ಗಿನ್ನಿಸ್ ದಾಖಲೆಗೆ ಲಗ್ಗೆ ಇಟ್ಟಿರೋ “ದೇವರ ಆಟ ಬಲ್ಲವರಾರು” ಸಿನಿಮಾ ಸಕಲ ಸಿದ್ಧತೆಯಾಗಿ ಚಿತ್ರಿಕರಣಕ್ಕೆ ಸಜ್ಜಾಗಿದೆ. ಈ ಹಿನ್ನೆಯಲ್ಲಿ ಚಿತ್ರದ ನಾಯಕ ನಟಿ ಸಿಂಧೂ ಲೋಕನಾಥ್ ಸತತ ಆರು ತಿಂಗಳಿನಿಂದ ತಾಲಿಮು ನಡೆಸುತ್ತಿದ್ದಾರೆ.
“ಪಿರಂಗಿಪುರ” ಸಿನಿಮಾ ಖ್ಯಾತಿಯ ಜನಾರ್ಧನ್.ಪಿ ಜಾನಿ ನಿರ್ದೇಶನ ಮಾಡುತ್ತಿದ್ದು, ಗಿನ್ನಿಸ್ ದಾಖಲೆಯ ಉದ್ದೇಶ ಇಟ್ಟುಕೊಂಡು ಆರಂಭಿಸಿರೊ ಈ ಸಿನಿಮಾ ಈಗಾಹಲೇ ಮೊದಲ ಹಂತದ ಗಿನ್ನಿಸ್ ದಾಖಲಿಸಿದೆ.
ಮಡಿಕೇರಿಯಲ್ಲಿ “ಫಾಸ್ಟೆಸ್ಟ್ ಫೀಲ್ಮ್ ಸೆಟ್ ಕನ್ಸ್ಟ್ರಕ್ಷನ್” ಮಾಡಿ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ. ಈ ಸಿನಿಮಾಕ್ಕಾಗಿ ಭರ್ಜರಿ ತಯಾರಿಯಲ್ಲಿರೋ ಸಿಂಧೂ ಲೋಕನಾಥ್, ಶೂಟಿಂಗ್ ಸ್ಥಳದಲ್ಲಿ ತಾಲೀಮು ನಡೆಸುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಅನೇಕ ಕೂತೂಹಲ ಅಂಶವನ್ನು ಹೊರಹಾಕಿದೆ.
ಸಿಂಧೂ ಲೋಕನಾಥ್ ಮೂರು ವರ್ಷಗಳ ಬಳಿಕ ಕಮ್‌ಬ್ಯಾಕ್ ಮಾಡಿದ್ದಾರೆ. ಸುದ್ದಿಘೋಷ್ಠಿಯಲ್ಲಿ ಮಾತನಾಡಿ, ಈ ಹಿಂದಿನ ಪಾತ್ರಕ್ಕಿಂತ ಭಿನ್ನವಾಗಿರಲಿದೆ ಎಂದಿದ್ದಾರೆ. ಶೂಟಿಂಗ್ ಲೊಕೇಷನ್, ಪಾತ್ರಕ್ಕೆ ಬೇಕಾದ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ.
ಮಡಿಕೇರಿಯಲ್ಲಿ ಸಂಪೂರ್ಣ ಚಿತ್ರೀಕರಣ ಮಾಡುವ ಪ್ಲಾನ್ ಹಾಕಿಕೊಂಡಿದೆ, ಚಿತ್ರಕ್ಕೆ ನಾಯಕ ನಟನಾಗಿ ಅರ್ಜುನ್ ರಮೇಶ್ ಬಣ್ಣ ಹಚ್ಚುತ್ತಿದ್ದು ಪಾತ್ರಕ್ಕಾಗಿ 14 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. 30 ದಿನಗಳಲ್ಲಿ ಶೂಟಿಂಗ್ ಮುಗಿಸಿ ತೆರೆಗೆ ತರುವ ಈ ಸಾಹಸ ಪ್ರಯತ್ನಕ್ಕೆ ಚಿತ್ರತಂಡ ಸಕಲ ಸಿದ್ಧತೆಯೊಂದಿಗೆ ಸನ್ನದ್ಧವಾಗಿದೆ.
ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…
ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…
ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…
2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಬಿಎಲ್‌ಒ ಅಥವಾ…