ಕಲರ್ ಕಲರ್ ಮೆಕ್ಕೆಜೋಳ ಬೆಳದ ರೈತ: ಅದು ಎಲ್ಲಿ ಎಂತೀರಾ…? ಮಾಹಿತಿ ಇಲ್ಲಿದೆ ಓದಿ….

ಕೆಂಪು, ನೀಲಿ, ನೇರಳೆ, ಕಪ್ಪು ಮತ್ತು ಮಿಶ್ರ ಬಣ್ಣದ ಮೆಕ್ಕೆಜೋಳದ ತೆನೆಗಳು ಈಗ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿಯ ಹೊಲಗಳಲ್ಲಿ ಅರಳಿವೆ. ಸಾಮಾನ್ಯವಾಗಿ ಹಳದಿ ಅಥವಾ ಬಿಳಿ ಬಣ್ಣದಲ್ಲೇ ಕಂಡುಬರುವ ಜೋಳಕ್ಕಿಂತ ವಿಭಿನ್ನ ಬಣ್ಣದಲ್ಲಿ ಮಿನುಗುವ ಈ ತಳಿಗಳು ಕೃತಕವಾಗಿ ಬಣ್ಣ ಹಚ್ಚಿದವುಗಳಲ್ಲ, ಸಹಜವಾಗಿ ಬಣ್ಣಗಳನ್ನು ಹೊಂದಿರುವ ಅಪರೂಪದ ಜೋಳದ ಪ್ರಭೇದಗಳು.

ಈ ವಿಶೇಷ ಜೋಳವನ್ನು ತಾಲ್ಲೂಕಿನ ರೈತ ಎ.ಎಂ. ತ್ಯಾಗರಾಜ್ ತಮ್ಮ ಹೊಲದಲ್ಲಿ ಯಶಸ್ವಿಯಾಗಿ ಬೆಳೆಸಿದ್ದಾರೆ. ಕಡು ಕೆಂಪು, ನೇರಳೆ, ನೀಲಿ, ಹಳದಿ ಮತ್ತು ಕೆಂಪು–ಕಪ್ಪು ಮಿಶ್ರಿತ ಬಣ್ಣದ ಕಾಳುಗಳಿಂದ ತುಂಬಿದ ತೆನೆಗಳನ್ನು ನೋಡಲು ಸುತ್ತಮುತ್ತಲಿನ ರೈತರು ಹರಿದು ಬರುತ್ತಿದ್ದಾರೆ.

ಬಣ್ಣ ಬಣ್ಣ ಜೋಳದ ಇತಿಹಾಸ

ದಕ್ಷಿಣ ಅಮೆರಿಕಾದಲ್ಲಿ ಸುಮಾರು 3000 ವರ್ಷಗಳ ಹಿಂದೆಯೇ ಈ ಬಣ್ಣದ ಜೋಳ ಬೆಳೆದ ದಾಖಲೆಗಳಿವೆ. ಕ್ರಿ.ಶ. 1330 ರಿಂದ 1521ರವರೆಗೆ ಮೆಕ್ಸಿಕೋ ದೇಶದಲ್ಲಿ ವಾಸಿಸಿದ್ದ ಅಜಟೆಕ್ ಜನಾಂಗದವರ ಪ್ರಮುಖ ಆಹಾರವೂ ಇದೇ. ಇಂದಿಗೂ ಮೆಕ್ಸಿಕೋ, ಪೆರು ಮತ್ತು ಇತರೆ ದಕ್ಷಿಣ ಅಮೆರಿಕಾ ದೇಶಗಳಲ್ಲಿ ಈ ಜೋಳವನ್ನು ಆಹಾರ ಹಾಗೂ ಪಾನೀಯ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಪೆರು ದೇಶದ ಪ್ರಸಿದ್ಧ “ಚೀಚಾ ಮೊರಾಡ” ಪಾನೀಯ ಇದೇ ಬಣ್ಣದ ಜೋಳದಿಂದ ತಯಾರಾಗುತ್ತದೆ.

ನಮ್ಮ ದೇಶದಲ್ಲಿಯೂ ಮಿಜೋರಾಂ ರಾಜ್ಯದಲ್ಲಿ ಈ ಜೋಳವನ್ನು “ಮಿಮ್ ಬಾನ್” (ಜಿಗುಟಾದ ಜೋಳ) ಎಂಬ ಹೆಸರಿನಲ್ಲಿ ಬೆಳೆಯುತ್ತಾರೆ. ಇದಕ್ಕೆ ಸಿಹಿ ಮತ್ತು ಒಗರಿನ ರುಚಿಯಿದ್ದು, ಬೇಯಿಸಿದಾಗ ಇನ್ನಷ್ಟು ರುಚಿಕರವಾಗುತ್ತದೆ.

ಪೋಷಕಾಂಶಗಳ ಆಗರ

ಮೆಕ್ಸಿಕೋ ಮತ್ತು ಪೆರು ದೇಶಗಳಲ್ಲಿ ಹೆಚ್ಚಾಗಿ ಬೆಳೆದಿರುವ ಈ ಜೋಳ ಪೋಷಕಾಂಶಗಳ ಭಂಡಾರವಾಗಿದೆ. ಕಬ್ಬಿಣಾಂಶ ಹೆಚ್ಚಿದ್ದು, ರಕ್ತ ಉತ್ಪತ್ತಿಗೆ ನೆರವಾಗುತ್ತದೆ ಹಾಗೂ ರಕ್ತಹೀನತೆ ತಡೆಗಟ್ಟುತ್ತದೆ. ದೇಹದಾರ್ಢ್ಯತೆ ಹೆಚ್ಚಿಸುತ್ತದೆ. ಥಯಾಮಿನ್, ರಿಬೋಫ್ಲಾವಿನ್, ನಿಯಾಸಿನ್ ಸೇರಿದಂತೆ ವಿಟಮಿನ್ A ಮತ್ತು ವಿಟಮಿನ್ B ಸಮೃದ್ಧವಾಗಿದೆ.

ಆರೋಗ್ಯ ಪ್ರಯೋಜನಗಳು

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮಧುಮೇಹ ಮತ್ತು ಬೊಜ್ಜು ನಿಯಂತ್ರಣಕ್ಕೆ ಸಹಕಾರಿ. ಉರಿಯೂತ ನಿವಾರಕ ಹಾಗೂ ಕ್ಯಾನ್ಸರ್ ವಿರೋಧಿ ಗುಣಗಳನ್ನೂ ಹೊಂದಿದೆ. ನರಮಂಡಲದ ಕಾರ್ಯನಿರ್ವಹಣೆ ಸುಧಾರಿಸುತ್ತದೆ. ರಕ್ತದೊತ್ತಡ ನಿಯಂತ್ರಣ ಮತ್ತು ಮೂತ್ರಪಿಂಡ, ಕಣ್ಣಿನ ಆರೋಗ್ಯ ಸುಧಾರಿಸಲು ಸಹಕಾರಿ.

ಅಮೆರಿಕಾ ದೇಶಗಳಲ್ಲಿ ಬಣ್ಣದ ಜೋಳದಿಂದ ಪಾಪ್‌ಕಾರ್ನ್, ಚಿಪ್ಸ್, ಹಿಟ್ಟು ಹಾಗೂ ಪಾನೀಯಗಳನ್ನು ತಯಾರಿಸಲಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದನ್ನು “ಸೂಪರ್ ಫುಡ್” ಎಂದು ಕರೆಯಲಾಗುತ್ತಿದ್ದು, ಹೆಚ್ಚು ಬೇಡಿಕೆ ಇದೆ. ಆದರೆ ಇಂತಹ ಅಪರೂಪದ ಜೋಳವನ್ನು ನೋಡುವುದಕ್ಕೆ ಅಮೆರಿಕಾದತ್ತ ಮುಖ ಮಾಡುವ ಅಗತ್ಯವಿಲ್ಲ. ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿಯ ರೈತ ಎ.ಎಂ. ತ್ಯಾಗರಾಜ್ ಅವರ ಹೊಲದಲ್ಲಿಯೇ ಈ ನಿಧಿ ಸಿಗುತ್ತದೆ.

Ramesh Babu

Journalist

Recent Posts

ಕೆ.ಸಿ.ವ್ಯಾಲಿಯಿಂದ ಜಿಲ್ಲೆಯ ರೈತರ ಬದುಕು ಹಸನು- ಕಾಂಗ್ರೆಸ್‌ ಮುಖಂಡ ಜನಪಹಳ್ಳಿ ನವೀನ್‌

ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್‌ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…

2 hours ago

ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು  ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…

3 hours ago

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆ: ಮಕ್ಕಳು, ಶಿಕ್ಷಕ ಭಾವುಕ

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…

5 hours ago

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.‌ ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…

13 hours ago

ಚುನಾವಣಾ ಫಲಿತಾಂಶದ ವಿಶ್ಲೇಷಣೆ…..

ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…

15 hours ago

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್: ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸಲು ಸಭೆ

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…

1 day ago