ಕಾಂಗ್ರೆಸ್ ವೋಟ್ ಚೋರಿ ಮಾಡಿ ಸೋತಿದೆ. ಮೋದಿ ದಿಲ್ ಚೋರಿ ಮಾಡಿ ಗೆದ್ದಿದ್ದಾರೆ- ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಕೇಂದ್ರ ಸರ್ಕಾರವು 2026ನೇ ಸಾಲಿನ ಬಜೆಟ್‌ನಲ್ಲಿ ಹಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಿದೆ. ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿಸಲು ಹಲವು ವಿಶೇಷ ಯೋಜನೆಗಳನ್ನು ಘೋಷಿಸಲಾಗಿದೆ. ಬಯೋಫಾರ್ಮಾ ಶಕ್ತಿ ಹಾಗೂ ಮಹಿಳೆಯರಿಗೆ ಶಿ – ಮಾರ್ಟ್ ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಈ ಬಾರಿ ಘೋಷಣೆ ಮಾಡಲಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಇಂದು ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನ ಉದ್ದೇಶಿ ಮಾತನಾಡಿದ ಅವರು, 9ನೇ ಆಯವ್ಯಯದ ಗಾತ್ರ 53.47 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಸಾರಿಗೆ ಹಾಗೂ ರಕ್ಷಣಾ ಇಲಾಖೆಗೆ ಅತಿಹೆಚ್ಚು ಅನುದಾನ ಹಂಚಿಕೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಗೃಹ ವ್ಯವಹಾರಗಳ ಇಲಾಖೆಗೂ ಹೆಚ್ಚು ಒತ್ತು ನೀಡಲಾಗಿದೆ ಎಂದರು.

ಈ ಬಾರಿಯ ಬಜೆಟ್ ಯಾರನ್ನು ಓಲೈಕೆ ಮಾಡಿಲ್ಲ. ಎಲ್ಲಾ ವರ್ಗದವರ, ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಬಜೆಟ್ ಮಂಡನೆ ಮಾಡಲಾಗಿದೆ.. ಕಾಂಗ್ರೆಸ್ ಬಜೆಟ್ ಮಾಡಿದ್ದರೆ ತಾರತಮ್ಯ, ಓಲೈಕೆ ಕಾಣಬಹುದಾಗಿತ್ತು. ಯಾವ ಬೆಲೆ, ತೆರಿಗೆ ಹೆಚ್ಚು, ಕಡಿಮೆ ಮಾಡಿಲ್ಲ. ಜನರಿಗೆ ಸೌಕರ್ಯ ನೀಡಲು ಒತ್ತು ನೀಡಿದ್ದಾರೆ. ಕ್ರೆಡಿಬಲ್, ಕಮಿಟ್ ಮೆಂಟ್ ಹೊಂದಿದ್ದೇವೆ. ನುಡಿದಂತೆ ನಡೆದಂತೆ ಬಜೆಟ್ ಮಂಡಸಲಾಗಿದೆ ಎಂದರು.

ರಾಷ್ಟ್ರೀಯ ನಾರು ಯೋಜನೆ, ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ ಮತ್ತು ಕೌಶಲ್ಯಕ್ಕಾಗಿ ಸಮರ್ಥ್ 2.0 ಸೇರಿದಂತೆ ಸಮಗ್ರ ಯೋಜನೆಯನ್ನು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ಹೇಳಿದರು.

ಜಾಗತಿಕ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಸಂಪರ್ಕಗಳ ಮೂಲಕ ಖಾದಿ, ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಬಲಪಡಿಸಲು ಹೊಸ ಉಪಕ್ರಮವನ್ನು ಕೇಂದ್ರ ಸರ್ಕಾರವು 2026ನೇ ಸಾಲಿನ ಬಜೆಟ್‌ನಲ್ಲಿ ಅಳವಡಿಸಿಕೊಂಡಿದೆ ಎಂದರು.

ಎಂಎಸ್‌ಎಂಇ ವಲಯದ ಬೆಳವಣಿಗೆಗೆ ಇದು ಪೂರಕವಾದ ಬಜೆಟ್ ಆಗಿದೆ. ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಪ್ರಗತಿಗಾಗಿ 3 ಪ್ರಸ್ತಾವನೆಗಳನ್ನು ಪರಿಚಯಿಸಲಾಗಿದೆ. ಅದರಂತೆ ಮೊದಲ ಪ್ರಸ್ತಾವನೆ ಎಂಎಸ್‌ಎಂಇಗಳನ್ನು ಭವಿಷ್ಯದ “ಚಾಂಪಿಯನ್’ಗಳನ್ನಾಗಿ ಮಾಡಲು 10,000 ಕೋಟಿ ರೂ.ಗಳ ನಿಧಿ ಸ್ಥಾಪಿಸುವುದಾಗಿ ಘೋಷಿಸಲಾಗಿದೆ ಎಂದು ತಿಳಿಸಿದರು.

ಈ ಉದ್ಯಮಗಳು ಹೆಚ್ಚು ಸ್ವಾಲಂಬಿಯಾಗಬೇಕೆನ್ನುವ ಉದ್ದೇಶದಿಂದ “ಆತ್ಮನಿರ್ಭರ ಭಾರತ ನಿಧಿ’ಯಡಿ ಹೆಚ್ಚುವರಿಯಾಗಿ 2,000 ಕೋಟಿ ರೂ. ನೀಡುವುದಾಗಿಯೂ ತಿಳಿಸಲಾಗಿದೆ. ಜತೆಗೆ ಸೂಕ್ಷ್ಮ ಉದ್ಯಮಗಳಿಗೆ ಬೆಂಬಲವನ್ನು ಮುಂದು ವರಿಸಲು ಮತ್ತು ಸೂಕ್ಷ್ಮ ಉದ್ಯಮದಲ್ಲಿ ಅಪಾಯದ ಬಂಡವಾಳ ಹೂಡಿಕೆ ತಪ್ಪಿಸಲೂ ಈ ಆತ್ಮನಿರ್ಭರ ಭಾರತ ನಿಧಿಯು ಸಹಾಯ ಮಾಡಲಿದೆ ಎಂದು ಹೇಳಿದರು.

ನಮ್ಮ ದೇಶದ ಬೆಳವಣಿಗೆ ವೇಗ ಹೆಚ್ಚಿದೆ. ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ಉತ್ತಮ ಆಡಳಿತ ನೀಡುತ್ತಿದ್ದಾರೆ. ನಾಗರಿಕರು ಕೊಳ್ಳುವ ಶಕ್ತಿ ಹೆಚ್ಚಿಸಲು ಅನುಕೂಲಕರ ಬಜೆಟ್ ಆಗಿದೆ. ತೆಂಗು, ಗೋಡಂಬಿ, ಶ್ರೀಗಂಧ ಬೆಳೆಯುವವರಿಗೆ, ಮೀನುಗಾರರಿಕೆಗೆ ಒತ್ತು ನೀಡಲಾಗಿದೆ. ಮಧ್ಯಮವರ್ಗದ ಅಭಿವೃದ್ಧಿ ಆದ್ಯತೆ ನೀಡಲಾಗಿದೆ. ಸಬ್ಸಿಡಿ ಹೆಚ್ಚಿದಂತೆ ಅಭಿವೃದ್ಧಿ ವೇಗ ಕಡಿಮೆ ಆಗುತ್ತದೆ. ಕೌಶಲ್ಯ ಇಲ್ಲದಿದ್ದರೆ ಉದ್ಯೋಗ ಸಿಗುತ್ತಿಲ್ಲ. ಇದರಿಂದ ಎಂಎಸ್ಎಂಇ ಅಭಿವೃದ್ಧಿ ಮೂಲಕ ಕೌಶಲಕ್ಕೆ ಒತ್ತು ನೀಡಲಾಗಿದೆ. ಎಂಎಸ್ ಎಂಇ ಮೂಲಕ ಅನೇಕರಿಗೆ ಉದ್ಯೋಗ ನೀಡುವ ಭರವಸೆ ನೀಡಲಾಗಿದೆ ಎಂದರು.

ಕಾಂಗ್ರೆಸ್ ಆಡಳಿತದಲ್ಲಿ ಕರ್ಪೋರೇಷನ್ (ನಿಪುಣರು) ಓಲೈಕೆ, ಭ್ರಷ್ಟಾಚಾರ, ಕಮಿಷನ್ ದಂಧೆ (ಟೆಂಡರ್), ಕ್ರಿಮಿನಲ್, ಜಾತಿ ರಾಜಕಾರಣ ಮಾಡಲಾಗುತ್ತಿದೆ. ಮುಸ್ಲಿಂ ಅವರಿಗೆ ಮಾತ್ರ ಸಾಲದ ಮೇಲೆ ಬಡ್ಡಿ ವಜಾ ಮಾಡಲಾಗಿದೆ, ಕಾಂಗ್ರೆಸ್ ಸರ್ಕಾರ ಮುಸ್ಲಿಂಗಾಗಿ ಹುಟ್ಟಿದೆ ಅನಿಸುತ್ತೆ. ನಾವು ಅಲ್ಪಸಂಖ್ಯಾತರ ವಿರೋಧಿಗಳ ಅಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕು ಎಂಬುದು ಬಿಜೆಪಿ ತತ್ವ ಎಂದರು.

ಹೊಸ ಆದಾಯ ತೆರಿಗೆ ಕಾಯ್ದೆಯು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ. 1961 ರ ಕಾಯಿದೆಯನ್ನು ಸರಳೀಕೃತ ನಿಯಮಗಳು ಮತ್ತು ಕಡಿಮೆ ವಿಭಾಗಗಳೊಂದಿಗೆ ಬದಲಾಯಿಸಲಾಗಿದೆ ಎಂದು ಹೇಳಿದರು.

ಮಧ್ಯಮ ವರ್ಗದವರ ಆರ್ಥಿಕ‌ ಸಬಲತೆಗೆ ಹೆಚ್ಚು ಒತ್ತು ನೀಡಲಾಗಿದೆ. ಎಂ ಎಸ್ ಎಂ ಇ‌ ಬಂದಮೇಲೆ ಎಲ್ಲರು ಸ್ವತಂತ್ರರಾಗುತ್ತಿದ್ದಾರೆ. ಟೆಕ್ಸ್ ಟೈಲ್ ಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಕಾಂಗ್ರೆಸ್ ಸಂವಿಧಾನದಲ್ಲಿ ಪಾನ‌ಮತ್ತರಿಗೆ ಕಾಂಗ್ರೆಸ್ ನಲ್ಲಿ ಅವಕಾಶವಿಲ್ಲವೆನ್ನುತ್ತಾರೆ. ಆದರೆ ಆ ಪಕ್ಷದಲ್ಲೇ ಪಾನಪ್ರಿಯರಿದ್ದಾರೆ. ಕಾಂಗ್ರೆಸ್ ಅವರಿಗೆ ಕುಡಿದಿಲ್ಲ ಎಂದರೆ ರಾತ್ರಿ ನಿದ್ದೆ ಬರಲ್ಲ. ಒಂದು ದಿನನೂ ರಾಹುಲ್ ಗಾಂಧಿ ಖಾದಿ ಹಾಕಿಲ್ಲ. ಗಾಂಧಿ ತತ್ವಗಳ ವಿರುದ್ಧ ಕಾಂಗ್ರೆಸ್ ಇದೆ. ಕಾಂಗ್ರೆಸ್ ನಲ್ಲಿ ಸ್ಕೀಮ್ ಗಳು ಇಲ್ಲ ಬರೀ ಸ್ಕ್ಯಾಮ್ ಮಾಡುತ್ತಿದ್ದರು. ಮಹಾತ್ಮಗಾಂಧಿ ಹೆಸರಲ್ಲಿ ಕಾಂಗ್ರೆಸ್ ಲೂಟಿ ಮಾಡುತ್ತಿದೆ. ಹಿಂದುಗಳನ್ನ, ರಾಮನನ್ನ ಕಂಡರೆ ಕಾಂಗ್ರೆಸ್ ಗೆ ಆಗಲ್ಲ. ಯೋಜನೆಗಳಿಗೆ ಮುಸ್ಲಿಂ ಹೆಸರನ್ನ ಇಟ್ಟಿದ್ದರೆ ಬಂದು ಅಪ್ಪುಕೊಳ್ಳುತ್ತಿದ್ದರು. ಇಂದಿರಾ ಗಾಂಧಿ ಅವರ ಪತಿ ಗ್ಯಾಂಡಿ ಅಂತ ಇತ್ತು. ಗ್ಯಾಂಡಿ ಇದ್ದಿದ್ದು ಗಾಂಧಿ ಹೇಗಾಯಿತು ಎಂಬುದು ಗೊತ್ತಿಲ್ಲ. ಮುಸ್ಲಿಂರ ನಿಷ್ಠೆ ಯಾರ ಪರವೂ ಇರಲ್ಲ. ಅವರದ್ದು ಅವರ ಧರ್ಮದ ಬಗ್ಗೆ ಮಾತ್ರ ಲಾಯಲ್ ಟಿ ಇರುತ್ತದೆ. 2047ಕ್ಕೆ ಆರ್ಥಿಕ ವ್ಯವಸ್ಥೆಯಲ್ಲಿ ಸದೃಢವಾಗಬೇಕು. ದಿಲ್ ಚೋರಿ ಆಗಬೇಕೇ ಹೊರೆತು ವೋಟ್ ಆಗಬಾರದು. ಕಾಂಗ್ರೆಸ್ ವೋಟ್ ಚೋರಿ ಮಾಡಿ ಸೋತಿದೆ. ಮೋದಿ ದಿಲ್ ಚೋರಿ ಮಾಡಿ ಗೆದ್ದಿದ್ದಾರೆ ಎಂದರು.

ಶಾಸಕ ಧೀರಜ್ ಮುನಿರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣ, ಹಿರಿಯ ಮುಖಂಡರಾದ ಕೆ.ಎಚ್ ಹನುಮಂತರಾಯಪ್ಪ, ಗೋಪಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ವೆಂಕಟೇಶ್, ನಗರಾಧ್ಯಕ್ಷ ಮುದ್ದಪ್ಪ, ಮಂಜುನಾಥ ಇದ್ದರು.

Ramesh Babu

Journalist

Recent Posts

ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…

3 hours ago

ಕೊಡಿಪಾಳ್ಯ ಬಳಿ ಕ್ಯಾಂಟರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…

5 hours ago

ಮೊಬೈಲ್ ಕಳೆದುಹೋದರೆ ಗಾಬರಿ ಬೇಡ: ತಕ್ಷಣದ ಕ್ರಮವೇ ರಕ್ಷಣೆ: ಮೊಬೈಲ್‌ ಕಳೆದುಹೋದ 10 ನಿಮಿಷಗಳಲ್ಲಿ ಮಾಡಬೇಕಾದ 7 ಕೆಲಸಗಳು ಇಲ್ಲಿವೆ ನೋಡಿ…

ಬೆಂಗಳೂರು ಗ್ರಾಮಾಂತರ: ಮೊಬೈಲ್‌ ಫೋನ್‌ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್‌ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್‌ ಕೇವಲ ಸಂಪರ್ಕ…

7 hours ago

ಎಸ್ಐಆರ್ ಅಕ್ರಮ ಹಾಗೂ ಬರ ಪರಿಹಾರ ವಿಳಂಬ: ಕೇಂದ್ರ ಮತ್ತು ವಿಪಕ್ಷದ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…

7 hours ago

ಬರ ಪರಿಹಾರಕ್ಕೆ 60 ಸಾವಿರ ಕೋಟಿ ನಷ್ಟದ ಅಂದಾಜು- ಡಿಸಿಎಂ ಡಾ.ಜಿ ಪರಮೇಶ್ವರ್

ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ…

9 hours ago

“ಸರ್ಕಾರದ ಕೆಲಸ ದೇವರ ಕೆಲಸ ” ಎಂದು ಹೇಳುವವರು ದೇವರಿಗೂ ವಂಚಿಸುತ್ತಿದ್ದಾರೆ…

ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…

14 hours ago