
ಕಾಲೇಜು ಶಿಕ್ಷಣ ಇಲಾಖೆ, ಡಾ|| ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಮಲ್ಲೇಶ್ವರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಗಂಟಿಗಾನಹಳ್ಳಿ ಗ್ರಾಮದಲ್ಲಿ ಲಕ್ಷ್ಮೀರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ, ಮೇ.3ರ ಭಾನುವಾರದಂದು ಆಯೋಜನೆ ಮಾಡಲಾಗಿದೆ.
ಇದರ ಅಂಗವಾಗಿ ಬೆಳಗ್ಗೆ 8ರಿಂದ ಸಂಜೆ 8ರವರೆಗೆ ವಾಲಿಬಾಲ್ ಸ್ಪರ್ಧೆ, ಮಧ್ಯಾಹ್ನ 3ಗಂಟೆಯಿಂದ ಸಂಜೆ 5ರವರೆಗೆ ರಂಗೋಲಿ ಸ್ಪರ್ಧೆ, ಸಂಜೆ 7ಗಂಟೆಯಿಂದ ರಾತ್ರಿ 10:30ರವರೆಗೆ ಆರ್ಕೆಸ್ಟ್ರಾ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸ್ಪರ್ಧೆಗಳಲ್ಲಿ ಗೆದ್ದ ಸ್ಪರ್ಧಾರ್ಥಿಗಳಿಗೆ ಸೂಕ್ತ ನಗದು ಬಹುಮಾನ ನೀಡಲಾಗುತ್ತದೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಂಗೋಲಿ ಸ್ಪರ್ಧೆ
ಮೊದಲನೇ ಬಹುಮಾನ 20000/-
ಎರಡನೇ ಬಹುಮಾನ 10000/-
ಮೂರನೇ ಬಹುಮಾನ 5000/-
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನಗಳಿರುತ್ತವೆ.

ವಾಲಿಬಾಲ್ ಪಂದ್ಯಾವಳಿ
ಮೊದಲನೇ ಬಹುಮಾನ 10000/-
ಎರಡನೇ ಬಹುಮಾನ 5000/-
ಮೂರನೇ ಬಹುಮಾನ 2500/-
ಹೆಚ್ಚಿನ ಮಾಹಿತಿಗಾಗಿ ಆಯೋಜಕರಾದ ಗಂಟಿಗಾನಹಳ್ಳಿ ಮುರಳಿ ರಂಗಪ್ಪ 99165 69193 ನ್ನು ಸಂಪರ್ಕಿಸಬಹುದಾಗಿದೆ..
ಈ ವೇಳೆ ಗಂಟಿಗಾನಹಳ್ಳಿ ಗ್ರಾಮಸ್ಥರು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಪ್ರಾಂಶುಪಾಲರು, ಸಹ/ಸಹಾಯಕ ಪ್ರಧ್ಯಾಪಕರು, ಅತಿಥಿ ಉಪನ್ಯಾಸಕರು ಮತ್ತು ಬೋಧಕೇತರ ವರ್ಗ, ಕಾಲೇಜು ವಿದ್ಯಾರ್ಥಿ ವೃಂದ ಇರಲಿದ್ದಾರೆ…