ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ಬೋರ್‌ವೆಲ್ ಪಾಯಿಂಟ್ ಸೇರುತ್ತಿರುವ ಶೌಚಾಲಯದ ಮಲ-ಮೂತ್ರ ಮಿಶ್ರಿತ ನೀರು

ನಗರದ ಹೈಟೆಕ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ಶೌಚಾಲಯದ ನೀರು ನೇರವಾಗಿ ಕುಡಿಯುವ ನೀರಿಗೆ ಬಳಸುವ ಬೋರ್‌ವೇಲ್‌ಗೆ ಸೇರುತ್ತಿದೆ. ಈ ಬೋರ್‌ವೇಲ್ ನೀರನ್ನು ಪ್ರಯಾಣಿಕರು ಮತ್ತು ಸಂಸ್ಥೆಯ ಸಿಬ್ಬಂದಿಗಳು ಬಳಸುತ್ತಿದ್ದಾರೆ. ಮುಖ್ಯವಾಗಿ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿರುವ ಉಚಿತ ಕುಡಿಯುವ ನೀರಿನ ಟ್ಯಾಂಕ್‌ರಗೂ ಇದೇ ನೀರನ್ನೇ ಬಳಸಲಾಗುತ್ತಿದೆ. ಈ ಬಗ್ಗೆ ಮನವಿ ಮಾಡಿದ್ದರೂ ಕೆಎಸ್‌ಆರ್‌ಟಿಸಿ ಸಂಸ್ಥೆ ಕ್ರಮಕ್ಕೆ ಮುಂದಾಗಿಲ್ಲ.

ಕುಡಿಯುವ ಟ್ಯಾಂಕರ್‌ಗೆ ಮಲ-ಮೂತ್ರ ಮಿಶ್ರಿತ ನೀರು:

ನಗರದ ಹೃದಯ ಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಇದ್ದು, ಪ್ರತಿದಿನ 300ಕ್ಕೂ ಹೆಚ್ಚು ಬಸ್‌ಗಳ ಸಂಚಾರವಿದೆ. ಹೈಟೆಕ್ ಬಸ್ ನಿಲ್ದಾಣದಲ್ಲಿ ಪುರಷ ಮತ್ತು ಮಹಿಳೆಯರ ಬಳಕೆಗಾಗಿ 10 ಶೌಚಾಲಯಗಳಿವೆ. ಈ ಶೌಚಾಲಯಗಳಿಂದ ಬರುವ ಮಲ ಮತ್ತು ಮೂತ್ರದ ನೀರು ಸರಾಗವಾಗಿ ಹೋಗುತ್ತಿಲ್ಲ. ಬದಲಾಗಿ ಕೆಎಸ್‌ಆರ್‌ಟಿಸಿಯವರ ಏಕೈಕ ಬೋರ್‌ವೆಲ್ ಪಾಯಿಂಟ್ ಬಳಿ ಸಂಗ್ರಹವಾಗುತ್ತಿದೆ. ಈ ಮಲ-ಮೂತ್ರ ಮಿಶ್ರಿತ ನೀರು ಮತ್ತೆ ಬೋರ್‌ವೆಲ್ ಸೇರುತ್ತಿದೆ. ಇದೇ ಬೋರ್‌ವೆಲ್ ನೀರನ್ನು ಬಸ್ ನಿಲ್ದಾಣದಲ್ಲಿರುವ ಹೊಟೇಲ್ ಮತ್ತು ಕಾಂಡಿಮಂಟ್ಸ್ ಗಳಿಗೆ ಸರಬರಾಜು ಮಾಡಲಾಗುತ್ತಿದೆ, ಚಾಲಕ ಮತ್ತು ನಿರ್ವಾಹಕರು ಇದೇ ನೀರನ್ನು ಬಳಸುತ್ತಿದ್ದಾರೆ. ಮುಖ್ಯವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ಕುಡಿಯುವ ನೀರಿನ ಟ್ಯಾಂಕರ್‌ಗೂ ಸಹ ಇದೇ ನೀರನ್ನು ಬಿಡಲಾಗುತ್ತಿದೆ.

ಗಬ್ಬು ನಾರುತ್ತಿರುವ ಪಾರ್ಕಿಂಗ್ ಸ್ಥಳ:

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ಶೌಚಾಲಯಗಳ ಪೈಪ್‌ಗಳು ಹೊಡೆದು ಹೋಗಿದ್ದು, ಈ ಪೈಪ್‌ಗಳಿಂದ ಸೋರಿಕೆಯಾಗುತ್ತಿರುವ ನೀರು ನೇರವಾಗಿ ದ್ವಿಚಕ್ರ ಮತ್ತು ಕಾರುಗಳ ಪಾರ್ಕಿಂಗ್ ಪ್ರದೇಶ ಸೇರುತ್ತಿದೆ. ಇದರಿಂದ ಇಲ್ಲಿಗೆ ಪಾರ್ಕಿಂಗ್ ಮಾಡಲು ಬರುವ ಬೈಕ್ ಸವಾರರ ಸಂಖ್ಯೆಯೂ ಕಡಿಮೆಯಾಗಿದೆ. ಗಬ್ಬು ನಾರುತ್ತಿರುವುದರಿಂದ ಸೊಳ್ಳೆಕಾಟವೂ ಹೆಚ್ಚಾಗಿದೆ.

ದೂರು ನೀಡಿದರೂ ಕ್ರಮವಿಲ್ಲ:

ಅಂಬರೀಶ್ ಎಂಬುವರು ಬಸ್ ನಿಲ್ದಾಣದ ಪಾರ್ಕಿಂಗ್ ಟೆಂಡರ್ ತೆಗೆದು ಕೊಂಡಿದ್ದಾರೆ. ಪ್ರತಿ ತಿಂಗಳು ೬೦ ಸಾವಿರ ಹಣವನ್ನು ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಬಾಡಿಗೆ ಕಟ್ಟುತ್ತಿದ್ದಾರೆ. ಪಾರ್ಕಿಂಗ್ ಪ್ರದೇಶ ಸ್ವಚ್ಛ ಮಾಡುವಂತೆ ಮತ್ತು ಬೋರ್‌ವೆಲ್ ಸೇರುತ್ತಿರುವ ಶೌಚಾಲಯದ ನೀರಿನ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಧಿಕಾರಿಗಳು ಜವಾಬ್ದಾರಿಯಿಂದ ನುಣಿಚಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

ಪ್ರಯಾಣಿಕರ ಆಕ್ರೋಶ :

ಪ್ರಯಾಣಿಕರಿಗೆ ಮತ್ತು ಸಂಸ್ಥೆಯ ಸಿಬ್ಬಂದಿಗಳಿಗೆ ಶುದ್ಧವಾದ ಮತ್ತು ಸ್ವಚ್ಚವಾದ ನೀರು ಕೊಡುವುದು ಕೆಎಸ್‌ಆರ್‌ಟಿಸಿಯ ಜವಾಬ್ದಾರಿಯಾಗಿದೆ ಆದರೆ ಸಂಬAಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಮೂಲಕ ಪ್ರಯಾಣಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ramesh Babu

Journalist

Recent Posts

ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…

12 hours ago

ಕೊಡಿಪಾಳ್ಯ ಬಳಿ ಕ್ಯಾಂಟರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…

14 hours ago

ಮೊಬೈಲ್ ಕಳೆದುಹೋದರೆ ಗಾಬರಿ ಬೇಡ: ತಕ್ಷಣದ ಕ್ರಮವೇ ರಕ್ಷಣೆ: ಮೊಬೈಲ್‌ ಕಳೆದುಹೋದ 10 ನಿಮಿಷಗಳಲ್ಲಿ ಮಾಡಬೇಕಾದ 7 ಕೆಲಸಗಳು ಇಲ್ಲಿವೆ ನೋಡಿ…

ಬೆಂಗಳೂರು ಗ್ರಾಮಾಂತರ: ಮೊಬೈಲ್‌ ಫೋನ್‌ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್‌ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್‌ ಕೇವಲ ಸಂಪರ್ಕ…

16 hours ago

ಎಸ್ಐಆರ್ ಅಕ್ರಮ ಹಾಗೂ ಬರ ಪರಿಹಾರ ವಿಳಂಬ: ಕೇಂದ್ರ ಮತ್ತು ವಿಪಕ್ಷದ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…

16 hours ago

ಬರ ಪರಿಹಾರಕ್ಕೆ 60 ಸಾವಿರ ಕೋಟಿ ನಷ್ಟದ ಅಂದಾಜು- ಡಿಸಿಎಂ ಡಾ.ಜಿ ಪರಮೇಶ್ವರ್

ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ…

18 hours ago

“ಸರ್ಕಾರದ ಕೆಲಸ ದೇವರ ಕೆಲಸ ” ಎಂದು ಹೇಳುವವರು ದೇವರಿಗೂ ವಂಚಿಸುತ್ತಿದ್ದಾರೆ…

ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…

23 hours ago