ಥೈಲ್ಯಾಂಡ್ ದೇಶದಿಂದ ದುಬೈ ಮತ್ತು ಕೇರಳಕ್ಕೆ ತನ್ನ ಸಹಚಾರರೊಂದಿಗೆ ಹೈಡ್ರೋ ಗಾಂಜಾವನ್ನು ಸಾಗಿಸುತ್ತಿದ್ದ ಡ್ರಗ್ ಪೆಡ್ಲರನ್ನು ಬಂಧಿಸಿ ಉಳಿದ ಆತನ ಆರು ಸಹಚಾರರನ್ನು ಕೂಡ ಕೊಡಗು ಪೊಲೀಸ್ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಕೆ. ರಾಮರಾಜನ್ ನೀಡಿದ್ದಾರೆ.
*ಬಂದಿತ ಆರೋಪಿಗಳ ವಿವರ*.
ನಾಪೋಕ್ಲು ವಿನ ಅಕಿನಾಸ್ ಎಂ ಎನ್, ರಿಯಾಜ್ ಪಿ. ಎಂ, ವಿರಾಜಪೇಟೆಯ ವಾಜಿದ್ ಸಿ.ಇ, ನಾಪೋಕ್ಲುವಿನ ಯಾಹ್ಯ ಸಿ.ಎಚ್, ವಿರಾಜಪೇಟೆಯ ನಾಸೂರುದ್ದೀನ್ ಎಂ. ಯು, ರಾಹುಫ್ ಎಂ. ಎ, ಪ್ರಕರಣದ ಕೇಂದ್ರ ಬಿಂದು ಕಾಸರಗೋಡು ಜಿಲ್ಲೆಯ ಮೆಹರೂಫ್ ಕೆ. ಎ.
*ಪ್ರಕರಣದ ಬಗ್ಗೆ*. ಥಾಯ್ಲ್ಯಾಂಡ್ ದೇಶದ ಬ್ಯಾಂಕಾಕ್ ನಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಮೆಹರೂಫ್ ಎಂಬಾತ ಕೆಫೆ ಒಂದನ್ನು ಇಟ್ಟುಕೊಂಡಿದ್ದು ಆತನಿಂದ ವಿರಾಜಪೇಟೆಯ ರಾಹುಫ್ 23.92024ರಂದು ವಿಮಾನದ ಮೂಲಕ ಥೈಲ್ಯಾಂಡ್ ನಿಂದ ಬೆಂಗಳೂರಿಗೆ ಹೈಡ್ರೋ ಗಾಂಚವನ್ನು ತಂದು ತನ್ನ ಇತರ ಸಹಚಾರರೊಂದಿಗೆ ಮೈಸೂರು ಗೋಣಿಕೊಪ್ಪಕ್ಕೆ ಬೆಳಗಿನ ಜಾವ ಆಗಮಿಸಿ ಗೋಣಿಕೊಪ್ಪಲಿನ ಬೆಳ್ಳಿಯಪ್ಪ ರೆಸಿಡೆನ್ಸಿ ಯಲ್ಲಿ ಕೆಲವರು ತಂಗಿ ನಂತರ ಇತರ ಸಹಚರು ಮಡಿಕೇರಿಯತ್ತ ಗಾಂಜಾ ಸಹಿತ ತೆರಳುತ್ತಿದ್ದ ಸಂದರ್ಭ ಖಚಿತ ಮಾಹಿತಿ ತಿಳಿದ ಡಿ.ಸಿ.ಆರ್.ಬಿ ಪೊಲೀಸ್ ತಂಡ ಜಿಲ್ಲಾ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಂತೆ ಬಂಧಿಸಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.
ಪ್ರಕರಣದ ಮುಖ್ಯ ರೂವಾರಿ ಮೆಹರೂಫ್ ಕೊಚ್ಚಿನ್ ಮೂಲಕ ಬ್ಯಾಂಕಾಕಿಗೆ ವಿಮಾನದ ಮೂಲಕ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಪೊಲೀಸ್ ಕಮಿಷನರ್ ಅವರ ಸಹಕಾರದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಅನುಪ್ ಮಾದಪ್ಪ ಅವರ ತಂಡ ಸೆಪ್ಟೆಂಬರ್ 29ರಂದು ರಾತ್ರಿ 10:30 ಗಂಟೆಗೆ ಬಂಧಿಸಿ ಕೊಡಗಿಗೆ ಕರೆ ತಂದಿದ್ದಾರೆ.
ಅಂತರಾಷ್ಟ್ರೀಯ ಮಟ್ಟದ ಈ ದಂಧೆಯಲ್ಲಿ ಕೊಡಗು ಜಿಲ್ಲೆಯ ನಾಪೋಕ್ಲು ಹಾಗೂ ವಿರಾಜಪೇಟೆ ತಾಲೂಕಿನ ಆರು ಮಂದಿ ಬಾಗಿಗಳಾಗಿದ್ದು ಕೊಡಗು ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಹಲವರು ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗಿಗಳಾಗಿದ್ದಾರೆ ಎಂಬ ಸಂದೇಹಗಳು ಮೂಡಿವೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಜನತೆಯಲ್ಲಿ ಇದೀಗ ಈ ಪ್ರಕರಣ ಆತಂಕ ಮೂಡಲು ಕಾರಣವಾಗಿದೆ.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ಪರವಾನಗಿ ಭೂ ಮಾಪಕರು ಎರಡು ತಿಂಗಳಿಂದ ಮುಷ್ಕರ ಹೂಡಿರುವುದರಿಂದ ಭೂ ಮಾಪನ ಇಲಾಖೆಯ…
ಕೇಂದ್ರ ಸರ್ಕಾರ ಕಳೆದ ಒಂದು ದಶಕದಿಂದ ವಿವಿಧ ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಒಂದೊಂದೆ ಹೆಜ್ಜೆ ಇಟ್ಟುಕೊಂಡು ಬರುತ್ತಿದೆ ಎಂದು…
ಆಶಾ ಭೋಸ್ಲೆ..... ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ...... ಶಬ್ದ…
Effektives Schreiben von Hausarbeiten Das Schreiben von Hausarbeiten kann für viele Studierende eine große Herausforderung…
ನಾನು ಜೆಡಿಎಸ್ ತಾಲೂಕು ಅಧ್ಯಕ್ಷ ಸ್ಥಾನಕ್ಕಾಗಿ ವರಿಷ್ಠರ ಬಳಿ ಕೇಳಿದ್ದೇನೆ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಪಕ್ಷದ ವರಿಷ್ಠರು ಯಾವುದೇ…
ಹೆಣ್ಣಿನ ಹಿತರಕ್ಷಣೆಗಾಗಿ ದೊಡ್ಡಬಳ್ಳಾಪುರದಲ್ಲಿ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪನೆ ಮಾಡಲಾಗಿದೆ..ಈ ಮಹಿಳಾ ಠಾಣೆಯಲ್ಲಿ ಅತ್ಯಾಚಾರ, ವರದಕ್ಷಿಣೆ ನಿಷೇಧ ಕಾಯ್ದೆ, ಮಕ್ಕಳ…