ಕಾರಿನಲ್ಲಿ ಬೆಂಕಿ: ಅನುಮಾನಾಸ್ಪದ ರೀತಿಯಲ್ಲಿ ಕಾರಿನಲ್ಲೇ ಮಹಿಳೆ ಸುಟ್ಟುಭಸ್ಮ: ಹಲವು ಅನುಮಾನ

ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಅನುಮಾನಾಸ್ಪದ ರೀತಿಯಲ್ಲಿ ಕಾರಿನಲ್ಲೇ ಮಹಿಳೆ ಸುಟ್ಟುಭಸ್ಮವಾಗಿರುವ ಘಟನೆ ಇಂದು ಮಧ್ಯಾಹ್ನ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಜಿಂಕೆಬಚ್ಚಹಳ್ಳಿ ಬಯಲು ಪ್ರದೇಶದಲ್ಲಿ ನಡೆದಿದೆ…

ಮಹಿಳೆ ಸಾವು ಆಕಸ್ಮಿಕವೋ, ಆತ್ಮಹತ್ಯೆಯೋ, ಕೊಲೆಯೋ ಎಂಬುದು ತಿಳಿದುಬಂದಿರುವುದಿಲ್ಲ. ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಸದ್ಯ ಮೃತ ಮಹಿಳೆಯ ಹೆಸರು, ವಿಳಾಸ, ವಯಸ್ಸು ತಿಳಿದುಬಂದಿರುವುದಿಲ್ಲ..

ಟಯೋಟಾ ಗ್ಲಾಂಜಾ ಕಾರಿನ ಮಾಲೀಕ ಮಾರಸಂದ್ರ ಸುರೇಶ್ ಎಂದು ತಿಳಿದುಬಂದಿದೆ.. ಕಾರಿನ ಮಾಲೀಕನ ಬಳಿ ಇಂದು ಬೆಳಗ್ಗೆ ಆಸ್ಪತ್ರೆಗೆ ಹೋಗಬೇಕೆಂದು ರಾಮಾಂಜಿನಿ ಎಂಬ ವ್ಯಕ್ತಿ ಕಾರು ಪಡೆದು ಬರುತ್ತಾನೆ..

ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ರಾಮಾಂಜಿನಿ ಶರ್ಟ್ ಕಳಚಿ ಮೊಬೈಲ್ ಬಿಸಾಡಿ ಎಸ್ಕೇಪ್ ಆಗಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ…

ಸ್ಥಳದಲ್ಲಿ ಮೊಬೈಲ್, ಶರ್ಟ್ ಪತ್ತೆಯಾಗಿದೆ. ಮಹಿಳೆ ಮಾಂಗಲ್ಯ ಸರ ಕೂಡ ಪತ್ತೆಯಾಗಿದೆ.

ಸ್ಥಳಕ್ಕೆ ಸೋಕೋ ಟೀಂ, ವೈದ್ಯರು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ…

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಸಲಾಗಿದೆ….

Leave a Reply

Your email address will not be published. Required fields are marked *

error: Content is protected !!