ಜಸ್ ಪ್ರೀತ್ ಭುಮ್ರಾ ನಾಯಕತ್ವದ ಭಾರತ ತಂಡ ಶನಿವಾರ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದಕ್ವರ್ಥ್ ಲೂಯಿಸ್ ನಿಯಮಾನುಸಾರ 2 ರನ್ ಗಳಿಂದ ಜಯಗಳಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ ತಂಡ ಉತ್ತಮ ಆರಂಭ ಪಡೆಯಿತು. ದೀರ್ಘ ಕಾಲದ ನಂತರ ಪುನರಾಗಮನ ಮಾಡಿದ ಬೂಮ್ರ ಮೊದಲ ಓವರ್ ನಲ್ಲೆ 2 ವಿಕೆಟ್ ಪಡೆಯುವ ಮೂಲಕಅತಿಥೇಯ ತಂಡಕ್ಕೆ ಆಘಾತ ನೀಡಿದರು.
ಇವರ ಜೊತೆಗೆ ತಂಡಕ್ಕೆ ಉತ್ತಮ ಸಾಥ್ ನೀಡಿದ ಪ್ರಸಿದ್ ಕೃಷ್ಣ ಹಾಗೂ ಸ್ಪಿನ್ನರ್ ರವಿ ಬಿಷ್ಣೊಯ್ ತಲಾ ಎರಡು ವಿಕೆಟ್ ಪಡೆಯುವ ಮೂಲಕ ಐರ್ಲೆಂಡ್ ಬ್ಯಾಟರ್ ಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದರು.
ಒಂದೆಡೆ ವಿಕೆಟ್ ಗಳು ಉರುಳುವ ಸಮಯದಲ್ಲಿ ಸಮಯೋಚಿತ ಆಟವಾಡಿದ ಬ್ಯಾರಿ ಮೆಕ್ರಾಥೈ ಆಕರ್ಷಕ ಅರ್ಧ ಶತಕ (51*) ಗಳಿಸುವ ಮೂಲಕ ತಂಡಕ್ಕೆ ಅಸರೆಯದರು. ಇವರ ಅತ್ಯಮೂಲ್ಯ ರನ್ ಗಳ ಮೂಲಕ ತಂಡ 7 ವಿಕೆಟ್ ನಷ್ಟಕ್ಕೆ ಕೇವಲ 139 ರನ್ ಗಳಷ್ಟೆ ಗಳಿಸಲು ಸಾಧ್ಯವಾಯಿತು.
ಸುಲಭದ ಗುರಿ ಬೆನ್ನತ್ತಿದ್ದ ಭಾರತ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ ನಷ್ಟಕ್ಕೆ ತಂಡ 46 ರನ್ ಗಳನ್ನು ಗಳಿಸಿತು. ಆರಂಭಿಕ ಆಟಕ್ಕೆ ಆಘಾತ ನೀಡಿದ ಐರ್ಲೆಂಡ್ ನ ವೇಗಿ ಕ್ರಿಗ್ ಯಂಗ್ 2 ಎಸೆತಗಳಲ್ಲಿ 2 ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ಆಘಾತ ನೀಡಿದರು.
ಭವಿಷ್ಯದ ಉದಯೋನ್ಮುಖ ಆಟಗಾರ ತಿಲಕ್ ವರ್ಮಾ ಮೊದಲ ಎಸೆತದಲ್ಲಿ ಟಕ್ತರ್ ಗೆ ಕ್ಯಾಚ್ ನೀಡುವ ಮೂಲಕ ಶೂನ್ಯ ಮೊತ್ತಕ್ಕೆ ಪೆವಿಲಿಯನ್ ಸೇರಿದರು.
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…
ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…
ಯಲಹಂಕ ತಾಲೂಕಿನ ಜಾಲ ಹೋಬಳಿಯ ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಸಿ. ಗೋವಿಂದಪ್ಪ ಅವಿರೋಧವಾಗಿ…
ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ಮುಕ್ತ ರಾಷ್ಟ್ರ ಎಂದು ಮತ್ತೊಮ್ಮೆ ಸಾಬೀತು ಮಾಡೋಣ…