ದೊಡ್ಡಬಳ್ಳಾಪುರ ತಾಲ್ಲೂಕಿನ ಕೊನಘಟ್ಟ ಗ್ರಾಮದ ಜೆಡಿಎಸ್ ಮುಖಂಡ ಹಾಗೂ ಕರ್ನಾಟಕ ರಾಜ್ಯ ವನ್ನಿಕುಲ ಕ್ಷತ್ರಿಯ (ತಿಗಳರ) ಸಂಘದ ನಿರ್ದೇಶಕ ಮಂಜುನಾಥ್ ಕೊನಘಟ್ಟ ಮತ್ತು ರಾಮಣ್ಣ ಮನೆಗೆ ಜೆಡಿಎಸ್ ರಾಜ್ಯ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟನೆ ಮಾಡುವ ಮೂಲಕ ಬಲಪಡಿಸಬೇಕು.ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕಾಗಿ ನಿರಂತರ ದುಡಿದಿರುವ ಕಾರ್ಯಕರ್ತರು ಸಾಕಷ್ಟು ಜನರಿದ್ದು, ಕಾರ್ಯಕರ್ತರ ಧ್ವನಿಯಾಗಿ ರಾಜ್ಯ ಜೆಡಿಎಸ್ ಕರ್ತವ್ಯ ನಿರ್ವಹಿಸಲಿದೆ ಕಾರ್ಯಕರ್ತರೆಲ್ಲರೂ ಒಟ್ಟಾಗಿ ಪಕ್ಷ ನಿಷ್ಠೆಯಿಂದ ಶ್ರಮಿಸುವ ಮೂಲಕ ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ವನ್ನಿಕುಲ ಕ್ಷತ್ರಿಯ ತಿಗಳರ ಸಂಘದ ವತಿಯಿಂದ ಕರಗ ದೇವತೆಯ ನೆನಪಿನ ಕಾಣಿಕೆ ನೀಡಿ ನಿಖಿಲ್ ಕುಮಾರಸ್ವಾಮಿಯವರನ್ನು ಗೌರವಿಸಲಾಯಿತು.
ಈ ವೇಳೆ ದೇವನಹಳ್ಳಿ ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ ವಿ ಮಂಜುನಾಥ್, ದೊಡ್ಡಬಳ್ಳಾಪುರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹರೀಶ್ ಗೌಡ, ರಾಜ್ಯ ಪ್ರಮುಖರಾದ ಡಾ.ವಿಜಿ ಕುಮಾರ್, ಮುಖಂಡರಾದ ಜಿ ಸತ್ಯನಾರಾಯಣ ಟಿಎಪಿಎಂಸಿಯ ನಿರ್ದೇಶಕ ಅಂಜನ್ ಗೌಡ, ಲಕ್ಷ್ಮಿ ನಾಗೇಶ್, ಆನಂದ್ ಕೊನಘಟ್ಟ, ಲಿಂಗನಹಳ್ಳಿ ಆನಂದ್, ಮಾಜಿ ನಗರಸಭೆ ಸದಸ್ಯ ಕೆಂಪರಾಜು,ನಗರಸಭೆ ಸದಸ್ಯರಾದ ಪ್ರಭ ನಾಗರಾಜು, ಕರಗ ಪೂಜಾರಿ ನಾಗರಾಜ್ ಸೇರಿದಂತೆ ಹಿರಿಯ ಮುಖಂಡರು ಮತ್ತು ಕೊನಘಟ್ಟ ಪಂಚಾಯಿತಿಯ ಕಾರ್ಯಕರ್ತರು ಗ್ರಾಮಸ್ಥರು ಹಾಜರಿದ್ದರು.
ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…
2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…
ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…
ಬೆಂಗಳೂರು ಗ್ರಾಮಾಂತರ: ಮೊಬೈಲ್ ಫೋನ್ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್ ಕೇವಲ ಸಂಪರ್ಕ…
ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…
ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ…