ಕುಣಿಯೋದಕ್ಕೆ ಕೈಲಾಗದವನು ನೆಲ ಡೊಂಕು ಎಂದು ಹೇಳಿ ನುಣಿಚಿಕೊಳ್ಳುವುದುಂಟು, ಆದರೆ ಸಾಧನೆ ಮಾಡುವ ಛಲ ಇದ್ದವನು ಯಾವ ಕುಂಟು ನೆಪ ಹೇಳದೇ ಸಾಧನೆ ಮಾಡಿ ತೋರಿಸುತ್ತಾನೆ.
ಮನುಷ್ಯನಿಗೆ ಪಂಚೇಂದ್ರಿಯಗಳು ಅತಿ ಮುಖ್ಯ, ದೇಹದಲ್ಲಿ ಯಾವುದಾದರೂ ಒಂದು ಪಂಚೇಂದ್ರಿಯವನ್ನ ಶಾಶ್ವತವಾಗಿ ಕಳೆದುಕೊಂಡರೂ ಜೀವನದಲ್ಲಿ ತುಂಬಾ ಸಮಸ್ಯೆ ಅನುಭವಿಸಬೇಕಾಗುತ್ತದೆ. ಪಂಚೇಂದ್ರಿಯ ಲೋಪಕ್ಕೆ ಒಳಗಾಗಿರುವವರು ಜೀವನದಲ್ಲಿ ಕುಗ್ಗಿ ಹೋಗಿರುತ್ತಾರೆ. ಅದರಲ್ಲಿ ಕೆಲವರು ಕುಗ್ಗದೇ, ಜಗ್ಗದೇ ಎಲ್ಲವನ್ನೂ ಸವಾಲಾಗಿ ಸ್ವೀಕರಿಸಿ ಹಲವು ಮಹತ್ತರವಾದ ಸಾಧನೆಗಳನ್ನು ಮಾಡಿ ಇತರರಿಗೂ ಸ್ಫೂರ್ತಿಯಾಗಿ ನಿಂತಿರುವ ಹಲವಾರು ಉದಾಹರಣೆ ನಮ್ಮ ಕಣ್ಣು ಮುಂದಿವೆ.
ಭೂಮಿಕಾ ಅವರಿಗೆ ಕಣ್ಣು ಕಾಣದಿದ್ದರೂ ರುಚಿ ರುಚಿಯಾದ, ಘಮಘಮಿಸುವ ಅಡುಗೆ ಮಾಡುತ್ತಾರೆ. ಅಡುಗೆ ಮಾಡುವುದನ್ನು ತನ್ನ ಪತಿಯ ಬಳಿ ವಿಡಿಯೋ ಮಾಡಿಸಿ ನಂತರ ಯೂಟ್ಯೂಬ್ ಗೆ ಅಪ್ಲೋಡ್ ಮಾಡುತ್ತಾರೆ. ಇದೂವರೆಗೆ ಸುಮಾರು ಸಾವಿರ ಅಡುಗೆ ಮಾಡಿರುವ ವಿಡಿಯೋಗಳನ್ನು ಭೂಮಿಕಾ ಅವರು ತಮ್ಮ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಭೂಮಿಕಾ ಅವರು ಹುಟ್ಟಿನಿಂದಲೇ ಅಂಧತ್ವ ಹೊಂದಿದವರಲ್ಲ. ಮದುವೆಯಾಗಿ 10 ವರ್ಷಗಳ ನಂತರ ತಮ್ಮ ದೃಷ್ಟಿ ಕಳೆದುಕೊಂಡವರು. 5ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಬರುವ ಅಪರೂಪದ ಕಣ್ಣಿನ ಕಾಯಿಲೆ ‘ಆಪ್ಟಿಕಲ್ ನೂರೈಟಿಸ್’ ಇವರ ಅಂಧತ್ವಕ್ಕೆ ಕಾರಣವಾಗಿದೆ.
2010ರಲ್ಲಿ ಸಣ್ಣದಾಗಿ ತಲೆನೋವು ಬಂದಿರುತ್ತದೆ. ತಲೆನೋವಿಗೆ ಚಿಕಿತ್ಸೆ ಪಡೆಯಲು ಹೋದಾಗ ಕಣ್ಣಿನ ಸಮಸ್ಯೆ ಇರುವ ಬಗ್ಗೆ ವೈದ್ಯರು ಕುಟುಂಬದವರಿಗೆ ತಿಳಿಸುತ್ತಾರೆ. ನಂತರ ನಾನಾ ಕಡೆ, ವಿವಿಧ ಕಣ್ಣಿನ ಪರೀಕ್ಷೆ, ಆರ್ಯುವೇದ ಪರೀಕ್ಷೆಗಳನ್ನು ತಜ್ಞ ವೈದ್ಯರಿಂದ ಮಾಡಿಸಿಕೊಂಡರು ಸರಿಹೋಗದ ಕಾಯಿಲೆ.
ಹಂತಹಂತವಾಗಿ 2018ರಲ್ಲಿ ಸಂಪೂರ್ಣವಾಗಿ ತಮ್ಮ ದೃಷ್ಟಿಯನ್ನು ಕಳೆದುಕೊಂಡು ಶಾಶ್ವತ ಕತ್ತಲ ಲೋಕಕ್ಕೆ ಬರುತ್ತಾರೆ. ಕಣ್ಣು ಕಳೆದುಕೊಂಡ ಭೂಮಿಕಾ ಅವರು ಮಾನಸಿಕವಾಗಿ ವ್ಯಥೆಗೊಳಗಾಗಿ ಜೀವನ ಸಾಕೆನಿಸುವ ಮಟ್ಟಕ್ಕೆ ಚಿಂತನೆ ಮಾಡುತ್ತಾರೆ. ಆಗ ಭೂಮಿಕಾ ಕುಟುಂಬ ಕುಗ್ಗಿ ಹೋಗಿದ್ದ ಜೀವಕ್ಕೆ ಆತ್ಮಸ್ಥೈರ್ಯ ತುಂಬಿ ಖಿನ್ನತೆಯಿಂದ ಹೊರತಂದು ಖುಷಿಯಾಗಿಡುತ್ತಾರೆ.
ಅಡುಗೆ ಕೋಣೆಯಲ್ಲಿ ಯಾವ ಪದಾರ್ಥ, ಯಾವ ವಸ್ತು ಎಲ್ಲಿರುತ್ತೆ ಎಂಬುದು ಚೆನ್ನಾಗಿ ಗೊತ್ತು, ಚಕಚಕ ಅಂತಾ ತರಕಾರಿ ಕಟ್ ಮಾಡುತ್ತಾರೆ, ಲವಲವಿಕೆಯಿಂದ ಅಡುಗೆ ಮನೆಯಲ್ಲಿ ಓಡಾಡುತ್ತಾರೆ. ತರಕಾರಿ, ಹಣ್ಣುಗಳನ್ನು ಕೈಗಳಿಂದ ಸ್ಪರ್ಶಿಸಿ ಹಾಗೂ ವಾಸನೆ ನೋಡಿ ಕೊಳೆತು ಹೋಗಿದಿಯೋ, ಅಥವಾ ಚೆನ್ನಾಗಿದಿಯೋ ಎಂಬುದು ತಿಳಿದುಕೊಳ್ಳುತ್ತಾರೆ. ಚೆನ್ನಾಗಿದ್ದರೆ ಮಾತ್ರ ಅಡುಗೆಗೆ ಬಳಸುತ್ತಾರೆ.
ಬ್ಯಾಚುಲರ್ಸ್ ಯುವಕ ಯುವತಿಯರು ಸುಲಭವಾಗಿ ಸ್ವತಃ ತಾವೇ ಅಡುಗೆ ಮಾಡಿಕೊಳ್ಳುಲು ಅನುಕೂಲವಾಗುಂತೆ ಅಡುಗೆ ಮಾಡುವ ಮೂಲಕ ಸಲಹೆ ನೀಡುತ್ತಾರೆ.
ಭೂಮಿಕಾ ಅವರು ಮಾಡಿದಂತಹ ಅಡುಗೆ, ವಿಧ ವಿಧ ಅಡುಗೆಗಳನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ‘ಭೂಮಿಕಾ ಕಿಚನ್’ ಯೂಟ್ಯೂಬ್ ಚಾನೆಲ್ ನ್ನು ವೀಕ್ಷಿಸಿ, ಸಬ್ ಸ್ಕ್ರೈಬ್ ಆಗಿ ಭೂಮಿಕಾ ಅವರನ್ನು ಪ್ರೋತ್ಸಾಹಿಸಬೇಕಾಗಿದೆ.
ಒಟ್ಟಾರೆ ಇವರ ಸಾಧನೆಗೆ ನಾವೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಲೇಬೇಕಾಗಿದೆ. ಕೆಲವರು ಅಡುಗೆ ಮನೆಗೆ ಹೋಗೋದೆ ಕಷ್ಟ. ಅಂತಹವರು ಭೂಮಿಕಾ ಕಿಚನ್ ನೋಡಿದರೆ ಖಂಡಿತ ಅಡುಗೆ ಮಾಡಲು ಮುಂದಾಗುತ್ತಾರೆ ಆದ್ದರಿಂದ ಭೂಮಿಕಾ ಅವರು ಎಲ್ಲರಿಗೂ ಸ್ಫೂರ್ತಿದಾಯಕ ಮಹಿಳೆಯಾಗಿದ್ದಾರೆ.
ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು…
ದೂಡ್ಡಬಳ್ಳಾಪುರದ ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಕಡೇ ಕಾರ್ತೀಕ ಸೋಮವಾರ ಪ್ರಯುಕ್ತ ಈ ದಿನ ಬೆಳಿಗ್ಗೆ ಗಣಪತಿ…
ದೊಡ್ಡಬಳ್ಳಾಪುರ: ನಾಳೆ (ನ.18) ನಗರದ ಹೊರವಲಯದಲ್ಲಿರುವ 66/11ಕಿವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ತಾಲೂಕಿನ ಹಲವೆಡೆ ವಿದ್ಯುತ್…
18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…
ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…
ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…