ಭಾರತದ ಯುವ ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್, ನಾರ್ವೆ ಚೆಸ್ ಟೂರ್ನಿಯ 6ನೇ ರೌಂಡ್‌ನಲ್ಲಿ ವಿಶ್ವ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ತನ್ನ ಮೊದಲ ಕ್ಲಾಸಿಕಲ್ ಗೆಲುವು ದಾಖಲಿಸಿ ಇತಿಹಾಸ ಬರೆದಿದ್ದಾರೆ.
ಇದೇ ಮೊದಲ ಬಾರಿ ಕ್ಲಾಸಿಕಲ್ ಗೇಮ್‌ನಲ್ಲಿ ವಿಶ್ವ ನಂ.1 ಚೆಸ್ ಪಟು ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಸೋಲಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.
ಇದರ ಬೆನ್ನಲ್ಲೇ ತಾಳ್ಮೆಕಳೆದುಕೊಂಡಂತೆ ವರ್ತಿಸಿದ ಕಾರ್ಲ್‌ಸನ್ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಒಳಗಾಗಿದ್ದಾರೆ.
ಆ ಸೋಲಿನ ನಂತರ, ಕಾರ್ಲ್ಸನ್ ಸಾಮಾಜಿಕ ಮಾಧ್ಯಮದಲ್ಲಿ ಒಂದು ನಿಗೂಢ ಸಂದೇಶವನ್ನು ಪೋಸ್ಟ್ ಮಾಡಿ, “ನೀವು ರಾಜನ ವಿರುದ್ಧ ಆಡುವಾಗ, ನೀವು ತಪ್ಪಿಸಿಕೊಳ್ಳಬಾರದು” ಎಂದು ಕಾಲೆಳೆದಿದ್ದರು. ಈ ಸಂದೇಶವು ಮ್ಯಾಗ್ನಸ್ ಕಾರ್ಲ್ಸನ್ ಅವರ ಪ್ರಾಬಲ್ಯದ ಸಂಕೇತವಾಗಿತ್ತು. ಆದರೆ ಆರನೇ ಸುತ್ತಿನಲ್ಲಿ ಗುಕೇಶ್ ಅದಕ್ಕೆ ಸೂಕ್ತ ಉತ್ತರವನ್ನು ನೀಡಿದರು. ಬಿಳಿ ಕಾಯಿಗಳೊಂದಿಗೆ ಆಡಿದ 19 ವರ್ಷದ ಗುಕೇಶ್ ಆಟದ ಉದ್ದಕ್ಕೂ ತಾಳ್ಮೆ ಮತ್ತು ಶಿಸ್ತನ್ನು ತೋರಿಸಿದರು.
19 ವರ್ಷದ ಗುಕೇಶ್ ವಿರುದ್ಧದ ಸೋಲನ್ನು ಅರಗಿಸಿಕೊಳ್ಳಲು ಮ್ಯಾಗ್ನಸ್ ಕಾರ್ಲ್ಸನ್ ಸಾಧ್ಯವಾಗಲಿಲ್ಲ. ಅಲ್ಲದೆ ಆಘಾತಕಾರಿ ಸೋಲಿನಿಂದ ವಿಚಲಿತರಾದ ಕಾರ್ಲ್ಸನ್ ಪಂದ್ಯದ ನಂತರ ಮೇಜನ್ನು ಗುದ್ದುವ ಮೂಲಕ ತನ್ನ ಆಕ್ರೋಶವನ್ನು ಹೊರಹಾಕಿದ್ದರು.
ಇನ್ನು ಮ್ಯಾಗ್ನಸ್ ಕಾರ್ಲ್ಸನ್ ಅವರ ಈ ಸೋಲನ್ನು ಅವರ ವೃತ್ತಿಜೀವನದ ಅತಿದೊಡ್ಡ ಸೋಲುಗಳಲ್ಲಿ ಒಂದು ಖ್ಯಾತ ಚೆಸ್ ಗ್ರ್ಯಾಂಡ್ ಮಾಸ್ಟರ್ ಸುಸಾನ್ ಪೋಲ್ಗರ್ ವಿಮರ್ಶಿಸಿದ್ದಾರೆ. ಅದೇ ಸಮಯದಲ್ಲಿ, ನಾರ್ವೆ ಚೆಸ್ ಟೂರ್ನಿಯಲ್ಲಿ ಎರಡನೇ ಬಾರಿಗೆ, ಭಾರತೀಯ ಆಟಗಾರನೊಬ್ಬ ಕ್ಲಾಸಿಕ್ ಸ್ವರೂಪದಲ್ಲಿ ಕಾರ್ಲ್ಸನ್ ಅವರನ್ನು ಸೋಲಿಸಿದ್ದಾರೆ.
ಇದಕ್ಕೂ ಮುನ್ನ ಕಳೆದ ವರ್ಷ ಆರ್ ಪ್ರಜ್ಞಾನಂದ ಅವರು ಮ್ಯಾಗ್ನಸ್ ಕಾರ್ಲ್ಸನ್ ಅವರಿಗೆ ಸೋಲಿನ ರುಚಿ ತೋರಿಸಿದ್ದರು. ಇದೀಗ ಡಿ ಗುಕೇಶ್ ಕೂಡ ವಿಶ್ವದ ನಂಬರ್ 1 ಚೆಸ್ ಚತುರನ ವಿರುದ್ಧ ಸ್ಮರಣೀಯ ಗೆಲುವು ಸಾಧಿಸಿದ್ದಾರೆ.
"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…
"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…
ಬೆಳಗಾವಿಯ ದಟ್ಟ ಅರಣ್ಯ ಪ್ರದೇಶದ ನಡುವೆ ಸಾಗುವ ಚೋರ್ಲಾ ಘಾಟ್ನ ರಸ್ತೆಗಳು ಸಾಮಾನ್ಯವಾಗಿ ಮೌನದಿಂದ ಕೂಡಿರುತ್ತವೆ. ಆದರೆ, ಆ ಮೌನದಲ್ಲೇ…
2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಒಟ್ಟು 131 ಮಂದಿ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದ 8 ಮಂದಿಯು ಈ…
ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರದಲ್ಲಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ರಥಸಪ್ತಮಿ ಅಂಗವಾಗಿ ಇಂದು (ಜ.25) ವೀರಭದ್ರಸ್ವಾಮಿ ಮತ್ತು ಪ್ರಸನ್ನ…
ಪಿಕಪ್ ವಾಹನ, ಆಟೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ…