Categories: Crime

ಒಂದೇ ಊರಿನ ಎದುರು ಬದರು ಮನೆ ವಾಸಿಗಳು: ಜೊತೆಯಾಗಿ ರಿಯಲ್ ಎಸ್ಟೇಟ್ ವ್ಯವಹಾರ: ಹತ್ತು ವರ್ಷದಿಂದ ಪ್ರತ್ಯೇಕ ವ್ಯವಹಾರ ಶುರು: ಇಬ್ಬರ ನಡುವೆ ಹುಟ್ಟಿಕೊಂಡಿದ್ದ ವೈಷಮ್ಯ ಇದೀಗ ಓರ್ವನ ಕಿಡ್ನಾಪ್ ಆ್ಯಂಡ್​ ಮರ್ಡರ್ ನಲ್ಲಿ ಅಂತ್ಯ

ಒಂದೇ ಊರಿನ ಎದುರು ಬದರು ಮನೆ ವಾಸಿಗಳು. ಜೊತೆಯಾಗಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದರು. ಆದ್ರೆ ಕಳೆದ ಹತ್ತು ವರ್ಷದಿಂದ ಪ್ರತ್ಯೇಕವಾಗಿ ವ್ಯವಹಾರ ಶುರುವಿಟ್ಟುಕೊಂಡಿದ್ದರು. ಜೊತೆಗೆ ಇಬ್ಬರ ನಡುವೆ ಹುಟ್ಟಿಕೊಂಡಿದ್ದ ವೈಷಮ್ಯ ಇದೀಗ ಓರ್ವನ ಕಿಡ್ನಾಪ್ ಆ್ಯಂಡ್​ ಮರ್ಡರ್ ನಲ್ಲಿ ಅಂತ್ಯವಾಗಿದೆ. ಆನೇಕಲ್​​ನಲ್ಲಿ ಅಪಹರಣವಾಗಿದ್ದ ರಿಯಲ್‌ ಎಸ್ಟೇಟ್‌ ಏಜೆಂಟ್‌ ಶವ ತಮಿಳುನಾಡಿನಲ್ಲಿ ಪತ್ತೆಯಾಗಿದೆ.

ಆನೇಕಲ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ನನ್ನು ದುಷ್ಕರ್ಮಿಗಳು ಹತ್ಯೆ ಮಾಡಲಾಗಿದೆ.

ಹೊನ್ನಕಳಸಾಪುರ ಗ್ರಾಮದ ನಿವಾಸಿ ಗೋಪಾಲ್‌ ಮೊನ್ನೆ ಸಂಜೆ 7.30 ರ ಸುಮಾರಿನಲ್ಲಿ ಕರ್ಪೂರು ಗೇಟ್‌ ಬಳಿ ಕಾರಿನಲ್ಲಿ ಹೋಗುತ್ತಿದ್ದಾಗ ಆತನ ಕಾರಿಗೆ ದುರ್ಷ್ಕಮಿಗಳು ವಾಹನದಿಂದ ಅಪಘಾತವೆಂಬಂತೆ ಡಿಕ್ಕಿ ಹೊಡೆದಿದ್ದಾರೆ. ನಂತರ ಗೋಪಾಲ್‌ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದು, ಬಳಿಕ ತಮಿಳುನಾಡಿಗೆ ಕರೆದೊಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಮಾರ್ಚ್ 08ರಂದು ಸ್ನೇಹಿತನಿಗೆ ಹೆಣ್ಣು ನೋಡುವ ಕಾರ್ಯಕ್ರಮಕ್ಕೆ ಹೋಗಿ ವಾಪಸ್ಸಾಗ್ತಿದ್ದ ಗೋಪಾಲ್​​ ಕಾರಿಗೆ ಇನ್ನೊಂದು ಕಾರು ಡಿಕ್ಕಿಯಾಗಿತ್ತು. ಈ ವೇಳೆ ಕಾರಿನಿಂದ ಇಳಿಯುತ್ತಿದ್ದಂತೆ ಗೋಪಿ ಹಾಗೂ ಸ್ನೇಹಿತ ಅತೀಶ್​ಗೆ ಪೆಪ್ಪರ್​ಸ್ಪ್ರೇ ಹೊಡೆದ ಕಿರಾತಕರ ಗ್ಯಾಂಗ್​ ಗೋಪಿಯನ್ನು ಕಿಡ್ನ್ಯಾಪ್​ ಮಾಡಿ ಎಸ್ಕೇಪ್​ ಆಗಿತ್ತು.

ಇನ್ನು ಘಟನೇ ನಡೀತಿದ್ದಂತೆ ಗೋಪಾಲ್​ ಜೊತೆಗಿದ್ದ ಸ್ನೇಹಿತ ಸತೀಶ್​ ಪೊಲೀಸರಿಗೆ ದೂರು ನೀಡಿದ್ದರು. ಜೊತೆಗೆ ಕುಟುಂಬಸ್ಥರೂ ಕೂಡಾ ಹೊನ್ನಕಳಶಾಪುರದ ಮೋಹನ್ ಬಾಬು ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದರು. ಆದ್ರೆ ಮಾರ್ಚ್ 09ರಂದು ತಮಿಳುನಾಡಿನ ಡೆಂಕಣೀಕೋಟೆ ಬಳಿ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಗೋಪಿ ಶವ ಪತ್ತೆಯಾಗಿದೆ. ರೊಚ್ಚಿಗೆದ್ದ ಕುಟುಂಬಸ್ಥರು ಆನೇಕಲ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದು ಮಾತ್ರವಲ್ಲದೆ ,ಆರೋಪಿ ಮೋಹನ್ ಬಾಬು ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಅಂದಹಾಗೆ ಮೃತ ಗೋಪಾಲ್​ ಹಾಗೂ ಆರೋಪಿ ಮೋಹನ್​ ಬಾಬು ಮೊದಲು ಜೊತೆಯಾಗಿ ರಿಯಲ್​ ಎಸ್ಟೇಟ್​ ವ್ಯವಹಾರ ಮಾಡುತ್ತಿದ್ದರು. 10 ವರ್ಷದ ಹಿಂದೆ ಗೋಪಾಲ್​ ಸ್ವಾತಿ ಎಂಬ ಯುವತಿಯನ್ನ ಮದುವೆಯಾಗಿದ್ದ. ಆದ್ರೆ ಮೋಹನ್​ಗೂ ಆಕೆ ಮೇಲೆ ಮೋಹವಿತ್ತಂತೆ. ಇದು ಇಬ್ಬರ ಮಧ್ಯೆ ದ್ವೇಷಕ್ಕೆ ಕಾರಣವಾಗಿದೆ. ಜೊತೆಗೆ ವ್ಯವಹಾರದಲ್ಲೂ ಏಳಿಗೆ ಸಹಿಸದ ಮೋಹನ್​, 2 ವರ್ಷದ ಹಿಂದೆಯೂ ಗೋಪಿಯನ್ನ ಕಿಡ್ನ್ಯಾಪ್​ ​ ಮಾಡಿ ಹಲ್ಲೆ ಮಾಡಿದ್ನಂತೆ. ಆದ್ರೆ , ಮಾರ್ಚ್ 08 ಮಾತ್ರ 25 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಮೋಹನ್​ ಬಾಬು ಆತನ ಜೀವವನ್ನೇ ತೆಗೆದಿದ್ದಾನೆ.

Ramesh Babu

Journalist

Recent Posts

ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಒಂದೇ ದಿನ ಇಬ್ಬರು ಯುವಕರು ಆತ್ಮಹತ್ಯೆ….!

ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲವೆಂದು ಮನನೊಂದು ಒಂದೇ ದಿನ ರಾಜ್ಯದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಗಳು ಚಿಕ್ಕಮಗಳೂರು…

8 hours ago

ದೇವರ ಆಶೀರ್ವಾದದಿಂದಲೇ ಎರಡು ಬಾರಿ ಸಿಎಂ ಆಗಿದ್ದೇನೆ- ಸಿಎಂ ಸಿದ್ದರಾಮಯ್ಯ

ನಮ್ಮ ಮನೆ ದೇವರಾದ ರಾಮೇಶ್ವರ–ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ…

8 hours ago

ತೂಬಗೆರೆಯಲ್ಲಿಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ: ಗ್ರಾಮೀಣ ಜನರ ಆರೋಗ್ಯ ಬಹಳ ಮುಖ್ಯ- ಡಾ. ಜ್ಞಾನೇಶ್ವರಿ

ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಅತ್ಯಂತ ಅವಶ್ಯಕ. ಇಂತಹ ಶಿಬಿರಗಳು ಕಾಲಕಾಲಕ್ಕೆ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಲೇ…

9 hours ago

ಜಾತ್ರೆಯಲ್ಲಿ ವ್ಯಕ್ತಿಯ ಭೀಕರ ಕೊಲೆ

ಜಾತ್ರೆಯೊಂದರಲ್ಲಿ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂಗನಗೌಡ ಪಾಟೀಲ್…

16 hours ago

ಲಾರಿ-ಕಾರು ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು

ಲಾರಿ-ಕಾರು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕು ರಾಜಾಪುರ ಬಳಿ ನಡೆದಿದೆ. ಬೆಂಗಳೂರು…

17 hours ago

ಹಸಿವಿನ ಔಷಧಿ ಮತ್ತು ಮತದಾನ…..

ಇತ್ತೀಚೆಗೆ Social Media ಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ...... ಒಬ್ಬ ಬಾಲಕ ಡಾಕ್ಟರ್ ಬಳಿ " ಹಸಿವು ಹೋಗಲಾಡಿಸಲು…

20 hours ago