ಕರ್ನಾಟಕ ಹಾಲು ಮಹಾ ಮಂಡಳಿಯ ನೂತನ ಅಧ್ಯಕ್ಷರಾಗಿರುವ ಹಗರಿಬೊಮ್ಮನಹಳ್ಳಿಯ ಮಾಜಿ ಶಾಸಕ ಭೀಮಾನಾಯ್ಕ್ ಕಾರ್ಯೋನ್ಮುರಾಗಿದ್ದಾರೆ. ರೈತರಿಂದ ಪಶು ಆಹಾರದ ಗುಣಮಟ್ಟ ಕಡಿಮೆಯಾಗುತ್ತಿರುವ ದೂರು ಕೇಳಿ ಬಂದ ಹಿನ್ನೆಲೆ ಇಂದು ರಾಜಾನುಕುಂಟೆಯಲ್ಲಿರುವ ಪಶು ಆಹಾರ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಖುದ್ದು ಗೋದಾಮುಗಳ ಪರಿಶೀಲನೆ ನಡೆಸಿದ ಭೀಮಾನಾಯ್ಕ್, ದಾಸ್ತಾನಾಗಿದ್ದ ಮೆಕ್ಕೆಜೋಳ, ವಿವಿಧ ಕಚ್ಚಾ ಪದಾರ್ಥಗಳನ್ನು ಪರಿಶೀಲನೆ ನಡೆಸಿದರು.
ಗುಣಮಟ್ಟವನ್ನು ಮತ್ತಷ್ಟು ಪರೀಕ್ಷೆಗೊಳಪಡಿಸಲು ವಿವಿಧ ಸ್ಯಾಂಪಲ್ ಗಳನ್ನು ಕೇಂದ್ರ ಕಚೇರಿಗೆ ತೆಗೆದುಕೊಂಡು ಹೋಗಲಾಯಿತು.
ಪಶು ಆಹಾರ ಕಾರ್ಖಾನೆಯ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್, ಮಾದರಿ ಒಕ್ಕೂಟ ಮಾಡುವ ಗುರಿಯೊಂದಿಗೆ ಕೆಎಂಎಫ್ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಸಿಬ್ಬಂದಿ ಯಾವುದೇ ಲೋಪದೋಷಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ಯಾವುದೇ ಸಮಸ್ಯೆ ಇದ್ದರೂ ನಾನು ಬೇರೆಯವರಿಂದ ತೀಳಿಯಬೇಕಿಲ್ಲ. ಏಕೆಂದರೆ ನಾನು ಕೂಡ 100 ಹಸುಗಳನ್ನು ಸಾಕಿದ್ದೇನೆ. ಡೇರಿಗೆ ಹಾಲನ್ನು ಹಾಕುತ್ತಿದ್ದೇನೆ. ರೈತರ ಸಮಸ್ಯೆಗಳು ನನಗೂ ಅನ್ವಯಿಸುತ್ತದೆ, ಸ್ವ ತಿಳಿಯುತ್ತದೆ ಎಂದರು.
ಯಾವುದೇ ಪ್ರಭಾವಕ್ಕೂ ಬಗ್ಗಲ್ಲ: ಗುಣಮಟ್ಟದಲ್ಲಿ ರಾಜಿ ಇಲ್ಲವೇ ಇಲ್ಲ:
ಗುಣಮಟ್ಟ ಕಾಪಾಡುವ ವಿಚಾರದಲ್ಲಿ ಯಾವುದೇ ರಾಜಿ ಆಗುವುದಿಲ್ಲ. ಶತಯಾಗತಯ ಅತ್ಯುತ್ತಮ ಗುಣಮಟ್ಟವನ್ನು ಕಾಪಾಡಲೇಬೇಕು. ಮುಂದಿನ ದಿನಗಳಲ್ಲಿ ನಾನು ಯಾವುದೇ ಕ್ಷಣದಲ್ಲಿಯೂ ಭೇಟಿ ನೀಡಬಹುದು. ಸಿಬ್ಬಂದಿ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ಹಾಲು ಉತ್ಪಾದನೆಯಲ್ಲಿ ನಾವು ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಮೊದಲ ಸ್ಥಾನಕ್ಕೆ ಬರಲು ಕೆಲಸ ಮಾಡಬೇಕು ಎಂದರು. ಯಾವುದೇ ದೂರುಗಳು ಬಂದರೆ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ. ಎಷ್ಟೆ ದೊಡ್ಡ ಪ್ರಭಾವ ಬೀರಿದರೂ ಬಿಡುವುದಿಲ್ಲ. ರೈತರು ಕಟ್ಟಿದ ಸಂಸ್ಥೆ ಕೆಎಂಎಫ್ ಆಗಿದೆ. ಅದನ್ನು ಉಳಿಸುವಂತ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಈ ವೇಳೆ ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್, ಬಳ್ಳಾರಿ ನಿರ್ದೆಶಕ ಮರಳು ಸಿದ್ದಪ್ಪ, ಉಡುಪಿಯ ಕಾಪು ದಿವಾಕರ ಶೆಟ್ಟಿ, ಬಮೂಲ್ ನಿರ್ದೇಶಕ ಜೈಕುಮಾರ್, ಸಿಬ್ಬಂದಿಗಳಾದ ರಾಘವೇಂದ್ರ, ರಾಮಕೃಷ್ಣಪ್ಪ, ಮುನಿರೆಡ್ಡಿ ಮತ್ತಿತರರು ಇದ್ದರು.
ಪಶು ಆಹಾರಗಳ ಬೆಲೆ ಏರಿಕೆ.. ಬೇಸಿಗೆಯಿಂದಾಗಿ ಹಾಲು ಉತ್ಪಾದನೆ ಕುಂಠಿತ.. ಹಸುಗಳಲ್ಲಿ ಹೆಚ್ಚಿದ ಕೆಚ್ಚಲುಬಾವು ರೋಗ.. ರಾಸುಗಳಿಗೆ ಮೇವು ಇಲ್ಲದೆ…
ಇಂದು ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ, 'ಪ್ರಸಾದ್ 2.0' (PRASHAD…
ದೊಡ್ಡಬಳ್ಳಾಪುರ: ಮಹಿಳಾ ದಿನ ಕೇವಲ ಒಂದು ದಿನದ ಆಚರಣೆಯಲ್ಲ ಬದಲಾಗಿ ಮಹಿಳೆಯರ ಸಮಾನತೆಗಾಗಿ ನಡೆಯುತ್ತಿರುವ ನಿರಂತರ ಹೋರಾಟದ ಸಂಕೇತ ಎಂದು…
ಕೇಂದ್ರ ಮೀಸಲು ಪೊಲೀಸ್ ಪಡೆ (CRPF) 87ನೇ ಸ್ಥಾಪನಾ ದಿನಾಚರಣೆ ಹಿನ್ನೆಲೆ ಕರ್ನಾಟಕ ಮತ್ತು ಕೇರಳ ವಲಯದ CRPF ಬೆಂಗಳೂರು…
ಮದ್ಯಪ್ರಾಚ್ಯಗಳ ದೇಶಗಳಲ್ಲಿ ನಡೆಯುತ್ತಿರುವ ಯುದ್ದಗಳಿಂದಾಗಿ ಎಲ್.ಪಿ.ಜಿ ಕೊರತೆ ದೇಶಕ್ಕೆ ಎದುರಾಗಿದೆ. ಹೋಟೆಲ್ ಗಳಲ್ಲಿ ವಾಣಿಜ್ಯ ಸಿಲಿಂಡರ್ ಗಳ ಅಭಾವ ಸೃಷ್ಟಿಯಾಗಿ…
ಮಧ್ಯಪ್ರಾಚ್ಯದಲ್ಲಿ ಯುದ್ಧದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಅಭಾವದ ಪರಿಸ್ಥಿತಿ ಸೃಷ್ಟಿಯಾಗಿರುವ ವರದಿಗಳ ನಡುವೆ ಗೃಹ ಬಳಕೆಯ…