ದೊಡ್ಡಬಳ್ಳಾಪುರ:ಸರಳ, ಸುಸ್ಪಷ್ಟ ಕನ್ನಡವನ್ನು ಬಳಸಿ ಕಾರ್ಯಕ್ರಮಗಳ ನಿರೂಪಣೆಯ ಮೂಲಕ ಗಮನ ಸೆಳೆದಿದ್ದ ನಿರೂಪಕಿ ಹಾಗೂ ನಟಿ ಅಪರ್ಣಾ ಅವರ ನಿಧನ ಹಿನ್ನಲೆ ಇಲ್ಲಿನ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಶುಕ್ರವಾರ ನುಡಿನಮನ ಹಾಗೂ ಶ್ರದ್ದಾಂಜಲಿ ಕಾರ್ಯಕ್ರಮ ನಡೆಯಿತು.
ಅಪರ್ಣಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು.
ಬಳಿಕ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಪ್ರೊ.ರವಿಕಿರಣ್ ಕೆ.ಆರ್, ಅಪರ್ಣಾ ಅವರು ಕನ್ನಡ ಕಿರುತೆರೆಯಲ್ಲಿ ಕಾರ್ಯಕ್ರಮ ನಿರೂಪಕಿಯಾಗಿ ಜನಪ್ರಿಯತೆ ಪಡೆದವರು. ದೂರದರ್ಶನದ ಮೂಲಕ ಆರಂಭವಾದ ಅವರ ನಿರೂಪಣಾ ಪಯಣ ಆಕಾಶವಾಣಿ, ಹಲವು ಖಾಸಗಿ ವಾಹಿನಿಗಳಲ್ಲೂ ಗಮನ ಸೆಳೆದಿತ್ತು. ಸರ್ಕಾರಿ ಕಾರ್ಯಕ್ರಮಗಳ ಅಚ್ಚುಕಟ್ಟಾದ ನಿರೂಪಣೆಗೂ ಅವರು ಹೆಸರಾಗಿದ್ದರು. ಬೆಂಗಳೂರು ಮೆಟ್ರೋ ಉದ್ಘೋಷಕಿಯಾಗಿಯೂ ಅವರ ದನಿ ಎಲ್ಲ ಕನ್ನಡಿಗರ ಮನೆ-ಮನವನ್ನು ಮುಟ್ಟಿತ್ತು ಎಂದು ಸ್ಮರಿಸಿದರು.
ಭಾಷೆಯ ಘನತೆಗೆ ಯಾವುದೇ ಲೋಪವಾಗದಂತೆ ಸಮರ್ಥವಾಗಿ ಭಾಷೆಯನ್ನು ಬಳಕೆ ಮಾಡುವ ಕೌಶಲ ಹೊಂದಿದ್ದ ಅವರು, ಸರಳ, ಸ್ಪಷ್ಟ ಹಾಗೂ ಅಪಭ್ರಂಶರಹಿತ ಹಿತಕಾರಿ ಕನ್ನಡವನ್ನು ಬಳಕೆ ಮಾಡುತ್ತಿದ್ದ ರೀತಿಯೇ ವಿಭಿನ್ನ. ಕನ್ನಡ ಸಿನಿಮಾ ಕ್ಷೇತ್ರದಲ್ಲೂ ತನ್ನದೇ ಆದ ವಿಶಿಷ್ಟ ಛಾಪನ್ನು ಅವರು ಮೂಡಿಸಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಮಾತನಾಡಿ, ಕನ್ನಡಿಗರು ಎಂದೂ ಮರೆಯದ ದನಿ ಅಪರ್ಣ ಅವರದ್ದು. ದೂರದರ್ಶನ ವಾಹಿನಿಯ ಹಲವು ಕಾರ್ಯಕ್ರಮಗಳನ್ನು ಅವರು ಪ್ರಸ್ತುತಪಡಿಸುತ್ತಿದ್ದ ರೀತಿ ಅತ್ಯಂತ ಮನನೀಯವಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಆರ್.ರಮೇಶ್, ಕಾರ್ಯದರ್ಶಿ ಅರವಿಂದ್, ಸಂಘಟನಾ ಕಾರ್ಯದರ್ಶಿ ನರೇಂದ್ರ, ಮುಖಂಡರಾದ ಉದಯ್, ವಿನಯ್ ಕುಮಾರ್, ಶಿವಾನಂದ್, ಶಕುಂತಲಾ ಮತ್ತಿತರರು ಹಾಜರಿದ್ದರು.
ದೊಡ್ಡಬಳ್ಳಾಪುರ ನಗರದ ಶಾಲಾ ಆವರಣದ ಸುತ್ತಮುತ್ತ ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಏ.4ರಂದು ದೊಡ್ಡಬಳ್ಳಾಪುರ…
ನಾನು ವೃತ್ತಿಯಲ್ಲಿ ವಕೀಲನಾಗಿದ್ದೇನೆ. ವಕೀಲ ವೃತ್ತಿಯಲ್ಲಿ ಬಂದಂತಹ ಹಣದಿಂದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ದಡಘಟ್ಟಮಡಗು ಸಮೀಪ ಸರ್ವೇ ನಂ…
"ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ " - ಡಾಕ್ಟರ್ ಬಾಬಾ ಸಾಹೇಬ್…
Cheap Emotional Support Animal Letter: Your Guide Understanding Cheap Emotional Support Animal Letters In recent…
Understanding ESA Letters for Mental Health Support The Role of ESA Letters in Mental Health…
ತಲಾ ಆದಾಯದಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ. ಆದ್ದರಿಂದ ದೇಶಕ್ಕೆ ಕಾಂಗ್ರೆಸ್ ಬೇಕು. ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ…