ರಾತ್ರಿ ರಿಸೆಪ್ಷನ್ ಮುಗಿಸಿಕೊಂಡು ಬೆಳಗ್ಗೆ ತಾಳಿ ಕಟ್ಟುವ ವೇಳೆ ಮದುವೆ ಮುರಿದು ಹೋಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಾಲೆಪುರದ ಕಲ್ಯಾಣ ಮಂಟಪದಲ್ಲಿಂದು ನಡೆದಿದೆ..
ರಾತ್ರಿ ರಿಸೆಪ್ಷನ್ ಮಾಡಿಕೊಂಡ ವರ, ಬೆಳಗ್ಗೆ ತಾಳಿ ಕಟ್ಟುವ ವೇಳೆ ವಧುವಿನ ಮೇಲೆ ವರ ಅನುಮಾನಗೊಂಡು ತಾಳಿ ಕಟ್ಟದೇ ಮದುವೆ ಮಂಟಪದಿಂದ ಹಾರ ತೆಗೆದು ಬಿಸಾಕಿ ಹೋಗಿದ್ದಾನೆ.
ಯುವತಿ ಮೇಲೆ ಅನುಮಾನವಿದೆ ಎಂದು ಹೇಳಿದ ಯುವಕ ಕೊನೆ ಕ್ಷಣದಲ್ಲಿ ಮದುವೆ ನಿರಾಕರಿಸಿದ್ದಾನೆ ಎನ್ನಲಾಗಿದೆ.
ಈ ಹಿಂದೆ ಹುಡುಗಿ ಬೇರೆಯವನನ್ನ ಲವ್ ಮಾಡಿದ್ದಾಳೆ ಅಂತ ವರನ ಕಿರಿಕ್ ಮಾಡಿದ್ದಾನೆ. ಈ ಯುವತಿ ಮದುವೆಗೂ ಮುಂಚೆಯೆ ಯುವಕನ ಬಳಿ ಎಲ್ಲಾ ವಿಚಾರ ಹೇಳಿದ್ದಳು ಎನ್ನಲಾಗಿದೆ.
ಎಲ್ಲಾ ಆಗಿದ್ದು ಆಗಿದೆ ಎಂದೇಳಿ ಮದುವೆ ಒಪ್ಪಿಕೊಂಡು, ಮದುವೆ ಮಂಟಪಕ್ಕೂ ಬಂದು ನಿನ್ನೆ ರಾತ್ರಿ ನಗು ನಗುತ್ತಾ ಆರತಕ್ಷತೆ ಮಾಡಿಕೊಂಡಿಸಿಕೊಂಡ ವರ, ಬೆಳಗ್ಗೆ ತಾಳಿ ಕಟ್ಟುವ ಸಮಯಕ್ಕೆ ಮದುವೆ ಬೇಡ ಎಂದು ಹೇಳಿ ಹೈಡ್ರಾಮ ಮಾಡಿ ಮದುವೆ ನಿಲ್ಲಿಸಿದ್ದಾನೆ ಎಂದು ತಿಳಿದುಬಂದಿದೆ…
ಇದೀಗ ವಧು ಮತ್ತು ವರನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ವಧುವಿಗೆ ನ್ಯಾಯ ಕೊಡಿಸಿ ಅಂತ ವಧು ಕುಟುಂಬಸ್ಥರ ಒತ್ತಾಯ ಮಾಡಿದ್ದಾರೆ.
ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದೊಡ್ಡಬಳ್ಳಾಪುರ: ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದರೆನ್ನಲಾದ ಮೂವರು ನೈಜೀರಿಯಾ…
ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು. ಎಣಿಕೆಯಲ್ಲಿ…
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ಟ್ರಾಲಿಯಲ್ಲಿ ಚಿನ್ನದ ಬಿಸ್ಕೆಟ್‌ಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಪ್ರಯಾಣಿಕರನ್ನು ಡೈರೆಕ್ಟರೇಟ್…
ನೆಲಮಂಗಲ: ಕಡಿಮೆ ಶಿಕ್ಷಣದ ನಡುವೆಯೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಂಡು ಸಾಧನೆ ಮಾಡಿರುವ ನೆಲಮಂಗಲ ತಾಲೂಕಿನ…
ನೊಬೆಲ್ ಪ್ರಶಸ್ತಿ ಘೋಷಣೆಯ ವಾರ....... ಈ ವಾರ ಪ್ರಕಟವಾಗುತ್ತಿರುವ ನೊಬೆಲ್ ಪ್ರಶಸ್ತಿಗಳ ಕಡೆಯೂ ಸ್ವಲ್ಪ ಮನಸ್ಸು ಹರಿಯಲಿ ಮತ್ತು ಅರಿಯಲಿ..........…