ಆಗ್ರಾ: ಆಗ್ರಾದಲ್ಲಿ ಚೀಲದಲ್ಲಿ ಯುವತಿಯ ಶಿರರಹಿತ ಶವ ಪತ್ತೆಯಾದ ಪ್ರಕರಣದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ.
ಆಗ್ರಾದ ಪಾರ್ವತಿ ವಿಹಾರ್‌ನಲ್ಲಿ ಜನವರಿ 24 ರಂದು ಯುವತಿಯ ಶವ ಪತ್ತೆಯಾಗಿತ್ತು. ಮಿಂಕಿ ಶರ್ಮಾ ಎಂಬ ಯುವತಿಯ ಸಾವಿಗೆ ಸಂಬಂಧಿಸಿದಂತೆ ವಿನಯ್ ರಜಪೂತ್ ಎಂಬಾತನನ್ನು ಬಂಧಿಸಲಾಗಿದೆ.
ಯುವತಿ ನಾಪತ್ತೆಯಾಗಿರುವುದಾಗಿ ಕುಟುಂಬಸ್ಥರು ದೂರು ನೀಡಿದ್ದರು. ಪ್ರಮುಖ ರಸ್ತೆಗಳಲ್ಲಿನ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಪ್ರಕರಣಕ್ಕೆ ಸುಳಿವು ಸಿಕ್ಕಿದೆ. ಸಿಸಿಟಿವಿ ದೃಶ್ಯಾವಳಿಗಳಿಂದ ಯುವತಿಯ ಸ್ಕೂಟರ್ ಅನ್ನು ಆಕೆಯ ಸಹೋದ್ಯೋಗಿ ವಿನಯ್ ಬಳಸಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದರು.
12 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಯುವತಿಯೊಂದಿಗೆ ದೀರ್ಘಕಾಲದಿಂದ ಪ್ರೀತಿಸುತ್ತಿದ್ದ ಯುವಕನಿಗೆ ಆಕೆಯ ಮೇಲೆ ಉಂಟಾದ ಅನುಮಾನವೇ ಕೊ*ಲೆಗೆ ಕಾರಣವಾಗಿದೆ.
ಯುವತಿಯನ್ನು ಕಚೇರಿಗೆ ಕರೆಸಿಕೊಂಡು ಇಬ್ಬರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದದ ವೇಳೆ ಯುವತಿಗೆ ಎಂಟಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿ, ನಂತರ ತಲೆ ಕತ್ತರಿಸಿದ್ದಾಗಿ ವಿನಯ್ ರಜಪೂತ್ ಪೊಲೀಸರಿಗೆ ತಿಳಿಸಿದ್ದಾನೆ.
ಯಮುನಾ ಕಾಲೊನಿಯ ನಿವಾಸಿಯಾಗಿದ್ದ ಅದೇ ಖಾಸಗಿ ಕಂಪನಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ, ಬರ್ಬರವಾಗಿ 25 ವರ್ಷದ ಮಿಂಕಿ ಶರ್ಮಾ ಅವರನ್ನು ಹ*ತ್ಯೆ ಮಾಡಿದ್ದಾನೆ.
ಬೆಂಗಳೂರು ನಗರದ ಯಡಿಯೂರು ಕೆರೆ ಸಮೀಪದ ನಿವಾಸಿಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.…
ರಾಯಚೂರು: ಆಸ್ತಿ ಮೇಲಿನ ವ್ಯಾಮೋಹಕ್ಕೆ ಹೆತ್ತ ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಹೃದಯವಿದ್ರಾವಕ ಘಟನೆ ರಾಯಚೂರು…
ಕೋಲಾರ: ರಾಜ್ಯ ಸರ್ಕಾರ 2023ರ ಪಿಟಿಸಿಎಲ್ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಕಂದಾಯ ಇಲಾಖೆ, ನ್ಯಾಯಾಲಯಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ…
ಒಂದು ಸುಂದರ ಸಂಸಾರ ಸಾಲದ ಸುಳಿಗೆ ಸಿಲುಕುವುದು ಎಂದರೆ ಅದು ಕೇವಲ ಆರ್ಥಿಕ ಬಿಕ್ಕಟ್ಟಲ್ಲ; ಅದು ಆ ಮನೆಯ ನೆಮ್ಮದಿಯ…
ವಿವಾಹವಾಗಿ ತಲಾ ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ ಹೊಂದಿದ್ದ ಜೋಡಿಯೊಂದು ದು*ರಂತ ಅಂತ್ಯ ಕಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.…
"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…