
ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು. ಎಣಿಕೆಯಲ್ಲಿ ಒಟ್ಟು 77,58,904 ನಗದು ಸಂಗ್ರಹವಾಗಿದೆ.
ಭಕ್ತರು ಹುಂಡಿಯಲ್ಲಿ 660 ಗ್ರಾಂ ಬೆಳ್ಳಿ ಹಾಗೂ 3 ಗ್ರಾಂ 18 ಮಿಲಿ ಚಿನ್ನವನ್ನು ಕಾಣಿಕೆಯಾಗಿ ಅರ್ಪಿಸುವ ಮೂಲಕ ಹರಕೆ ತೀರಿಸಿದ್ದಾರೆ.

ನಿಯಮಾನುಸಾರ ಹುಂಡಿಯನ್ನು ತೆರವುಗೊಳಿಸಿ ಕಾಣಿಕೆ ಎಣಿಕೆ ನಡೆಸಲಾಗಿದ್ದು, ಎಣಿಕೆ ಕಾರ್ಯದಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಸಹ ಭಾಗವಹಿಸಿದ್ದರು.
ಹುಂಡಿ ಕಾಣಿಕೆ ಎಣಿಕೆ ಸಂದರ್ಭದಲ್ಲಿ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಪ್ರಧಾನ ಅರ್ಚಕರು, ಪ್ರಾಧಿಕಾರದ ಸದಸ್ಯರು, ಪೊಲೀಸ್ ಸಿಬ್ಬಂದಿ, ದೇವಾಲಯದ ಸಿಬ್ಬಂದಿ ಹಾಗೂ ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.