ ರಥಯಾತ್ರೆಯಲ್ಲಿ ತನ್ನ ಭಕ್ತರನ್ನು ನೋಡಲು ಜಗನ್ನಾಥನೇ ರಥದಲ್ಲಿ ಬರುತ್ತಾನೆ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ಈ ರಥಯಾತ್ರೆಯಲ್ಲಿ ಜಗನ್ನಾಥ ತಾನು ಹುಟ್ಟಿದ ಸ್ಥಳವಾದ ಮಥುರಾಗೆ ಮರಳುತ್ತಾನೆ ಎಂದು ನಂಬಲಾಗಿದೆ. ರಥವನ್ನು ಎಳೆಯುವಾಗ ಹಗ್ಗವನ್ನು ಮುಟ್ಟುವ ಭಕ್ತರಿಗೆ ಆಶೀರ್ವಾದ ಮತ್ತು ಪಾಪ ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆಯಿದೆ.

ಎಲ್ಲಾ ವರ್ಗದ ಜನರನ್ನು ಈ ರಥಯಾತ್ರೆ ಒಂದುಗೂಡಿಸುವುದರಿಂದ ಇದನ್ನು ಐಕ್ಯತೆಯ ಆಚರಣೆ ಎಂದು ಕರೆಯಲಾಗುತ್ತದೆ. ಪುರಿ ರಾಜನಿಂದ ಸೇರಾ ಪನ್ಹಾರಾ ಸಮಾರಂಭವನ್ನು ನಡೆಸಲಾಗುತ್ತದೆ. ಈ ಕಾರ್ಯಕ್ರಮ ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದನ್ನು ಸಾಬೀತುಪಡಿಸುತ್ತದೆ.

ಈ ರಥೋತ್ಸವವು ಕೇವಲ ಉತ್ಸವವಲ್ಲ…..ಭಕ್ತಿಯ ದರ್ಶನ, ಸಂಸ್ಕೃತಿಯ ಉತ್ಸವ…!

Ramesh Babu

Journalist

Recent Posts

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…

9 hours ago

ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಖಂಡನೆ: ನೇಕಾರ ಹೋರಾಟ ಸಮಿತಿಯಿಂದ ಪ್ರತಿಭಟನೆ

ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…

12 hours ago

ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಆರೋಪ: 112 ತುರ್ತು ಸೇವೆ ಸಿಬ್ಬಂದಿಗೆ ಗಾಯ: ಇಬ್ಬರು ಆರೋಪಿಗಳು ವಶಕ್ಕೆ

ದೊಡ್ಡಬಳ್ಳಾಪುರ: ಕುಡಿದ ಮತ್ತಿನಲ್ಲಿ ಪರಸ್ಪರ ಜಗಳವಾಡುತ್ತಿದ್ದವರನ್ನು ಬಿಡಿಸಲು ತೆರಳಿದ್ದ 112 ತುರ್ತು ಸೇವೆಯ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪ…

14 hours ago

ಮ್ಯಾನ್‌ಹೋಲ್ ತುಂಬಿ ಹೆದ್ದಾರಿಗೆ ಹರಿದ ಕೊಳಚೆ ನೀರು

ದೊಡ್ಡಬಳ್ಳಾಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ (ಟಿಬಿ) ವೃತ್ತದಲ್ಲಿ ಮ್ಯಾನ್‌ಹೋಲ್ ತುಂಬಿ ತುಳುಕುತ್ತಿದ್ದು, ಕೊಳಚೆ ನೀರು ಹೆದ್ದಾರಿಗೆ ಹರಿದು ವಾಹನ…

17 hours ago

ಎಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಕಚೇರಿಯ ಕೆಲ ಅಧಿಕಾರಿಗಳು, ಸಿಬ್ಬಂದಿ ನಾಪತ್ತೆ: ಅಧಿಕಾರಿಗಳಿಗಾಗಿ ಕಾಯುತ್ತಿರುವ ಸಾರ್ವಜನಿಕರು

ದೊಡ್ಡಬಳ್ಳಾಪುರ: ನಗರದ ಉಪವಿಭಾಗಾಧಿಕಾರಿ (ಎಸಿ) ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ…

18 hours ago

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಸಲಹೆ

ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…

2 days ago