ಕೋಲಾರ: ತಾಲೂಕಿನ ವಕ್ಕಲೇರಿ ಹೋಬಳಿಯ ಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು 2025–26ನೇ ಸಾಲಿನಲ್ಲಿ ₹2.07 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸಿ. ಅಮರೇಶ್ ತಿಳಿಸಿದರು.
ಸಂಘದ ಆವರಣದಲ್ಲಿ ಗುರುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಹಾಲಿಗೆ ಮಾತ್ರ ನಿಗದಿತ ಬೆಲೆ ಇದ್ದು, ಉತ್ಪಾದಕರ ಖಾತೆಗೆ ಪ್ರತಿ 15 ದಿನಕ್ಕೊಮ್ಮೆ ಹಣ ನೇರವಾಗಿ ಸಂದಾಯವಾಗುತ್ತದೆ. ಹೈನುಗಾರಿಕೆ ಅನೇಕ ಕುಟುಂಬಗಳ ಜೀವನಾಧಾರವಾಗಿದ್ದು ಆರ್ಥಿಕ ಮೂಲವಾಗಿದೆ ಉತ್ಪಾದಕರು ಗುಣಮಟ್ಟದ ಹಾಲನ್ನು ಸಂಘಕ್ಕೆ ಪೂರೈಸಿದರೆ ಉತ್ತಮ ಬೆಲೆ ಪಡೆಯಬಹುದು. ಹಾಲಿನ ಗುಣಮಟ್ಟ ಕಾಪಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕೋಮುಲ್ ಉಪ ವ್ಯವಸ್ಥಾಪಕ ಡಾ. ಮಹೇಶ್ ಮಾತನಾಡಿ, ಸಂಘ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಇದಕ್ಕೆ ಹಾಲು ಉತ್ಪಾದಕರು ಹಾಗೂ ಆಡಳಿತ ಮಂಡಳಿಯ ಸಹಕಾರ ಮುಖ್ಯವಾಗಿದೆ. ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಉತ್ಪಾದಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕೋಮುಲ್ ವಿಸ್ತರಣಾಧಿಕಾರಿ ರಾಮಾಂಜಿನಪ್ಪ, ಉಪಾಧ್ಯಕ್ಷ ಸಿ.ಎಂ. ನರೇಶ್, ನಿರ್ದೇಶಕರಾದ ಸಿ.ಸಿ.ಶ್ರೀನಿವಾಸ್, ಸಿ.ನಾಗರಾಜ್, ಸಿ.ವಿ.ಅಚ್ಚಪ್ಪ, ಬಿ.ಎಂ.ಶಾರದದೇವಿ, ಭಾಗ್ಯಲಕ್ಷ್ಮಿ, ವೆಂಕಟಮ್ಮ ಕೆ.ಸುಧಾ ಸವಿತಾ ಕಾರ್ಯದರ್ಶಿ ಸಿ.ಆರ್ ಗೋಪಾಲಪ್ಪ, ಹಾಲು ಪರೀಕ್ಷಕ ಸಿ.ಎಂ ರಮೇಶ್, ಹಿರಿಯ ಮುಖಂಡರಾದ ಬಿ.ಶ್ರೀನಿವಾಸಪ್ಪ, ಸಿ.ಎಂ ಬೈರಪ್ಪ, ವೆಂಕಟರಣಪ್ಪ, ಸಿ.ಎಸ್.ಅಂಜನಗೌಡ, ಸುರೇಶ್, ಶಿವಕುಮಾರ್, ಸಿ.ಎಂ ನಾರಾಯಣಸ್ವಾಮಿ, ಅಪ್ಪಯ್ಯಣ್ಣ, ಲಕ್ಷ್ಮೀಪತಿ, ಸಿ.ಕೆ ನಾರಾಯಣಸ್ವಾಮಿ, ಸೋಮೇಶ್, ಸೇರಿದಂತೆ ಹಾಲು ಉತ್ಪಾದಕರು ಇದ್ದರು.
ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…
ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…
ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…
ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…
2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…