Categories: ಕೋಲಾರ

ಚೆನ್ನೈ ಕಾರಿಡಾರ್ ರಸ್ತೆಯ ಗುತ್ತಿಗೆದಾರನ ನಿರ್ಲಕ್ಷ್ಯ: ರೈತರ ಜಮೀನುಗಳಿಗೆ ತೊಂದರೆ ಖಂಡಿಸಿ ಜ.23ಕ್ಕೆ ಹೆದ್ದಾರಿ ಬಂದ್

ಕೋಲಾರ: ಚೆನ್ನೈ ಕಾರಿಡಾರ್ ಗುತ್ತಿಗೆದಾರರ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಹಾಳಾಗಿರುವ ಕೆರೆಗಳನ್ನು ವೀಕ್ಷಣೆ ಮಾಡಲು ವಿಶೇಷ ತಂಡ ರಚನೆ ಮಾಡಿ ರೈತರ ಜಮೀನುಗಳಿಗೆ ರಸ್ತೆ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜ.23ರ ಗುರುವಾರ ತಲೆಯ ಮೇಲೆ ಕಲ್ಲು ಇಟ್ಟುಕೊಂಡು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕಳೆದು ಹೊಗಿರುವ ಅಧಿಕಾರಿಗಳನ್ನು ಹುಡುಕಿ ಕೊಡುವಂತೆ ಬಂಗಾರಪೇಟೆ-ಕೋಲಾರ ರಾಜ್ಯ.ಹೆದ್ದಾರಿ ಮುಖ್ಯರಸ್ತೆ ಬೀರಂಡಹಳ್ಳಿ ಗೇಟ್ ಬಂದ್ ಮಾಡಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಹಂಚಾಳ ಗೇಟ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಜಮೀನನ್ನು
ಬಲವಂತದಿಂದ ಕಾನೂನಿನ ಭಯ ಹುಟ್ಟಿಸಿ ಭೂ ಸ್ವಾಧೀನ ಮಾಡಿಕೊಂಡಿರುವ ಅಧಿಕಾರಿಗಳು, ಉಳಿದಿರುವ ಅಲ್ಪಸ್ವಲ್ಪ ಭೂಮಿಗೆ ದಾರಿ ಕಲ್ಪಿಸದೆ ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಜೊತೆಗೆ ರೈತರು ಉಳಿಕೆ ಜಮೀನಿಗೆ ಬರಲು ಕನಿಷ್ಟ 10 ಕಿ.ಮೀ ಸುತ್ತಾಡಿ ಬರುವಂತಹ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆಂದು ಅಧಿಕಾರಿಗಳ ವಿರುದ್ಧ
ಆಕ್ರೋಶ ವ್ಯಕ್ತಪಡಿಸಿದರು.

ಭೂಸ್ವಾಧೀನ ಮಾಡಿಕೊಳ್ಳುವಾಗ ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸುವ ಜೊತೆಗೆ
ರೈತರ ಜೊತೆ ನಾವು ಇದ್ದೇವೆ ಎಂದು ಮಾತು ಕೊಟ್ಟಂತಹ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಭೂಸ್ವಾಧೀನವಾಗಿ ರಸ್ತೆಯೂ ಶೇ.90 ರಷ್ಟು ಕಾಮಗಾರಿ ಮುಗಿದಿದ್ದು,
ರೈತರು ನಮಗೆ ನಮ್ಮ ಹೊಲ ತೋಟಗಳಿಗೆ ಹೋಗಲು ರಸ್ತೆ ಕೊಡಿ ಎಂದರೆ ಹೋಗಿ ರಾಷ್ಟ್ರಪತಿಯನ್ನು ಕೇಳಿಕೊಳ್ಳಿ ಎಂದು ಉತ್ತರ ನೀಡುತ್ತಿರುವುದರಿಂದ ನೊಂದ ರೈತರು
ನ್ಯಾಯ ಸಿಗದೆ ಕಣ್ಣೀರು ಸುರಿಸುವ ಪರಿಸ್ಥಿತಿ ಇದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಒಂದು ಕಡೆ ರಸ್ತೆಯೂ ಇಲ್ಲ. ಮತ್ತೊಂದು ಕಡೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ನಷ್ಟವಾಗಿರುವ ಬೆಳೆ ಪರಿಹಾರವೂ ಇಲ್ಲ. ಮತ್ತೊಂದು ಕಡೆ ಪಿ ನಂಬರ್ ಹೆಸರಿನಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಭೂ ಪರಿಹಾರವೂ ಕೊಡದೆ ರೈತರ ಹೆಸರಿನಲ್ಲಿ ಡಿಬಿಎಲ್
ಗುತ್ತಿಗೆದಾರರಾದ ಸಾಂಭಶಿವ ರಾವ್ ಮತ್ತಿತರರು ಕೋಟಿಕೋಟಿ ಹಣವನ್ನು ನಕಲಿ ದಾಖಲೆಗಳು
ಸೃಷ್ಟಿ ಮಾಡಿಕೊಂಡು ಲೂಟಿ ಮಾಡುತ್ತಿದ್ದಾರೆಂದು ಆರೋಪಿಸಿದರು.

ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ, ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಚೆನ್ನೈ ಕಾರಿಡಾರ್ ಗುತ್ತಿಗೆದಾರರು ಜಿಲ್ಲಾಡಳಿತ ನಿಯಮಗಳನ್ನು ಮೀರಿ ಹತ್ತಾರು ಕೆರೆಗಳಲ್ಲಿ 20 ರಿಂದ 30 ಅಡಿ ಮಣ್ಣನ್ನು ತೆಗೆದು ಬೃಹದಾಕಾರದ ಕಂದಕಗಳನ್ನು ಸೃಷ್ಟಿ ಮಾಡಿ ಕೆರೆ ಸ್ವರೂಪವನ್ನು ಹಾಳು ಮಾಡುವ ಜೊತೆಗೆ ಜಾನುವಾರುಗಳಿಗೆ ಮತ್ತು ರೈತರಿಗೆ
ಯಮಲೋಕ ತೋರಿಸುವಂತೆ ಕೆರೆಗಳನ್ನು ಹಾಳು ಮಾಡಿದ್ದರೂ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು
ಕೆರೆ ಪರಿಶೀಲನೆ ಮಾಡದೆ ಎನ್.ಒ.ಸಿ. ನೀಡಿರುವುದು ದುರಾದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆದಾರರಿಗೆ ಕರೆ ಮಾಡಿದರೆ ಉತ್ತರವಿಲ್ಲ. ಅಧಿಕಾರಿಗಳಿಗೆ ದೂರು ನೀಡಿದರೆ ನೆಪ ಮಾತ್ರಕ್ಕೆ ಕ್ರಮಕೈಗೊಳ್ಳುತ್ತೇವೆಂದು ಗುತ್ತಿಗೆದಾರರ ಜೊತೆ ಶಾಮೀಲಾಗಿ ಲಕ್ಷಲಕ್ಷ ಲಂಚ ಪಡೆದು ಪೂರ್ವಜರು ಕಟ್ಟಿ ಬೆಳೆಸಿದ ಕೆರೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆಂದು
ಅವ್ಯವಸ್ಥೆ ವಿರುದ್ಧ ಕಿಡಿಕಾರಿದರು.

ನಮ್ಮ ಕೆರೆ ಉಳಿವಿಗಾಗಿ ನಮ್ಮ ತೋಟದ ರಸ್ತೆಗಾಗಿ ಹಾಗೂ ರೈತರ ಪರಿಹಾರವನ್ನು ವಿತರಣೆ ಮಾಡದ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಮ್ಮ ಮೂಲಭೂತ, ನ್ಯಾಯಯುತ ಹಕ್ಕನ್ನು ಪಡೆದುಕೊಳ್ಳಲು ಜ.23ರ ಗುರುವಾರ ಬೆಳಗ್ಗೆ 11 ಗಂಟೆಗೆ ಕೋಲಾರ-ಬಂಗಾರಪೇಟೆ
ಮುಖ್ಯರಸ್ತೆ ಬೀರಂಡಹಳ್ಳಿ ಗೇಟ.ರಾಜ್ಯ ಹೆದ್ದಾರಿಯನ್ನು ತಲೆಯ.ಮೇಲೆ ಕಲ್ಲು ಕಣ್ಣಿಗೆ ಬಟ್ಟಿ ಕಟ್ಟಿಕೊಂಡು ಬಂದ್ ಮಾಡಿ ನ್ಯಾಯ ಪಡೆದುಕೊಳ್ಳುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು ಎಂದರು.

ಸಭೆಯಲ್ಲಿ ಮಹಿಳಾ ಜಿಲ್ಲಾಧ್ಯಕ್ಷ ನಳಿನಿಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾ.ಅಧ್ಯಕ್ಷ ಅಪ್ಪೋಜಿರಾವ್, ಲಕ್ಷ್ಮಣ್, ಕಿರಣ್, ಚಾಂದ್ ಪಾಷ, ಪುತ್ತೇರಿ ರಾಜು, ಗಿರೀಶ್, ಮುನಿರಾಜು, ಸುಪ್ರೀಂಚಲ, ತೆರ್ನಹಳ್ಳಿ ಆಂಜಿನಪ್ಪ, ಹೆಬ್ಬಣಿ ಆನಂದರೆಡ್ಡಿ, ವಿನೋದ್, ಗಂಗಾಧರ್, ಶೈಲಜ, ರತ್ನಮ್ಮ, ವೆಂಕಟಮ್ಮ, ಗೌರಮ್ಮ, ಸುಮಿತ್ರ ಮುಂತಾದವರಿದ್ದರು.

Ramesh Babu

Journalist

Recent Posts

ತ್ಯಾಜ್ಯ ಸುರಿಯುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು- ಶಾಸಕ ಧೀರಜ್ ಮುನಿರಾಜು

ದೊಡ್ಡಬಳ್ಳಾಪುರದ ಹಲವು ಭಾಗಗಳಲ್ಲಿ ಕೆಲವು ಕಾರ್ಖಾನೆಗಳು ಕಲುಷಿತ ಕೆಮಿಕಲ್ ತ್ಯಾಜ್ಯ, ಇನ್ನಿತರ ತ್ಯಾಜ್ಯವನ್ನು ಕೆರೆಗಳಿಗೆ, ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದಾರೆ. ಇದರಿಂದ…

5 hours ago

ಮಾತೃ ಹೃದಯಿ ಕರ್ನಾಟಕ ಸರ್ಕಾರದಿಂದ “ಕೂಸಿನ ಮನೆ” ಯೋಜನೆ

ಕೂಸು ಇದ್ದ ಮನಿಗ ಬೀಸಣಿಕೆ ಯಾತಕ ? ಕೂಸು ಕಂದಯ್ಯ ಒಳ ಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ. ನಮ್ಮ…

7 hours ago

ದೊಡ್ಡಬಳ್ಳಾಪುರ ತಾಲೂಕಿನಿಂದ ಜಿಲ್ಲಾಸ್ಪತ್ರೆ ಕೈತಪ್ಪಲ್ಲ: ಕೈತಪ್ಪಲು ನಾನು ಬಿಡೋದಿಲ್ಲ- ತಾಲೂಕಿನಲ್ಲಿ ಜಿಲ್ಲಾಸ್ಪತ್ರೆ  ಕರ್ತವ್ಯ ನಿರ್ವಹಿಸುವಂತೆ ಮಾಡಿಯೇ ತೀರುತ್ತೇನೆ- ಶಾಸಕ ಧೀರಜ್ ಮುನಿರಾಜ್

ದೊಡ್ಡಬಳ್ಳಾಪುರ ತಾಲೂಕಿಗೆ ಮಂಜೂರಾಗಿದ್ದ ಜಿಲ್ಲಾಸ್ಪತ್ರೆಯನ್ನು ದೇವನಹಳ್ಳಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಸುಳ್ಳು ಮಾಹಿತಿ ತಾಲೂಕಿನ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆ…

14 hours ago

ಆಶ್ರಯ ಮನೆಗಳು ಬಲಾಢ್ಯರ ಪಾಲು ಆರೋಪ:

ದೊಡ್ಡಬಳ್ಳಾಪುರ : ಬಡವರು ನಿರ್ಗತಿಕರಿಗೆ ಹಂಚಿಕೆ ಮಾಡಲಾದ ಆಶ್ರಯ ಮನೆಗಳು ಬಲಾಢ್ಯರ ಪಾಲಾಗಿವೆ, ಅಕ್ರಮವಾಗಿ ಮನೆಗಳ ಬೀಗ ಹೊಡೆದು ಅಶ್ರಯ…

15 hours ago

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿವಿಧ ಕಾರ್ಮಿಕ ಸಂಘಟನೆಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ: ಸಭೆಯ ಮುಖ್ಯಾಂಶಗಳು ಇಲ್ಲಿವೆ ಓದಿ…

ಇಂದು ವಿಧಾನಸೌಧ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿವಿಧ ಕಾರ್ಮಿಕ ಸಂಘಟನೆಗಳೊಂದಿಗೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಭೆಯ…

1 day ago

ಯೋಜನಾ ನಿರ್ದೇಶಕ ಮತ್ತು ಗುಮಾಸ್ತ ಕಂ ಲೆಕ್ಕಿಗ ಹುದ್ದೆಗೆ ಅರ್ಜಿ ಆಹ್ವಾನ

ಜಿಲ್ಲಾ ಬಾಲಕಾರ್ಮಿಕ ಯೋಜನೆಯಲ್ಲಿ ಯೋಜನಾ ನಿರ್ದೇಶಕ ಮತ್ತು ಗುಮಾಸ್ತ ಕಂ ಲೆಕ್ಕಿಗ ಹುದ್ದೆಗೆ ಗೌರವಧನ ಆಧಾರದ ಮೇರೆಗೆ ನೇಮಕಾತಿ ಮಾಡಿಕೊಳ್ಳಲು…

1 day ago