ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 50 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್

ಕೆಂಪೇಗೌಡ ಏರ್ ಪೊರ್ಟ್ ನಲ್ಲಿ NCB ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ ನಡೆಸಲಾಗಿದ್ದು, ಬರೋಬ್ಬರಿ 50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆಪಡೆಯಲಾಗಿದೆ.

ಕಾರ್ಯಾಚರಣೆ ವೇಳೆ ಮೂವರ ಆರೋಪಿಗಳ ಬಂಧಿಸಲಾಗಿದೆ. 45 ಕೆಜಿ ಹೈಡ್ರೋಗಾಂಜಾ, 6 ಕೆಜಿ  ಸೈಲೋಸಿಬಿನ್ ಅಣಬೆ ಸೀಜ್ ಮಾಡಲಾಗಿದೆ.

ಆರಂಭದಲ್ಲಿ ಥೈಲ್ಯಾಂಡ್ ನಿಂದ ಡ್ರಗ್ಸ್  ಸಾಗಾಟ ಮಾಹಿತಿ ಕಲೆ ಹಾಕಿದ್ದ ಅಧಿಕಾರಿಗಳು. ಈ ಕಾರ್ಯಾಚರಣೆ ವೇಳೆ ಕೊಲಂಬೋದಿಂದ ಬರ್ತಿದ್ದ ಇಬ್ಬರು ಆರೋಪಿಗಳು ವಶಕ್ಕೆ ಪಡೆದು, ಇಬ್ಬರು ಆರೋಪಿಗಳಿಂದ 31 ಕೆಜಿ ಹೈಡ್ರೋಗಾಂಜಾ  ಮತ್ತು 4 ಕೆಜಿ ಸೈಲೋಸಿಬಿನ್ ಅಣಬೆ ಸೀಜ್ ಮಾಡಲಾಗಿದೆ.

ಇಬ್ಬರ ವಿಚಾರಣೆಯಲ್ಲಿ ಮತ್ತೊಬ್ಬ ಆರೋಪಿ ನೆಕ್ಸ್ಟ್ ಫ್ಲೈಟ್ ಗೆ ಶ್ರೀಲಂಕಾದಿಂದ ಬರುವ ಮಾಹಿತಿ ಆಧಾರದ ಮೇಲೆ. ಖಚಿತ ಮಾಹಿತಿ ಪಡೆದು ಕಾದು ಇನ್ನೋರ್ವ ಶ್ರೀಲಂಕಾ ಪ್ರಜೆಯನ್ನ ಎನ್ ಸಿ ಬಿ. ಬಂಧಿಸಿದೆ.

ಶ್ರೀಲಂಕಾದ ಹ್ಯಾಂಡ್ಲರ್ ನಿಂದ 14 ಕೆ ಜಿ ಹೈಡ್ರೋಗಾಂಜಾ ಮತ್ತು 2 ಕೆಜಿ ಅಣಬೆ ವಶಕ್ಕೆ ಪಡೆಯಲಾಗಿದೆ. 250 ಫುಡ್ ಟಿನ್ ಗಳಲ್ಲಿ ಡ್ರಗ್ಸ್ ಸೀಲ್ ಮಾಡಿಕೊಂಡು ಬಂದಿದ್ದ ಆರೋಪಿಗಳು.

ಈ ವರ್ಷ ಎನ್ ಸಿ ಬಿ ಯಿಂದ 18 ಕೇಸ್ ಗಳಲ್ಲಿ 100 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ ಮಾಡಲಾಗಿದೆ.

18 ಪ್ರಕರಣಗಳಲ್ಲಿ ಕೇರಳ, ರಾಜಸ್ಥಾನ, ಗುಜರಾತ್, ಮಾಹಾರಾಷ್ಟ್ರ ದಲ್ಲಿ ಗಾಂಜಾ ದಂಧೆ ನಡೆಸ್ತಿದ್ದ 45 ಆರೋಪಿಗಳನ್ನ ಬಂಧಿಸಲಾಗಿದೆ.

Ramesh Babu

Journalist

Recent Posts

ಚಿತ್ರದುರ್ಗ ಅಪಘಾತದಲ್ಲಿ ಮೂವರು ರಿಸರ್ವ್ ಸಬ್ ಇನ್ಸ್‌ಪೆಕ್ಟರ್‌ಗಳ ಸಾವು ಪ್ರಕರಣ: ಮೃತರ ಕುಟುಂಬಕ್ಕೆ ತಲಾ ರೂ.5 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ರೂ.2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಗೇಟ್ ಬಳಿ ಭಾನುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವಿಗೀಡಾದ ಮೂವರು ರಿಸರ್ವ್ ಸಬ್…

1 hour ago

ಗರಿಗೆದರಿದ “TEAM MSS” ಚಟುವಟಿಕೆ: ಯಾರದ್ದು, ಏನಿದು ‘ಟೀಂ ಎಂಎಸ್ ಎಸ್’….? ಸಂಪೂರ್ಣ ಮಾಹಿತಿಗಾಗಿ ಈ ಸುದ್ದಿಯನ್ನು ಓದಿ….

ಒಂದು ಉಪಚುನಾವಣೆ ಒಳಗೊಂಡಂತೆ ನಾಲ್ಕು ವಿಧಾನಸಭೆ ಚುನಾವಣೆಗಳನ್ನು ಎದುರಿಸಿದ ಬಿ.ಮುನೇಗೌಡ ತಾಲೂಕಿಗೆ ನೀರು, ಕಲ್ಲು ಮುನೇಗೌಡ ಎಂದೇ ಚಿರಪರಿಚಿತರಾಗಿದ್ದಾರೆ...ಇತ್ತೀಚೆಗೆ ನಡೆದ…

4 hours ago

ಇಂದಿನಿಂದ (ಮಾ.18) ಎಸ್.ಎಸ್.ಎಲ್.ಸಿ ಪರೀಕ್ಷೆ -01 ಆರಂಭ: ಪರೀಕ್ಷೆಗೆ ಬಂದ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ ಸ್ವಾಗತಿಸಿದ ಬಿಇಒ

2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು  ಮಾರ್ಚ್ 18 ಬುಧವಾರದಿಂದ ಏಪ್ರಿಲ್ 02 ಗುರುವಾರದ ವರೆಗೆ ಬೆಳಿಗ್ಗೆ 10:15 ಗಂಟೆಯಿಂದ ಮಧ್ಯಾಹ್ನ…

7 hours ago

ಯುಗಾದಿ…..

ವಿಶ್ವ ಮಹಾಯುದ್ಧದ ಕಾರ್ಮೋಡಗಳ ನಡುವೆ, ಅತ್ಯಂತ ಅಗತ್ಯದ ಗ್ಯಾಸ್ ಸಿಲಿಂಡರ್ಗಳ ಅಭಾವದ ನಡುವೆ, ಪ್ರಕ್ಷ್ಯುಬ್ಧ ಮನಸ್ಥಿತಿಯ ನಡುವೆ, ಸಂಭ್ರಮದ ಹೊಸ…

9 hours ago

ಯುವ ಆಪದ್ ಮಿತ್ರ ಯೋಜನೆ: ವಿಪತ್ತು ನಿರ್ವಹಣೆ ಕುರಿತು ಒಂದು ವಾರ ತರಬೇತಿ ಶಿಬಿರ

ಯುವ ಆಪದ್ ಮಿತ್ರ ಯೋಜನೆಯ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ದೊಡ್ಡಬಳ್ಳಾಪುರದ ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು…

20 hours ago

ಮಹಿಳೆಯರನ್ನು ಮಂಚಕ್ಕೆ ಕರೆದ ಆರೋಪ: ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅಮಾನತು

ಪೊಲೀಸ್ ಠಾಣೆಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರು ಕೊಡಲು ಬಂದ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಾರೆ ಎಂಬ ಆರೋಪದ ಮೇರೆಗೆ ಮೂಡುಬಿದಿರೆ…

20 hours ago