Categories: ಕೋಲಾರ

ಕಾರ್ಗಿಲ್ ವಿಜಯೋತ್ಸವ ಪ್ರಯುಕ್ತ ರೈತ ಸಂಘದಿಂದ ನಿವೃತ್ತ ಯೋಧರಿಗೆ ಸನ್ಮಾನ

ಕೋಲಾರ: 25ನೇ ಕಾರ್ಗಿಲ್ ವಿಜಯೋತ್ಸವವನ್ನು ರೈತ ಸಂಘದಿಂದ ಜಿಲ್ಲೆಯ ನಿವೃತ್ತ ಯೋಧರಿಗೆ ಹಸಿರು ಶಾಲು ಮ ಗಿಡ ನೀಡುವ ಮುಖಾಂತರ ಸರಳವಾಗಿ ಆಚರಣೆ ಮಾಡಿ ಯೋಧರ ಬೇಡಿಕೆಗಳನ್ನು ಸರ್ಕಾರಗಳು ಈಡೇರಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ನಿವೃತ್ತ ಯೋಧರ ಸನ್ಮಾನ ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ ನಾರಾಯಣಗೌಡ ಮಾತನಾಡಿ ಆದಮ್ಯ ಸಾಹಸ ಅಪ್ರತಿಮೆ ದೇಶಭಕ್ತಿಯ ಸ್ಪೂರ್ತಿಯೊಂದಿಗೆ ಶತ್ರುಗಳನ್ನು ಸದೆಬಡಿದು ಭಾರತಾಂಭೆಯ ಘನತೆ ಗೌರವವನ್ನು ಮುಗಲೆತ್ತರಕ್ಕೆ ಹಾರಿಸಿ ಅಮರರಾದ ಕಾರ್ಗಿಲ್ ಯುದ್ದದ ವೀರ ಹುತಾತ್ಮರಿಗೆ ಶತ ಶತ ನಮನಗಳನ್ನು ಸಲ್ಲಿಸುವ ಜೊತೆಗೆ ರೈತ ಮತ್ತು ಯೋಧರನ್ನು ಸರ್ಕಾರಗಳು ನಿರ್ಲಕ್ಷ ಮಾಡಬಾರದೆಂದು ಕಿವಿ ಮಾತು ಹೇಳಿದರು.

ಕಾರ್ಗಿಲ್ ವಿಜಯ ದಿವಸಕ್ಕೆ ಇಂದು ರಜತ ಸಂಭ್ರಮ ಭಾರತೀಯ ಸೇನೆಯ ಶೌರ್ಯ ಸಾಹಸಗಾಥೆ ಎಂದೆದಿಗೂ ಪ್ರೇರಣಾದಾಯಿ ಭಾರತದ ವೀರ ಯೋಧರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ಜೊತೆಗೆ ಪಾಕಿಸ್ತಾನದ ವಿರುದ್ದ ಭಾರತ ವಿಜಿಯ ಸಾದಿಸಿದ ಸಂಭ್ರವನ್ನು ಆಚರಿಸುವ ಕ್ಷಣವು ಹೌದು, ರಾಷ್ಟçಭಕ್ತಿ ಭಾವೈಕ್ಯತೆಯನ್ನು ಜಾಗೃತಗೊಳಿಸಿದ ಕಾರ್ಗ್ರಿಲ್ ಯುದ್ದ ದೇಶ ಮೊದಲು ಎಂಬ ಉದಾತ್ತ ಭಾವಕ್ಕೆ ಜೀವ ತುಂಬಿತು ಭಯೋತ್ಪಾದನೆ ಹಾಗೂ ರಾಷ್ಟçದ್ರೋಹಿಗಳ ವಿರುದ್ದ ಕಠಿಣ ಕ್ರಮವೇ ಅನಿರ್ವಾಯ ಎಂಬುದನ್ನು ಕಾರ್ಗಿಲ್ ಸಮರ ಸಾಬೀತು ಮಾಡಿತು, ಕಾರ್ಗಿಲ್ ಸಮರ ಪಾಕಿಸ್ತಾನಕ್ಕೆ ಹಲವು ಪಾಠಗಳನ್ನು ಕಲಿಸಿದಲ್ಲದೆ ಅಂತರ ರಾಷ್ಟ್ರೀಯ ವಲಯದಲ್ಲಿ ಅದರ ಮುಖವಾಡವನ್ನು ಬಯಲು ಮಾಡಿತು. ಗಡಿಯನ್ನು ಕಾಯುವ ಯೋಧರನ್ನು ಗೌರವಿಸುತ್ತಾ ರಾಷ್ಟ್ರಕ್ಕಾಗಿ ಜೀವಿಸುವ ಸಂಕಲ್ಪವನ್ನು ಕೈಗೊಂಡಲು ಈ ವಿಜಯದಿನ ಕಾರ್ಗಿಲ್ ವಿಜಯ ೨೫ನೇ ವರ್ಷಾಚರಣೆಯ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಯೋಧರನ್ನು ಗುರುತಿಸುವ ಇಚ್ಛಾಶಕ್ತಿ ಸರ್ಕಾರಗಳು ಮಾಡಬೇಕೆಂದು ಒತ್ತಾಯಿಸಿದರು.

ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ ದೇಶಕ್ಕೆ ತನ್ನ ಜೀವವನ್ನು ಮುಡುಪಾಗಿಟ್ಟಿರುವ ಲಕ್ಷಾಂತರ ಕುಟುಂಬಗಳ ರಕ್ಷಣೆಗೆ ಸರ್ಕಾರ ನಿಲ್ಲುತ್ತಿಲ್ಲ. ಹುತಾತ್ಮರಾದ ಯೋಧರನ್ನು ಅವರ ಅಂತ್ಯಕ್ರಿಯೆ ಆಗುವರೆಗೂ ಮಾಧ್ಯಮದ ಮುಂದೆ ಸರ್ಕಾರಗಳು ವಿವಿಧ ಆಸ್ವಾಶಣೆ ನೀಡಿ ಕಡೆಗೆ ಸರ್ಕಾರಗಳು ಕುಟುಂಬಗಳು ವರ್ಷಾನಗಟ್ಟಲೆ ಅಲೆದಾಡಿದರು ಕನಿಷ್ಠ ಅವರ ಸಮಸ್ಯೆ ಬಗ್ಗೆ ವಿಚಾರಿಸುವ ಅಧಿಕಾರಿಗಳು ಇರುವುದಿಲ್ಲವೆಂದು ಆರೋಪ ಮಾಡಿದರು.

ಸರ್ಕಾರವೇ ಮಂಜೂರು ಮಾಡುವ ಸರ್ಕಾರಿ ಜಮೀನಿಗಾಗಿ ೨೫ ವರ್ಷಗಳಿಂದ ಜಿಲ್ಲಾಡಳಿತ ತಾಲ್ಲೂಕು ಆಡಳಿತಕ್ಕೆ ಅಲೆದಾಡಿದರು ಯಾವುದೇ ನ್ಯಾಯ ಸಿಗುತ್ತಿಲ್ಲ. ಕಡೆಗೆ ದೇಶ ಕಾದು ತನ್ನ ಪ್ರಾಣವನ್ನು ಅರ್ಪಣೆ ಮಾಡಿದ ಕುಟುಂಬಗಳು ಹೋರಾಟದ ಹಾದಿ ಹಿಡಿಯಬೇಕಾದ ಪರಿಸ್ಥಿತಿ ಇರುವುದು ದುರದೃಷ್ಟಕರ ಎಂದರು.

ಪದವಿ ಪಡೆದು ಉದ್ಯೋಗ ಸಿಗದೆ ಪರದಾಡುತ್ತಿರುವ ಯುವ ಪೀಳಿಗೆಗೆ ಅನುಕೂಲವಾಗುವ ಅಗ್ನಿಪತ್ ಮೂಲಕ ಹೆಚ್ಚಿನ ಸೇನೆಗೆ ನೇಮಕ ಮಾಡಿಕೊಳ್ಳಬೇಕು. ನಿರುದ್ಯೋಗ ತಪ್ಪಿಸಿ ಯುವಕರು ತನ್ನ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದನ್ನು ತಪ್ಪಿಸಬೇಕೆಂದು ಸರ್ಕಾರಗಳಿಗೆ ಸಲಹೆ ನೀಡಿದರು.

ನಿವೃತ್ತ ಯೋಧರಾದ ಮಂಜುನಾಥ, ವೆಂಕಟೇಶ್ ಮತ್ತಿತರರು ಮಾತನಾಡಿ ಸರ್ಕಾರ ನುಡಿದಂತೆ ನಡೆಯುತ್ತಿಲ್ಲ. ಸೈನಿಕರ ವಿವಿಧ ಬೇಡಿಕೆಗಳನ್ನು ಹೀಡೇರಿಸಲು ಇಚ್ಚಾಸಕ್ತಿ ಕೊರತೆ ಇದೆ. ಜಮೀನು ಇಲ್ಲ. ಶಾಲೆ ಇಲ್ಲ. ಕನಿಷ್ಠ ಪಕ್ಷ ಯೋಧರ ಆರೋಗ್ಯದ ಹಿತದೃಷ್ಟಿಯಿಂದ ಆಸ್ಪತ್ರೆ ನಿರ್ಮಿಸಲು ಜಾಗವನ್ನು ಸಹ ನೀಡುತ್ತಿಲ್ಲವೆಂದು ಸರ್ಕಾರದ ಯೋಧರ ವಿರೋಧಿ ನೀತಿಯನ್ನು ಖಂಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಂಜುನಾಥಗೌಡ, ಶಾಂತಕುಮಾರ್, ಕುಮಾರ್, ಸಿ.ಎನ್.ರಘು, ಶಿವರಾಜ್, ಶ್ರೀರಾಮ್, ಸುರೇಶ್, ದೇವರಾಜ್, ಪುತ್ತೇರಿರಾಜು, ಗಿರೀಶ್, ವಕ್ಕಲೇರಿ ಹನುಮಯ್ಯ, ನಿವೃತ್ತಿ ಯೋಧರು ಭಾಗವಹಿಸಿದರು.

Ramesh Babu

Journalist

Recent Posts

ಸೆ. 28ಕ್ಕೆ ಅವತಿ ಬೆಟ್ಟದಲ್ಲಿ “ವಿಶ್ವ ಪ್ರವಾಸೋದ್ಯಮ ದಿನಾಚರಣೆ-2026″

ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ದೇವನಹಳ್ಳಿ ತಾಲ್ಲೂಕಿನ ಅವತಿಯ ತಿಮ್ಮರಾಯಸ್ವಾಮಿ ಬೆಟ್ಟದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ…

7 hours ago

ಮಾದಕ ವಸ್ತುಗಳ (ಡ್ರಗ್ಸ್) ಸಂಪೂರ್ಣ ನಿಯಂತ್ರಣಕ್ಕೆ ಎಲ್ಲಾ ಇಲಾಖೆಗಳು ಒಟ್ಟಾಗಿ ಕರ್ತವ್ಯ ನಿರ್ವಹಿಸಿ – ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧ

ಜಿಲ್ಲೆಯಲ್ಲಿ ಮಾದಕ ವಸ್ತುಗಳ (ಡ್ರಗ್ಸ್) ಹಾವಳಿಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಎಲ್ಲಾ ಇಲಾಖೆಗಳು ಒಟ್ಟಾಗಿ ಕೈಜೋಡಿಸಿ ಕರ್ತವ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ…

8 hours ago

ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ಸ್ಥಳಗಳಿಗೆ ಸಿಇಒ ದಿಢೀರ್ ಭೇಟಿ: ಸ್ಥಳದಲ್ಲೇ ಕ್ಯಾಟ್ ಫಿಶ್, ಹೊಂಡಗಳ ನಾಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಕ್ಯಾಟ್‌ ಫಿಶ್‌ ಸಾಕಣೆ ಮಾಡುತ್ತಿದ್ದ ಹೊಂಡಗಳ…

10 hours ago

ಗೋಮಾಳ ಭೂಮಿಯಲ್ಲಿನ ರೈತರನ್ನು ಒಕ್ಕಲೆಬ್ಬಿಸದಂತೆ ಜಿಲ್ಲಾಧಿಕಾರಿಗೆ ಮನವಿ

ಕೋಲಾರ: ಮೈಸೂರು ಮಹಾರಾಜರ ಕಾಲದಿಂದಲೂ ಸಕ್ಷಮ ಪ್ರಾಧಿಕಾರದಿಂದ ಕಾನೂನುಬದ್ಧವಾಗಿ ರೈತರಿಗೆ ಹಂಚಿಕೆಯಾಗಿರುವ ಸರ್ಕಾರಿ ಗೋಮಾಳ ಹಾಗೂ ಕಂದಾಯ ಭೂಮಿಯಲ್ಲಿನ ರೈತರನ್ನು…

12 hours ago

ವೈಯಕ್ತಿಕ ವಿಚಾರಕ್ಕೆ ಸಿಎಂ ಭೇಟಿ; ತಾಲೂಕಿನ ಹಿತರಕ್ಷಣೆಗಲ್ಲ? ವೆಂಕಟರಮಣಯ್ಯ ವಿರುದ್ಧ ಕಾಡನೂರು ಗ್ರಾ.ಪಂ ಮಾಜಿ ಅಧ್ಯಕ್ಷ ಮನು ಎನ್ ಆರ್ ಆರೋಪ

ದೊಡ್ಡಬಳ್ಳಾಪುರ: ಅಳಿಯನ ವರ್ಗಾವಣೆ ಸೇರಿದಂತೆ ವೈಯಕ್ತಿಕ ವಿಚಾರಗಳಿಗಾಗಿ ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು…

14 hours ago

ಬರ ಘೋಷಣೆ ಬಳಿಕ ಸಿಎಂಗೆ ಮನವಿ: ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನಡೆಗೆ ನಗರಸಭೆ ಉಪಾಧ್ಯಕ್ಷ ಬಂತಿ ವೆಂಕಟೇಶ್ ತರಾಟೆ

ದೊಡ್ಡಬಳ್ಳಾಪುರ: 2026ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ, ಮರು ಜಂಟಿ ಬೆಳೆ…

17 hours ago