ವಿಷಪೂರಿತ ಮನಸ್ಸುಗಳು ಮಣಿಪುರದಲ್ಲಿ ಹಿಂಸೆಯನ್ನು ಪ್ರಚೋಧಿಸುತ್ತಿವೆ. ಇದರ ವಿರುದ್ಧ ಒಗ್ಗಟ್ಟಿನ ಅಹಿಂಸಾತ್ಮಕ ಹೋರಾಟಗಳ ತುರ್ತು ಅಗತ್ಯವಿದೆ ಎಂದು ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಕುಲಸಚಿವ ಡಾ.ಡಾಮಿನಿಕ್ ಹೇಳಿದರು.
ನಗರದ ಕನ್ನಡ ಜಾಗೃತ ಪರಿಷತ್ ವತಿಯಿಂದ ಸೋಮವಾರ ಜಾಗೃತ ಭವನದಲ್ಲಿ ನಡೆದ ‘ಮಣಿಪುರದಲ್ಲಿ ಹಿಂಸಾಚಾರ: ಅಸಲಿ ವಿಷಯವೇನು?’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಮಣಿಪುರದಲ್ಲಿ ರಾಜ್ಯ ಸರ್ಕಾರದ ಚಲ್ಲಾಟದಿಂದಾಗಿಯೇ ಹಿಂಸಾಚಾರ ಮಿತಿಮೀರಲು ಕಾರಣವಾಗಿದೆ. ಅಲ್ಲಿನ ಪ್ಲಾಟಿನಂ ಖನಿಜ ಸಂಪತ್ತನ್ನು ಖಾಸಗಿ ಕಂಪನಿಯೊಂದಕ್ಕೆ ನೀಡುವ ಸಲುವಾಗಿ ಮೈತೇಯಿ ಹಾಗೂ ಕುಕ್ಕಿ ಸಮುದಾಯಗಳ ನಡುವೆ ಕೋಮುಗಲಬೆಯನ್ನು ಉಂಟುಮಾಡಲಾಗುತ್ತಿದೆ. ಇದರಿಂದ ಸ್ಥಳೀಯರು ಪ್ಲಾಟಿನಂ ಖನಿಜ ಗಣಿಗಾರಿಕೆಗೆ ವಿರೋಧ ವ್ಯಕ್ತಪಡಿಸದಂತೆ ತಡೆಯುವ ಹುನ್ನಾರವು ಹಿಂಸಾಚಾರದ ಹಿಂದೆ ಹಡಗಿದೆ ಎನ್ನುವುದನ್ನು ಇತ್ತೀಚೆಗೆ ಕೆಲವು ಪತ್ರಿಕೆಗಳಲ್ಲಿ ವರದಿಯಾಗಿವೆ. ತಮ್ಮ ರಾಜಕೀಯ ಹಾಗೂ ಆರ್ಥಿಕ ಚಟುವಟಿಕೆಗಾಗಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಮಹಿಳೆಯನ್ನು ಹೋರಾಟದ ಗುರಾಣಿಯನ್ನಾಗಿ ಮಾಡಿಕೊಂಡಿರುವ ಮಾನವೀಯ ಘಟನೆಯನ್ನು ದೇಶದ ಎಲ್ಲಾ ಪ್ರಜ್ಞಾವಂತರು ಪಕ್ಷ ಬೇಧ ಮರೆತು ಖಂಡಿಸಲೇಬೇಕಿದೆ ಎಂದರು.
ಮಣಿಪುರದಲ್ಲಿನ ಹಿಂಸಾಚಾರವನ್ನು ತಕ್ಷಣ ಕೊನೆಗಾಣಿಸಲು ನಮ್ಮ ಆಡಳಿತಗಾರರು ತಮ್ಮ ದುರಂಹಕಾರವನ್ನು ಬದಿಗೊತ್ತಿ ಕೆಲಸ ಮಾಡಬೇಕು. ರಾಷ್ಟ್ರಪತಿ ಆಡಳಿತವನ್ನು ತುರ್ತಾಗಿ ಜಾರಿಗೆ ತರಬೇಕು ಹಾಗೆಯೇ ಹಿಂಸಾಚಾರ ತಡೆಗೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆಯುವ ಮೂಲಕ ದೇಶದ ನಾಗರೀಕರು ಆಗ್ರಹಿಸಬೇಕು ಎಂದರು.
ಜನವಾದಿ ಮಹಿಳಾ ಸಂಘಟನೆಯ ಪ್ರಭಾ ಬೆಳವಂಗಲ ಮಾತನಾಡಿ, ದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಆಡಳಿತಕ್ಕೆ ಬಂದರೆ ಅಭಿವೃದ್ಧಿ ಸಾಧ್ಯ ಎನ್ನುವ ಬಿಜೆಪಿ ಮುಖಂಡರ ಸುಳ್ಳು ಆಶ್ವಾಸನೆಗೆ ಮಣಿಪುರ ರಾಜ್ಯದಲ್ಲಿನ ಹಿಂಸಾಚಾರವೇ ತಾಜಾ ಉದಾಹಣೆಯಾಗಿದೆ. ಡಬಲ್ ಇಂಜಿನ್ ಆಡಳಿತ ಇರುವ ಎಲ್ಲಾ ರಾಜ್ಯಗಳಲ್ಲೂ ಸಹ ಕೋಮುಗಲಬೆಗಳೆ ಹೆಚ್ಚಾಗಿವೆ ಹೊರತು ಅಭಿವೃದ್ಧಿಯಲ್ಲ. ಗುಜರಾತ್, ಬಾಂಬೆ, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮುಗಲಬೆಗಳಿಗೆ ಕಾರಣವಾಗಿರುವವರೆ ಇಂದು ಮಣಿಪುರ ರಾಜ್ಯದಲ್ಲಿನ ಹಿಂಸಾಚಾರಕ್ಕೂ ಕಾರಣವಾಗಿದ್ದಾರೆ ಎಂದು ದೂರಿದರು.
ಇಡೀ ವಿಶ್ವವೇ ಮಣಿಪುರದಲ್ಲಿನ ಹಿಂಸಾಚಾರವನ್ನು ಕಂಡು ಮರುಗಿದೆ. ಮಹಿಳೆಯರ ಬತ್ತಲೆ ಮೆರಣಿಗೆಯಿಂದಾಗಿ ದೇಶದ ಗೌರವ ಕುಂದಿದೆ. ಇಷ್ಟಾದರು ಸಹ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ವಿರೋಧ ಪಕ್ಷಗಳು ಧ್ವನಿ ಎತ್ತುವವರೆಗೂ ಈ ಬಗ್ಗೆ ಮಾತನಾಡದೇ ಹೋಗಿದ್ದು ದುರಂತದ ಸಂಗತಿ. ಈಶಾನ್ಯ ಭಾರತದ 7 ರಾಜ್ಯಗಳ ಪ್ರಗತಿಗೆ ಎಚ್. ಡಿ. ದೇವೇಗೌಡರು ಪ್ರಧಾನಿಗಳಾಗಿದ್ದಾಗ ವಿಶೇಷವಾದ ಪ್ಯಾಕೇಜ್ ನೀಡಿದ್ದು ಹೊರತು, ಇಲ್ಲಿಯವರೆಗೂ ಯಾರೂ ಸಹ ಈ ರಾಜ್ಯಗಳ ಅಭಿವೃದ್ಧಿಗೆ ಆದ್ಯತೆಯನ್ನೇ ನೀಡಿಲ್ಲ ಎಂದರು.
ವಿಚಾರ ಸಂಕಿರಣದಲ್ಲಿ ಪ್ರಸ್ತಾವಿಕವಾಗಿ ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್ ಮಾತನಾಡಿದರು.
ಈ ವೇಳೆ ನಗರದ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…