ಚಿಣ್ಣರ ಕೈಯಲ್ಲಿ ಅರಳಿದ ಬಣ್ಣಬಣ್ಣದ ಚಿತ್ತಾರ

ಪರಿಸರ ಜಾಗೃತಿ ಬಗ್ಗೆ ಎಲ್ಲೆಡೆ ಒಂದು ದೊಡ್ಡ ದನಿ ಕೇಳಿ ಬರುತ್ತಿದೆ. ಮಕ್ಕಳಾದ ನಿಮ್ಮಿಂದಲೆ ಸಣ್ಣ ಬದಲಾವಣೆಯೊಂದಿಗೆ ಪರಿಸರ ಪ್ರಜ್ಞೆ ಜಾಗೃತವಾಗಲಿ ಎಂದು ಶಾಸಕ ಧೀರಜ್ ಮುನಿರಾಜು ಕರೆ ನೀಡಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ನ್ಯಾಷನಲ್ ಪ್ರೈಡ್ ಸ್ಕೂಲ್ ನಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಇಂದಿನ ಯಾಂತ್ರಿಕ ಯುಗದಲ್ಲಿ ಸ್ವಾರ್ಥದಲ್ಲಿ ಮುಳುಗಿದ್ದೇವೆ. ಪರಿಸರ ರಕ್ಷಣೆ ಕೇವಲ ಭಾಷಣಗಳಿಗೆ ಸಿಮೀತ ಎಂಬಾಂತಾಗಿದೆ. ಇದು ಆಗಬಾರದು, ಇದು ಮಕ್ಕಳಿಂದ ಆರಂಭವಾಗಬೇಕು ಎಂದರು.

ದೊಡ್ಡ ಮಟ್ಟದಲ್ಲಿ ಆಗದಿದ್ದರೂ ಸಣ್ಣ ಮಟ್ಟದಲ್ಲಿ ಆರಂಭವಾದರೆ ಮುಂದೊಂದು ದಿನ ಬೃಹತ್ ಆಕಾರ ಪಡೆಯುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ಒಂದು ಗಿಡ ನೆಟ್ಟು ಸುಮ್ಮನಾಗದೆ ಅದನ್ನು ಪೋಷಿಸುವ ಕಾರ್ಯ ಮಾಡಿದರೆ ಪರಿಸರ ಉಳಿವಿಗೆ ಸಣ್ಣ ಕೊಡುಗೆಯಾಗಲಿದೆ ಎಂದರು.

ನಂತರ ತಹಸೀಲ್ದಾರ್ ಮೋಹನಕುಮಾರಿ ಮಾತನಾಡಿ, ಪರಿಸರ ರಕ್ಷಣೆಗೆ ಸರ್ಕಾರ, ಸಂಸ್ಥೆಗಳು ಸಾಕಷ್ಟು ಶ್ರಮಿಸುತ್ತಿದೆ. ಇದರೊಂದಿಗೆ ಮಕ್ಕಳೂ ಕೈಜೋಡಿಸಬೇಕು. ಪುಟ್ಟದೊಂದು ಹೆಜ್ಜೆ ಮುಂದೆ ದೊಡ್ಡ ಕ್ರಾಂತಿಯನ್ನು ಸೃಷ್ಟಿಸಬಹುದು ಎಂದರು.

ಮನೆಗಳ ಬಳಿ ಪ್ರತಿದಿನ ಬರುವ ಕಸದ ವಾಹನಗಳಿಗೆ ಸೂಕ್ತವಾಗಿ ವಿಂಗಡಿಸಿದ ಕಸವನ್ನು ಹಾಕಿ ಇಲ್ಲಿಂದಲೇ ಕಸದ ವೈಜ್ಞಾನಿಕ ವಿಂಗಡಣೆ ಆರಂಭವಾಗುತ್ತದೆ. ಮುಂದೆ ಬೃಹತ್ ಪ್ರಮಾಣದಲ್ಲಿ ಕಸದ ಸಮಸ್ಯೆ ನೀಗುತ್ತದೆ. ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಿ ಎಂದು ಮಕ್ಕಳಿಗೆ ತಿಳಿಸಿದರು.

ನ್ಯಾಷನಲ್ ಪ್ರೈಡ್ ಸ್ಕೂಲ್ ಕಾರ್ಯದರ್ಶಿ ಸತೀಶ್ ಮಾತನಾಡಿ, ಮನೆಯೇ ಮಗುವಿನ ಮೊದಲ ಪಾಠ ಶಾಲೆಯಾದರೆ ಶಾಲೆ ಮಕ್ಕಳ ಎರಡನೇ ಮನೆಯಾಗಿರುತ್ತದೆ. ಮಕ್ಕಳಿಗೆ ವಿಧ್ಯಾಭ್ಯಾಸ, ವೃತ್ತಿಪರ ಕೌಶಲ್ಯಗಳನ್ನು ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂಬುದು ಪ್ರತಿಯೊಬ್ಬ ಪೋಷಕರ ಆಶಯವಾಗಿರುತ್ತದೆ. ಉತ್ತಮ ಶಾಲೆ, ಶಿಕ್ಷಕರು ಮಾತ್ರ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಲು ಸಾಧ್ಯ. ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ನುರಿತ, ಕೌಶಲ್ಯಾಧರಿತ ಶಿಕ್ಷಣವನ್ನು ನೀಡಬಲ್ಲ ಶಿಕ್ಷಕರನ್ನು ಹೊಂದಿದೆ. ಎನ್.ಪಿ.ಎಸ್ ನಲ್ಲಿ ಮಕ್ಕಳ ಕಲಿಕೆಗೆ ಅಗತ್ಯವಾದಂತ ಅತ್ಯುತ್ತಮ ಕೊಠಡಿಗಳು, ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ, ಪೀಠೋಪಕರಣಗಳು, ಶಾಲಾ ಮೈದಾನ ಹೀಗೆ ಮಕ್ಕಳ ಕಲಿಕೆಗೆ ಅಗತ್ಯವಾದ ಪೂರಕ ವಾತಾವರಣವನ್ನು ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗೆ ಶಿಶು ಕೇಂದ್ರಿತ ಶಿಕ್ಷಣ ವ್ಯವಸ್ಥೆ, ರಚನಾತ್ಮಕ ಕಲಿಕೆ, ಕ್ರಿಯಾಶೀಲತೆ ಸೃಜನಾತ್ಮಕತೆ, ಚಟುವಟಿಕೆ ಆಧಾರಿತ ಕಲಿಕೆಯ ಜೊತೆಗೆ ಪಾರದರ್ಶಕತೆ, ಸರ್ವ ಧರ್ಮ ಸಮನ್ವಯತೆ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಮುಖಾಂತರ ಇಂದಿನ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಸಮಕ್ಕೆ ಮೊದಲ ಆದ್ಯತೆ:

ಬೆಳೆಯುವ ಮಕ್ಕಳಲ್ಲಿ ಶಿಸ್ತು, ಸಮಯ ಪಾಲನೆ, ತಾಳ್ಮೆ, ಹಿರಿಯರಿಗೆ ಗೌರವ ಹೀಗೆ ಮಕ್ಕಳಿಗೆ ಕಲಿಸಬೇಕಾದಂತ ಅತ್ಯವಶ್ಯಕ ಅಂಶಗಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬದಲಾದ ಅವಶ್ಯಕತೆಗಳಿಗೆ ತಕ್ಕಂತೆ ಮಕ್ಕಳನ್ನು ತಯಾರಿಗೊಳಿಸುವುದು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ನಾಯಕತ್ವದ ಗುಣಗಳನ್ನು ಮಕ್ಕಳಲ್ಲಿ ಬೆಳೆಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದರು. ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಪ್ರಾಮಾಣಿಕ, ಧೈರ್ಯಶಾಲಿ, ಸಹೃದಯದ ಪಾಠ ಮಕ್ಕಳಿಗೆ ಕಲಿಸಲಾಗುತ್ತದೆ ಎಂದರು.

ಪ್ರತಿ ಮಗುವಿನ ಬಾಯಲ್ಲಿ 60 ಶ್ಲೋಕ:

ಕಲಿಕೆ ಎನ್ನುವುದು ಮಕ್ಕಳಿಗೆ ಹೊರೆಯಾಗಬಾರದು ಮಕ್ಕಳು ಸಂತೋಷದಿಂದ ಕಲಿತಾಗ ಮಾತ್ರ ನೂರರಷ್ಟು ಕಲಿಕೆ ಸಾಧ್ಯ. ಎನ್‌ಪಿಎಸ್ ಶಾಲೆಯು ಗ್ಲೋಬಲ್ ಟ್ರಯಂಫ್ ಫೌಂಡೇಶನ್ ಲೀಡರ್ಶಿಪ್ ಶೃಂಗಸಭೆಯಿಂದ ಗುರಿತಿಸಲ್ಪಟ್ಟಿದೆ. ಶಾಲೆಯ ಪ್ರತಿ ಮಗು ಸುಮಾರು 60 ಶ್ಲೋಕಗಳ ಜೊತೆಗೆ ಮುಸ್ಲಿಂ ಧರ್ಮದ ದುವಾ ಮತ್ತು ಕ್ರಿಶ್ಚಿಯನ್ ಧರ್ಮದ ಪ್ರಾರ್ಥನೆಗಳನ್ನು ಸರಸಾಗಟವಾಗಿ ಹೇಳುತ್ತಾರೆ. ಪ್ರತಿಯೊಂದು ಸಾಂಪ್ರದಾಯಿಕ ಆಚರಣೆಯ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ. ಹಾಗಾಗಿ ಸಾಂಪ್ರದಾಯಿಕ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಎಲ್ಲಾ ಧರ್ಮದ ಹಬ್ಬ ಹರಿದಿನಗಳನ್ನು ಆಚರಿಸುತ್ತೇವೆ. ಫಾರ್ಮ್ ಪಾರ್ಟಿ, ಕಿಡ್ಸ್ ಕಾರ್ನಿವಲ್, ಅಕ್ಷರಾಭ್ಯಾಸ ನಮ್ಮ ಶಾಲೆಯ ವಿಶೇಷತೆಯಾಗಿದೆ ಎಂದರು.

ಪರಿಸರ ದಿನ ಅಂಗವಾಗಿ ಚಿತ್ರಕಲಾ ಸ್ಪರ್ಧೆ ಆಯೋಜನೆ

ಪರಿಸರ ದಿನ‌ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ, ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಿದ ಗಣ್ಯರು

ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಸತೀಶ್, ಪ್ರಾಂಶುಪಾಲರಾದ ರಶ್ಮಿ, ಶಿಕ್ಷಕರಾದ ಬಿಂದು, ತೇಜಸ್ವಿನಿ, ಕುಲ್ಸುಮ್ ಮತ್ತು ಸಿಬ್ಬಂದಿ, ಸಾರ್ವಜನಿಕರು ಇದ್ದರು.

Ramesh Babu

Journalist

Recent Posts

18 ದೇವಸ್ಥಾನಗಳಿಗೆ ಕನ್ನ ಹಾಕಿದ್ದ ಖದೀಮರ ಬಂಧನ: ಲಕ್ಷಾಂತರ ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು, ಗುಂಡುಗಳು ವಶ

  18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು‌ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…

3 hours ago

ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಎಂಬಿಎ ವಿದ್ಯಾರ್ಥಿ ಸಾವು

ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…

4 hours ago

ಮೊಬೈಲ್ ನೋಡುತ್ತಾ ಕುಳಿತಿದ್ದ 21 ವರ್ಷದ ಯುವಕನಿಗೆ ಚಾಕು ಇರಿತ: ಚಾಕು ಇರಿತ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…

7 hours ago

ರಾಹುಲ್ ಗಾಂಧಿ ಸೈದ್ಧಾಂತಿಕ ಬದ್ಧತೆಯಿರುವ ವ್ಯಕ್ತಿ….

ರಾಹುಲ್ ಗಾಂಧಿ...... ಬಿಹಾರ ಚುನಾವಣೆಯಲ್ಲಿ, ಸೀಟುಗಳ ಲೆಕ್ಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ನಂತರ ಶ್ರೀ ರಾಹುಲ್ ಗಾಂಧಿಯವರ ನಾಯಕತ್ವದ ಸಾಮರ್ಥ್ಯದ…

9 hours ago

ಇಬ್ಬರು ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಾಲೇಜಲ್ಲಿ ಶೋಕಿ ಮಾಡೋ ಖಯಾಲಿ: ಆದ್ರೆ ಜೇಬಲ್ಲಿ ಕಾಂಚಾಣ ಇಲ್ಲ: ಕಾಸಿಗಾಗಿ ಏನು ಮಾಡಿದ್ರು ಗೊತ್ತಾ……

ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…

22 hours ago

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹೀಲಿನ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ

ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…

23 hours ago