Categories: ಕೋಲಾರ

ಕೋಮುಲ್ ಕ್ಷೇತ್ರ ವಿಂಗಡಣೆ: ಅಸಮಾಧಾನ ಹೊರಹಾಕಿದ ಮಾಜಿ ನಿರ್ದೇಶಕರು

ಕೋಲಾರ: ಹಾಲು ಒಕ್ಕೂಟದ ಕ್ಷೇತ್ರಗಳ ವಿಂಗಡಣೆ ಸಂಬಂಧ ಏಪಕ್ಷೀಯ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಆರೋಪಿಸಿ ಒಕ್ಕೂಟದ ಮಾಜಿ ನಿರ್ದೇಶಕರಾದ ವಡಗೂರು ಡಿ.ವಿ ಹರೀಶ್ ಹಾಗೂ ಕಾಡೇನಹಳ್ಳಿ ನಾಗರಾಜ್ ನೇತೃತ್ವದಲ್ಲಿ ಕೆಲ ಹಾಲು ಡೇರಿಗಳ ಅಧ್ಯಕ್ಷರು ಸೋಮವಾರ ಕೋಮುಲ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡದರು.

ಕೋಮುಲ್ ಒಕ್ಕೂಟದ ಕಛೇರಿಗೆ ಭೇಟಿದ ಅವರು ಕ್ಷೇತ್ರ ವಿಂಡಗಣೆ ಕುರಿತು ಮಾಹಿತಿ ಕೇಳಿದರು. ಇದಕ್ಕೆ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಮತ್ತು ವ್ಯವಸ್ಥಾಪಕ (ಅಡ್ಮಿನ್) ನಾಗೇಶ್ ಮಾಹಿತಿ ಒದಗಿಸುವಲ್ಲಿ ವಿಫಲರಾದರು. ಯಾವ ಮಾನದಂಡಗಳ ಆಧಾರದ ಮೇರೆಗೆ ಕ್ಷೇತ್ರಗಳನ್ನು ವಿಂಡಗಣೆ ಮಾಡಿದೀರ ಇದನ್ನು ಮೊದಲು ಅಕ್ಷೇಪಣೆಗಳ್ನು ಕರೆದಿದ್ದೀರ ಸಂಘಗಳ ಅಧ್ಯಕ್ಷರಿಗೆ ಪತ್ರಗಳನ್ನು ಕಳುಹಿಸಿದ್ದೀರ ಎಂದು ಪ್ರಶ್ನಿಸಿ, ಹಿಂಬರಹ ನೀಡುವಂತೆ ಪಟ್ಟು ನೀಡಿದರು ಇದಕ್ಕೆ ಉತ್ತರ ನೀಡಲು ಅಧಿಕಾರಿಗಳು ತಡಬಡಿಸಿದರು.

ಈ ಸಂದರ್ಭದಲ್ಲಿ ಮಾಜಿ ನಿರ್ದೇಶಕ ವಡಗೂರು ಡಿ.ವಿ.ಹರೀಶ್ ಮಾತನಾಡಿ, ನಮ್ಮ ಅಧಿಕಾರಾವಧಿ ಮುಗಿದ ನಂತರ ಇಲ್ಲಿನ ಅಧಿಕಾರಿಗಳಿಗೆ ಆಡಿದ್ದೇ ಅಟವಾಗಿದೆ. ಅಧಿಕಾರಿಗಳು ಮಾಡಿರುವ ತಪ್ಪಿನ ಹಿಂದೆ ಅನಕ್ಷರಸ್ಥರು ಇದ್ದಾರೆ. ಅವರು ಹೇಳುವ ರೀತಿ ಮಾಡುವ ಹಾಗಿದ್ದರೆ ವಿದ್ಯಾವಂತರು ನೀವು ಯಾಕೆ ಉನ್ನತ ಸ್ಥಾನದಲ್ಲಿ ಕುಳಿತುಕೊಳ್ಳಬೇಕು ಎಂದು ಪ್ರಶ್ನಿಸಿದರು.

ನಿರ್ದೇಶಕ ಸ್ಥಾನಗಳನ್ನು ನಿಗಮ ಮಾಡುವ ವಿಚಾರವಾಗಿ ರಾಜ್ಯ ಸಹಕಾರ ಇಲಾಖೆಯಿಂದ ನ.29ರಂದು ಒಕ್ಕೂಟಕ್ಕೆ ಪತ್ರ ಬಂದಿದೆ. ಅದರ ಅನ್ವಯ ಕ್ಷೇತ್ರ ವಿಗಂಡಣೆ ಮಾಡುವಲ್ಲಿ ಅಧಿಕಾರಿಗಳು ಅನಕ್ಷರಸ್ಥರ ಮಾತು ಕೇಳಿದ್ದಾರೆ. ಈ ಸಂಬಂಧ ಆಡಳಿತ ಪಕ್ಷದ ಶಾಸಕರೇ ದಾಖಲೆ ಸಮೇತ ಪತ್ರಿಕಾಗೋಷ್ಠಿ ಮಾಡುತ್ತಾರೆ. ಇದಕ್ಯಾರು ಹೊಣೆ ಎಂದು ತರಾಟಗೆ ತೆಗೆದುಕೊಂಡರು.

ಒಬ್ಬರ ಮುಲಾಜಿಗೆ ಒಳಗಾಗಿ ಕೆಲಸ ಮಾಡಲು ಹೋಗಿ ಸಹಕಾರಿ ಬ್ಯಾಂಕನ್ನು ಮುಳಗಿಸಿದ್ದು ಆಯಿತು, ಈಗ ಒಕ್ಕೂಟವನ್ನು ಮುಳುಗಿಸಲು ಪ್ರಯತ್ನ ಮಾಡುತ್ತಿದ್ದೀರ. ಇವತ್ತು ಹತ್ತು ಮಂದಿಯೊಂದಿಗೆ ಬಂದಿದ್ದೇವೆ, ಮುಂದಿನ ದಿನಗಳಲ್ಲಿ ಸಾವಿರ ಮಂದಿ ಹಸುಗಳ ಸಮೇತ ಬಂದು ಒಕ್ಕೂಟದ ಮುಂದೆ ನಿಲ್ಲಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆಡಳಿತ ಮಂಡಳಿ ಇದ್ದಾಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನ ತೆಗೆದುಕೊಳ್ಳಲಾಯಿತು. ಇಲ್ಲಿನ ಅಧಿಕಾರಿಯೊಬ್ಬರ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಬದಲಾಯಿಸಿದ ಹಿನ್ನಲೆಯಲ್ಲಿ ಇಡಿ ದಾಳಿ ಮಾಡಿತು, ತದನಂತರ ಈ ಪ್ರಕರಣ ಲೋಕಾಯುಕ್ತರ ತನಿಖೆಗೆ ಹೋಗಿದೆ. ಇದು ಅಧಿಕಾರಿಗಳ ಸಾಧನೆ, ಒಬ್ಬರ ತಾಳಕ್ಕೆ ತಕ್ಕಂತೆ ಕೆಲಸ ಮಾಡುವುದು ಬಿಟ್ಟು ರೈತರ ಸಬಲೀಕರಣಕ್ಕಾಗಿ ದುಡಿಯಿರಿ, ಪ್ರತಿ ತಿಂಗಳು ಬಟವಾಡ ನೀಡುವುದರಲ್ಲೂ ತಡವಾಗುತ್ತಿದೆ. ರೈತರಿಗೆ ಯಾವ ರೀತಿ ಉತ್ತರ ಹೇಳಬೇಕು ಹೇಳಿ ಎಂದು ಪ್ರಶ್ನಿಸಿದರು.

ಮತ್ತೊಂದು ಮಾಜಿ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ಒಕ್ಕೂಟವು ರೈತರ ಸಂಸ್ಥೆಯಾಗಿದೆ. ಇದನ್ನು ಹಾಳು ಮಾಡಿದರೆ ಯಾರು ಸುಮ್ಮಿನಿರುವುದಿಲ್ಲ. ಕೋಲಾರ-ಚಿಕ್ಕಬಳ್ಳಾಪುರ ಒಕ್ಕೂಟವನ್ನು ವಿಭಜನೆ ಮಾಡಿದ ಆದ ಮೇಲೆ ಪ್ರಕ್ರಿಯೆಗಳು ಶುರುವಾಗಿದೆ. ಆದರೆ ಕ್ಷೇತ್ರದ ವಿಂಡಗಣೆ ಮಾಡಿರುವುದರಲ್ಲಿ ಅನೇಕ ನ್ಯೂನತೆಗಳು ಇವೆ, ಇದನ್ನು ಯಾರನ್ನು ಮೆಚ್ಚಿಸಲು ಮಾಡಲಾಗಿದೆ ಎಂದು ಕಿಡಿಕಾರಿದರು.

ಒಕ್ಕೂಟವನ್ನು ವಿಭಜನೆ ಮಾಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಒಕ್ಕೂಟ ರಚನೆ ಮಾಡಬೇಕು ಎಂಬದನ್ನು ತೀರ್ಮಾನಕೈಗೊಳ್ಳಲಾಯಿತು. ಮುಳಬಾಗಿಲು ವ್ಯಾಪ್ತಿಯಲ್ಲಿ ಉತ್ತರ, ದಕ್ಷಿಣ ಎಂದು ಕ್ಷೇತ್ರ ವಿಂಗಡಣೆ ಮಾಡಲಾಗಿದೆ. ಇದನ್ನು ಯಾರ ಮುಲಾಜಿಗೆ ಒಳಗಾಗಿ ಮಾಡಿದೀರ. ವೈಜ್ಞಾನಿಕವಾಗಿ ಹೇಗೆ ಮಾಡಬೇಕು ಎಂಬುದರ ಬಗ್ಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಮಧ್ಯೆ ಒಕ್ಕೂಟಕ್ಕೆ ಅಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಆಗಮಿಸಿದರು. ಆಗ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿ ಅವರು ಅಧಿಕಾರಿಗಳು ನನಗೂ ವಿಚಾರವನ್ನು ಮರೆ ಮಾಚಿದ್ದಾರೆ. ಮುಂದಿನ ದಿನಗಳಲ್ಲಿ ಆಡಳಿತದಲ್ಲಿ ವ್ಯತ್ಯಾಸಗಳು ಆಗದಂತೆ ಎಚ್ಚವಹಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಾಲು ಡೇರಿ ಅಧ್ಯಕ್ಷರಾದ ನಲ್ಲೂರು ರಘುಪತಿರೆಡ್ಡಿ, ಶ್ಯಾಮೇಗೌಡ, ವಿಟ್ಟಪ್ಪನಹಳ್ಳಿ ಮಂಜುನಾಥ್, ಯಾನಾದನಹಳ್ಳಿ ಗೋಪಾಲಗೌಡ, ಮುಖಂಡರಾದ ಅಶೋಕ್, ಶಂಕರಪ್ಪ, ಮುರಳಿ ಮುಂತಾದವರು ಇದ್ದರು.

Ramesh Babu

Journalist

Recent Posts

ಏ.12ರಂದು ದೊಡ್ಡಬಳ್ಳಾಪುರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.12 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು…

8 hours ago

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರ ಸಾವು

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…

13 hours ago

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…

13 hours ago

ಹುಚ್ಚನೊಬ್ಬನ ಕನಸು….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…

18 hours ago

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

1 day ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

1 day ago