ಚೀಟಿ ವ್ಯವಹಾರ ವಂಚನೆ ಆರೋಪ: ಏಳು ಕೋಟಿ ಚೀಟಿ ವ್ಯವಹಾರ ನಡೆಸಿ ಮಹಿಳೆ ಎಸ್ಕೆಪ್: ಹಣ ಕಳೆದುಕೊಂಡ ಜನ ಕಂಗಾಲು

ಚೀಟಿ ವ್ಯವಹಾರ ನಡೆಸುತ್ತಿದ್ದ ಪುಷ್ಪಕಲಾ ಎಂಬುವವರು  ಸುಮಾರು 60 ಮಂದಿಗೆ ಸುಮಾರು 7 ಕೋಟಿ ರೂ. ವಂಚಿಸಿ, ಹಣ ಸಮೇತ ಪರಾರಿಯಾಗಿದ್ದಾರೆ ಎಂಬ ಆರೋಪ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಳಿಬಂದಿದೆ.

ದೊಡ್ಡಬಳ್ಳಾಪುರ ನಗರದ ಮುಕ್ತಾಂಭಿಕ ಬಡಾವಣೆಯ ನಿವಾಸಿ ಈ ಪುಷ್ಪಕಲಾ, ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕಳೆದ ನಾಲ್ದೈದು ವರ್ಷಗಳಿಂದ ಚೀಟಿ ವ್ಯವಹಾರವನ್ನ ನಡೆಸುತ್ತಿದ್ದರು. ಕಳೆದ ನಾಲ್ಕು ವರ್ಷದಿಂದ ಕಟ್ಟುನಿಟ್ಟಾಗಿ ಚೀಟಿ ವ್ಯವಹಾರ ನಡೆಸುವ ಮೂಲಕ ಸುತ್ತಮುತ್ತಲಿನ ಜನರು ನಂಬಿಕೆ ಗಳಿಸಿದ್ದರು. ಮಗಳ ಮದುವೆಗಾಗಿ, ಮನೆ ಕಟ್ಟಲು, ಬ್ಯುಸಿನೆಸ್ ಮಾಡುವ ಕಾರಣಕ್ಕೆಂದು ಸುಮಾರು 250ಕ್ಕೂ ಹೆಚ್ಚು ಜನರು ಪುಷ್ಪಕಲಾ ಬಳಿ ಚೀಟಿ ಹಾಕಿದ್ದರು ಎನ್ನಲಾಗಿದೆ.

ಆಕ್ಟೋಬರ್ 27ರಂದು ಗಂಡ ರುದ್ರಆರಾಧ್ಯ ಜಮೀನು ಕೆಲಸಕ್ಕೆಂದು ಊರಿಗೆ ಹೋಗಿದ್ದಾರೆ. ಮಕ್ಕಳು ಕಾಲೇಜಿಗೆ ಹೋಗಿದ್ದಾರೆ. ಈ ವೇಳೆ ಆಕೆ ಮನೆಯಿಂದ ನಾಪತ್ತೆಯಾಗಿದ್ದಾಳೆ. ಮನೆಯಿಂದ ನಾಪತ್ತೆಯಾದ ಪುಷ್ಪಕಲಾ ಗಂಡನಿಗೆ ವಾಟ್ಸಾಪ್ ನಲ್ಲಿ ಆಡಿಯೋ ಮೆಸೇಜ್ ಕಳಿಸಿದ್ದು, ತನ್ನಗೆ ಯಾರೋ ಮೋಸ ಮಾಡಿದ್ದು, ವಿಷ ಕುಡಿದು ಸಾಯುವುದಾಗಿ ಹೇಳಿದ್ದಾಳೆ. ಗಂಡ ರುದ್ರಆರಾಧ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಹೆಂಡತಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ.

ಪುಷ್ಪಕಲಾ ನಾಪತ್ತೆ ಪ್ರಕರಣ ಚೀಟಿದಾರರ ಆತಂಕಕ್ಕೆ ಕಾರಣವಾಗಿದೆ. ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿ ಸೇರಿದ ಚೀಟಿದಾರರು ಪುಷ್ಪಕಲಾಳ ವಂಚನೆಯನ್ನ ಬಯಲು ಮಾಡಿದ್ದಾರೆ.

ಕನ್ನಡಪರ ಹೋರಾಟಗಾರರಾದ ರಾಮಕೃಷ್ಣ ಮಾತನಾಡಿ, ಚೀಟಿದಾರರಿಗೆ ಧೈರ್ಯ ಹೇಳಿದ ಅವರು, ಬಡ ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ಮಹಿಳೆಯರು, ಗಾರೆ ಕೆಲಸಗಾರರು ತಮ್ಮ ದುಡಿಮೆ ಹಣದೊಂದಿಗೆ ಪುಷ್ಪಕಲಾ ಪರಾರಿಯಾಗಿದ್ದಾರೆ, ಪೊಲೀಸ್ ಠಾಣೆಗೆ ದೂರು ನೀಡಿ ಕಾನೂನು ಕ್ರಮದ ಮೂಲಕ ಬಡವರಿಗೆ ಹಣ ಕೊಡಿಸುವ ಕೆಲಸ ಮಾಡುವುದಾಗಿ ಹೇಳಿದರು.

ನಿವೃತ್ತ ಶಿಕ್ಷಕರಾದ ಗಜೇಂದ್ರ ಮಾತನಾಡಿ, ಕಳೆದ ನಾಲ್ಕು ವರ್ಷದಿಂದ ಪುಷ್ಪಕಲಾ ಶಿಸ್ತಿನಿಂದ ಚೀಟಿ ವ್ಯವಹಾರ ನೆಡೆಸುತ್ತಿದ್ದರು, ಇದೇ ನಂಬಿಕೆ ಮೇಲೆ ನಾನು ಸಹ ನಾಲ್ಕೈದು ಚೀಟಿಗಳ ಹಾಕಿದ್ದೇ, ಚೀಟಿ ಕಂತು ಕಟ್ಟಲು ಪ್ರತಿ ತಿಂಗಳು 1 ಲಕ್ಷಕ್ಕೂ ಹೆಚ್ಚು ಹಣವನ್ನ ಪೋನ್ ಪೇ, ಅಕೌಂಟ್ ಮೂಲಕ ಪಾವತಿ ಮಾಡಿದ್ದೇನೆ, ಆಕೆಯ ವಂಚನೆಯಿAದ ಸುಮಾರು 35 ಲಕ್ಷ ಹಣವನ್ನ ಕಳೆದುಕೊಂಡಿದ್ದೇನೆ. ಇನ್ನೂ ದೊಡ್ಡಬಳ್ಳಾಪುರದಲ್ಲಿ ಅಕ್ರಮ ಚೀಟಿ ದಂಧೆ ನಡೆಯುತ್ತಿದ್ದು ಇವುಗಳಿಗೆ ಕಡಿವಾಣ ಹಾಕಿದ್ದಾಗ ಮಾತ್ರ ಇಂತಹ ವಂಚನೆಗಳನ್ನ ತಡೆಗಟ್ಟ ಬಹುದೆಂದರು.

 ಕೆಲ ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದರು. 2015ರಲ್ಲಿ ಹೊಸ ಚೀಟಿ ಆರಂಭಿಸಿದ್ದರು. ಸುಮಾರು 60 ಮಂದಿ ಪ್ರತಿ ತಿಂಗಳು ಅವರ ಬಳಿ ಚೀಟಿ ಹಣ ಕಟ್ಟುತ್ತಿದ್ದೆವು. ಆದರೆ, ಈ ಬಾರಿ ಅನ್ಯಾಯ ಮಾಡಿದ್ದಾರೆ. ನಾವು ಕೂಲಿ ಮಾಡಿ ಜೀವನ ಸಾಗಿಸುವವರು. ಆದ್ದರಿಂದ ಆರೋಪಿಗಳನ್ನು ಪತ್ತೆ ಮಾಡಿ ತಮ್ಮ ಹಣವನ್ನು ತಮಗೆ ವಾಪಸ್ ಕೊಡಿಸಬೇಕು,” ಎಂದು ಮೋಸ ಹೋದವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

Ramesh Babu

Journalist

Recent Posts

ಆರ್. ನಾರಾಯಣಪ್ಪ ಸ್ಮರಣಾರ್ಥ ತೂಬಗೆರೆಯಲ್ಲಿ ಆರೋಗ್ಯ ಶಿಬಿರ–ಕಬ್ಬಡಿ ಪಂದ್ಯಾವಳಿ: ಶಾಸಕ ಧೀರಜ್ ಮುನಿರಾಜು ಚಾಲನೆ

  ದೊಡ್ಡಬಳ್ಳಾಪುರ: ಸಮಾಜಸೇವೆಗೆ ಹೆಸರಾಗಿದ್ದ ಕೀರ್ತಿ ಶೇಷರಾದ ಆರ್. ನಾರಾಯಣಪ್ಪ ನೆನಪಿಗಾಗಿ, ತಾಲ್ಲೂಕಿನ ತೂಬಗೆರೆ ಗ್ರಾಮದಲ್ಲಿ ಶನಿವಾರ ಉಚಿತ ಆರೋಗ್ಯ…

1 hour ago

ಇಂಟರ್ ನ್ಯಾಷನಲ್ ಟೇಕ್ವಾಂಡೋ ಫೆಡೆರೇಷನ್ ಆಫ್ ಇಂಡಿಯಾ: ಸೌಜನ್ಯ ಮಂಜುನಾಥ್ ಮತ್ತು ಶಶಾಂಕ್ ಮಂಜುನಾಥ್ ಗೆ ಪದಕ

  ಇಂಟರ್ ನ್ಯಾಷನಲ್ ಟೇಕ್ವಾಂಡೋ ಫೆಡೆರೇಷನ್ ಆಫ್ ಇಂಡಿಯಾ (ಐ ಟಿ ಎಫ್) ಅಹಮದಾಬಾದ್, ಗುಜರಾತ್ ನಲ್ಲಿ ನಡೆದ 40th…

2 hours ago

ಸರಳ ವಿವಾಹ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ಧನ ನೀಡಲು ಸ್ವಯಂ ಸೇವಾ…

2 hours ago

ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ: ಮುಖ್ಯೋಪಾಧ್ಯಯ ಸ್ಥಳದಲ್ಲೇ ಸಾವು

ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಸ್ಕೂಲ್ ಹೆಡ್ ಮಾಸ್ಟರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೆಲಮಂಗಲ-ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ…

8 hours ago

ಸಾವಿತ್ರಿಬಾಯಿ ಪುಲೆ ಮತ್ತು ಲೂಯಿಸ್ ಬ್ರೈಲ್…….

ಬಾಳ ಬೆಳಕಿನ ಕಿರಣಗಳನ್ನು ಸೃಷ್ಟಿಸಿದ ಸಾಧಕ ವ್ಯಕ್ತಿತ್ವಗಳಾದ ಶ್ರೀಮತಿ ಸಾವಿತ್ರಿಬಾಯಿ ಪುಲೆ ಮತ್ತು ಲೂಯಿಸ್ ಬ್ರೈಲ್ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುವುದು…

9 hours ago

ಬಳ್ಳಾರಿ ಬ್ಯಾನರ್ ಗಲಾಟೆ ವಿಚಾರ: ನಿನ್ನೆಯಷ್ಟೇ ಬಳ್ಳಾರಿ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಪವನ್ ನೆಜ್ಜೂರ್ ಅಮಾನತು

ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ…

22 hours ago