ಖ್ಯಾತ ವೈಮಾನಿಕ ಎಂಜಿನಿಯರ್ ಡಾ.ಕೋಟ ಹರಿನಾರಾಯಣ ಮತ್ತು ಚೆನ್ನೈನಲ್ಲಿ ಯುಎಸ್ ಕಾನ್ಸುಲೇಟ್ ನ ಕಾನ್ಸುಲ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯೂ. ಹೋಡ್ಜಸ್ ಅವರಿಂದ ಬೆಂಗಳೂರಿನ ಗೀತಂನಲ್ಲಿ MURTI ಸಂಶೋಧನಾ ಕೇಂದ್ರ ಉದ್ಘಾಟನೆ ಮಾಡಿದರು.
ರಾಷ್ಟ್ರೀಯ ವಿಜ್ಞಾನ ದಿನದ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಸಂಶೋಧನೆಯ ಮೂಲಭೂತ ತತ್ವಕ್ಕೆ ಅನುಗುಣವಾಗಿ ಅತ್ಯುತ್ತಮ ಶಿಕ್ಷಣ ಮತ್ತು ಅಭಿವೃದ್ಧಿಗೆ ಪೂರಕವಾಗಿ ಬೆಂಗಳೂರಿನ ಗೀತಂ ಭಾಷಾಂತರ ಉಪಕ್ರಮಗಳ ಸಂಶೋಧನಾ ಕೇಂದ್ರದ ಬಹುಶಿಸ್ತೀಯ ಸಂಶೋಧನಾ ಕೇಂದ್ರವನ್ನು (Multidisciplinary Unit of Research on Translational Initiatives (MURTI) Research Centre) ಇಂದು ಉದ್ಘಾಟನೆ ಮಾಡಲಾಯಿತು.
ಈ ಬಹುಶಿಸ್ತೀಯ ಸಂಶೋಧನಾ ಉಪಕ್ರಮವು ಆವಿಷ್ಕಾರಕ ಮತ್ತು ಅರ್ಥಪೂರ್ಣವಾದ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಸಮಾನ ಮನಸ್ಕರ ಸಹಯೋಗವನ್ನು ಒಟ್ಟುಗೂಡಿಸಲು ನೆರವಾಗುತ್ತದೆ.
ವಿವಿಧ ಕ್ಷೇತ್ರಗಳ ಸಂಶೋಧಕರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ MURTI ಅನೇಕ ಸವಾಲುಗಳನ್ನು ಎದುರಿಸುವ ಸಲುವಾಗಿ ವಿವಿಧ ಹಿನ್ನೆಲೆಗಳ ಸಂಶೋಧಕರ ಸಾಮೂಹಿಕ ಪರಿಣತಿಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ.
ಹಗುರ ಯುದ್ಧ ವಿಮಾನ (LCA) ತೇಜಸ್ ಯೋಜನೆಯ ಕಾರ್ಯಕ್ರಮ ನಿರ್ದೇಶಕ ಮತ್ತು ಮುಖ್ಯ ವಿನ್ಯಾಸಕಾರ ಡಾ.ಕೋಟ ಹರಿನಾರಾಯಣ, ಚೆನ್ನೈನಲ್ಲಿ ಯುಎಸ್ ಕಾನ್ಸುಲೇಟ್ ನ ಕಾನ್ಸುಲ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯೂ. ಹೋಡ್ಜಸ್, ಗೀತಂ ಕುಲಪತಿ ಡಾ.ವೀರೇಂದ್ರ ಸಿಂಗ್ ಚೌಹಾಣ್, ಉಪಕುಲಪತಿ ಪ್ರೊ. ದಯಾನಂದ ಸಿದ್ದವಟ್ಟಂ ಮತ್ತು ಬೆಂಗಳೂರು ಕ್ಯಾಂಪಸ್ ನ ಪ್ರೊ ವಿಸಿ ಪ್ರೊ.ಕೆಎನ್ಎಸ್ ಆಚಾರ್ಯ ಸೇರಿದಂತೆ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು.
ಎಂಜಿನಿಯರಿಂಗ್ ನ್ನು ಮರು-ಎಂಜಿನಿಯರ್ ಅನ್ನಾಗಿ ರೂಪಿಸುವ ಅಗತ್ಯವಿದೆ. ಇದು ಮೂಲಭೂತ ಅಗತ್ಯತೆಯೂ ಆಗಿದೆ. ನಾವು ಇಂಧನವನ್ನು ಉತ್ಪಾದಿಸುವ ವಿಧಾನ ಮತ್ತು ಅದನ್ನು ಸಂಗ್ರಹಿಸುವ ವಿಧಾನ, ರವಾನಿಸುವ ವಿಧಾನ ಹೀಗೆ ಎಲ್ಲವನ್ನೂ ಮರು-ನೋಡಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಚೆನ್ನೈನಲ್ಲಿ ಯುಎಸ್ ಕಾನ್ಸುಲ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯೂ. ಹೋಡ್ಜಸ್ ಅವರು ಮಾತನಾಡಿ, MURTI ಸಂಸ್ಥೆಯು ನಾವೀನ್ಯತೆ ಮತ್ತು ಸಹಭಾಗಿತ್ವಕ್ಕಾಗಿ ನಮಗೆ ಅಗತ್ಯವಿರುವ ಸಂಯೋಜನೆ ಮತ್ತು ಕ್ರಿಯಾತ್ಮಕವಾದ ಸಂಶೋಧನೆಗೆ ಒಂದು ಮಾದರಿಯಾಗಿದೆ. ಇದು ನಮ್ಮ ಆರ್ಥಿಕತೆ ಮತ್ತು ಸಂಬಂಧವನ್ನು ವೃದ್ಧಿಸಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಗೀತಂನ ಬೆಂಗಳೂರು ಕ್ಯಾಂಪಸ್ ನ ಪ್ರೊ ವಿ.ಸಿ ಪ್ರೊ.ಕೆಎನ್ಎಸ್ ಆಚಾರ್ಯ ಅವರು ಮಾತನಾಡಿ, ಭಾರತದಲ್ಲಿನ ಶೈಕ್ಷಣಿಕ ಸಂಸ್ಥೆಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ಣಾಯಕ ಅಂಶಗಳಾಗಿವೆ. ಹೊಸತನವನ್ನು ಬೆಳೆಸುವ ನಿಟ್ಟಿನಲ್ಲಿ, ಜ್ಞಾನವನ್ನು ವೃದ್ಧಿ ಮಾಡುವಲ್ಲಿ ಮತ್ತು ಇತ್ತೀಚಿನ ಬೆಳವಣಿಗೆಗಳೊಂದಿಗೆ ಶೈಕ್ಷಣಿಕ ಪಠ್ಯಕ್ರಮಗಳು ಹಾಗೂ ಕಾರ್ಯಕ್ರಮಗಳನ್ನು ನವೀಕರಿಸುವ ನಿಟ್ಟಿನಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಉದ್ಯಮ, ಸಮಾಜದ ಶ್ರೇಯಸ್ಸಿಗೆ ಅಗತ್ಯವಾದ ಪರಿಹಾರಗಳನ್ನು ಒದಗಿಸುತ್ತದೆ. ವಿದ್ಯಾರ್ಥಿ-ಕೇಂದ್ರಿತ ಶಿಕ್ಷಣದ ದೃಷ್ಟಿಕೋನದಿಂದ ನೋಡಿದರೆ, MURTI ಉಪಕ್ರಮವು ವಿದ್ಯಾರ್ಥಿಗಳಿಗೆ ಕೇವಲ ಕಂಠಪಾಠ ಆಧಾರಿತ ಶಿಕ್ಷಣ ಪದ್ಧತಿಯನ್ನು ಮೀರಿ ಪ್ರಯೋಗಾಲಯದ ರಚನೆಗಳಲ್ಲಿ ನೈಜ ಪ್ರಪಂಚದ ಸಮಸ್ಯೆ ಪರಿಹಾರದ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ವಿಮರ್ಶಾತ್ಮಕವಾದ ಚಿಂತನೆ ಮತ್ತು ಪ್ರಾಯೋಗಿಕ ತಾರ್ಕಿಕ ಕೌಶಲ್ಯಗಳ ಬೆಳವಣಿಗೆಯನ್ನು ಉತ್ತೇಜಿಸುತ್ತಾ, ಪ್ರಯೋಗ ಪ್ರಕ್ರಿಯೆಯ ನೈಸರ್ಗಿಕ ಭಾಗವಾಗಿ ವೈಫಲ್ಯಗಳನ್ನೂ ಸ್ವೀಕರಿಸುವ ಮನಸ್ಥಿತಿಯನ್ನು ಪೋಷಣೆ ಮಾಡುತ್ತದೆ ಎಂದು ತಿಳಿಸಿದರು.
ಉಪಕುಲಪತಿ ಪ್ರೊ.ದಯಾನಂದ ಸಿದ್ದವಟ್ಟಂ ಅವರು ಮಾತನಾಡಿ, ಖ್ಯಾತನಾಮ ವಿದ್ವಾಂಸರು, ಯುವ ಸಂಶೋಧಕರು ಮತ್ತು ಉತ್ಸಾಹಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಅಂತರಶಸ್ತೀಯ ಸಂಶೋಧನಾ ಸಂಸ್ಕೃತಿಯನ್ನು ರಚಿಸುವ ಗುರಿಯನ್ನು MURTI ಹೊಂದಿದೆ. ಸ್ಥಳೀಯ ವಿಷಯವನ್ನು ಬಳಸಿಕೊಂಡು ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇದು ಕೆಲಸ ಮಾಡಲಿದೆ. ವಿಶ್ವವಿದ್ಯಾನಿಲಯವು ಸಂಶೋಧನಾ ಮೂಲಸೌಕರ್ಯಗಳನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಮತ್ತು ದೇಶಾದ್ಯಂತ ಇರುವ ಯುವ, ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿಗಳನ್ನು ಎಕ್ಸಲೆನ್ಸ್ ಫೆಲೋಗಳನ್ನಾಗಿ ನೇಮಕ ಮಾಡಿಕೊಳ್ಳಲು MURTI 100 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ. ಈ ಮೂಲಕ ಬೆಂಗಳೂರಿನ MURTI ಯನ್ನು ಜ್ಞಾನದ ಹಬ್ ಅನ್ನಾಗಿ ಮಾಡುವ ನಿಟ್ಟಿನಲ್ಲಿ MURTI ವಿಜ್ಞಾನ ಪಾರ್ಕ್ ಅನ್ನಾಗಿ ರೂಪಾಂತರಗೊಳಿಸಲು ಉದ್ದೇಶ ಹೊಂದಲಾಗಿದೆ. ಅಲ್ಲದೇ, ಈ ಪ್ರದೇಶದ ಸುಸ್ಥಿರ ಅಭಿವೃದ್ದಿ ನೆರವಾಗಲು ಅಗತ್ಯವಿರುವ ಜ್ಞಾನ ತಂತ್ರಜ್ಞಾನಗಳನ್ನು ತಯಾರು ಮಾಡುವ ಕೇಂದ್ರಬಿಂದುವಾಗಿದೆ. ಆಧುನಿಕ ಸಮಾಜಗಳ ಜಟಿಲವಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ MURTI ಕೇಂದ್ರವು ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ (NCBS), ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರೀಸರ್ಚ್ (NCAR) ಮತ್ತು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಯಂತಹ ವಿಶ್ವವಿಖ್ಯಾತ ಸಂಶೋಧನಾ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಸಹಭಾಗಿತ್ವವನ್ನು ಹೊಂದಲಿದೆ. ಅಲ್ಲದೇ, ಈ ದಿಸೆಯಲ್ಲಿ ಹೆಸರಾಂತ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಉದ್ಯಮಗಳ ನಾಯಕರೊಂದಿಗೂ ಸಹಭಾಗಿತ್ವವನ್ನು ಹೊಂದಲಿದೆ. ಈ ಕೇಂದ್ರವು ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದೊಂದಿಗೆ ಸಹಭಾಗಿತ್ವ ಮಾಡಿಕೊಳ್ಳಲಿದ್ದು, ಬೆಳೆ ರಕ್ಷಣೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದು, ಬೆಳೆ ನಿರ್ವಹಣೆ, ನೀರು ಸಂರಕ್ಷಣೆ ಮತ್ತು ಕೊಯ್ಲೋತ್ತರ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಎಐ-ಬೆಂಬಲಿತ ಕೃಷಿ ಪದ್ಧತಿಗಳನ್ನು ಅನುಸರಿಸಲು ಅಗತ್ಯವಾದ ಸಂಶೋಧನೆಗಳನ್ನು ಕೈಗೊಳ್ಳುವ ಕಾರ್ಯದಲ್ಲಿ ತೊಡಗಲಿದೆ ಎಂದರು.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ MURTI ಕೇಂದ್ರವು ಕೈಗೊಂಡಿರುವ ಸಂಶೋಧನಾ ಉಪಕ್ರಮಗಳ ವಿಶೇಷವಾದ ಒಳನೋಟಗಳನ್ನು ನೀಡಿತು. ಇಲ್ಲಿ ಪಾಲ್ಗೊಂಡಿದ್ದವರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಪರಿಚಯಿಸಲಾಯಿತು ಮತ್ತು ಖ್ಯಾತನಾಮ ಅಧ್ಯಾಪಕರು ಮತ್ತು ಸಂಶೋಧಕರೊಂದಿಗೆ ಪರಸ್ಪರ ಚರ್ಚೆ ನಡೆಸಲು ಅವಕಾಶವನ್ನು ಕಲ್ಪಿಸಲಾಯಿತು.
ಬೆಂಗಳೂರಿನ ಗೀತಂ ವಿಶ್ವದಾದ್ಯಂತ ಸಂಶೋಧಕರು, ನಾವೀನ್ಯಕಾರರು ಮತ್ತು ಸಹಯೋಗಿಗಳನ್ನು ಸ್ವಾಗತಿಸುತ್ತದೆ. ಬಹುಶಿಸ್ತೀಯ ಸಂಶೋಧನೆಯ ಶಕ್ತಿಯನ್ನು ಬಳಸಿಕೊಂಡು ಧನಾತ್ಮಕವಾದ ಬದಲಾವಣೆಯನ್ನು ಹೆಚ್ಚಿಸಲು ಮತ್ತು ಎಲ್ಲರಿಗೂ ಉಜ್ವಲ ಭವಿಷ್ಯವನ್ನು ಸೃಷ್ಟಿಸುವ ನಮ್ಮ ಮಿಷನ್ ನಲ್ಲಿ ಕೈಜೋಡಿಸಲು ಕರೆ ನೀಡುತ್ತದೆ.
ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು…
ದೂಡ್ಡಬಳ್ಳಾಪುರದ ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಕಡೇ ಕಾರ್ತೀಕ ಸೋಮವಾರ ಪ್ರಯುಕ್ತ ಈ ದಿನ ಬೆಳಿಗ್ಗೆ ಗಣಪತಿ…
ದೊಡ್ಡಬಳ್ಳಾಪುರ: ನಾಳೆ (ನ.18) ನಗರದ ಹೊರವಲಯದಲ್ಲಿರುವ 66/11ಕಿವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ತಾಲೂಕಿನ ಹಲವೆಡೆ ವಿದ್ಯುತ್…
18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…
ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…
ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…