Categories: ಕೋಲಾರ

ಇತರೆಲ್ಲಾ ಮಾಧ್ಯಮಗಳೊಂದಿಗೆ ಸೆಣಸುವುದು ಮುದ್ರಣ ಮಾಧ್ಯಮಕ್ಕೆ ಸವಾಲು-ನಿರಂಜನವಾನಳ್ಳಿ

ಕೋಲಾರ:- ಕಾಲ ಕಾಲಕ್ಕೆ ಎದುರಾಗಿ ಹೋಗುತ್ತಿರುವ ಇತರೆಲ್ಲಾ ಮಾಧ್ಯಮಗಳೊಂದಿಗೆ ಸೆಣಸುವುದು ಮುದ್ರಣ ಮಾಧ್ಯಮಕ್ಕೆ ಸವಾಲಾಗಿದೆ ಮತ್ತು ಯಾರು ಪತ್ರಕರ್ತರು ಎಂಬುದನ್ನು ಮಾಡುವ ಕಾಲದಲ್ಲಿರುವ ಸುದ್ದಿ ಮಾಧ್ಯಮ ಇಂದು ಸಂಕಟದಲ್ಲಿದೆ ಎಂದು ತಿಳಿಸಿದ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನವಾನಳ್ಳಿ ಜಿಲ್ಲೆಯ ಪತ್ರಕರ್ತರಿಗಾಗಿ ವಿವಿಯಿಂದ ಡಿಪ್ಲೊಮೋ ಕೋರ್ಸ್ ತೆರೆಯುವ ಭರವಸೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪತ್ರಿಕಾದಿನ, ವೈದ್ಯರ ದಿನ,ಲೆಕ್ಕಪರಿಶೋಧಕರ ದಿನ ಎಲ್ಲವೂ ಜು.೧ ಆಗಿದೆ ವೈದ್ಯರು ದೇಹಕ್ಕೆ ಒಳಿತಾಗುವ ಕೆಲಸ ಮಾಡುವಂತೆ ಪತ್ರಕರ್ತರು ಸಮಾಜಕ್ಕೆ ಒಳಿತಾಗುವ ಕೆಲಸ ಮಾಡುತ್ತಿದ್ದು, ಮಾಧ್ಯಮ ಪ್ರತಿನಿಧಿಗಳು ಸಮಾಜದ ವೈದ್ಯರು ಎಂದು ಅಭಿಪ್ರಾಯಪಟ್ಟರು.

ಸಮಾಜದ ನಾಡಿಮಿಡಿತ ಅರ್ಥಮಾಡಿಕೊಂಡು ಸಾಗಬೇಕಾದ ಪತ್ರಕರ್ತರಿಗೆ ಸಾಮಾಜಿಕ ಹೊಣೆಗಾರಿಯೂ ಅಗತ್ಯವಿದೆ, ಇಡೀ ಮಾಧ್ಯಮ ಬದಲಾವಣೆ ಹಂತದಲ್ಲಿದ್ದು, ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಚಾಲನೆ, ಫೇಸ್‌ಬುಕ್‌ಗಳು ಯಾರ ಹಂಗಿಲ್ಲ ಇವಕ್ಕೆ ಗೇಟ್ ಕೀಪರ್ ಇಲ್ಲ ಆದರೆ ಮುದ್ರಣ ಮಾಧ್ಯಮಕ್ಕೆ ಗೇಟ್ ಕೀಪರ್ ಇದ್ದು, ಈ ಎಲ್ಲದರ ನಡುವೆಯೂ ವಸ್ತುನಿಷ್ಟವಾದ ಸುದ್ದಿಸಂಪ್ರದಾಯ ಪಾಲಿಸಿಕೊಂಡು ಬಂದಿದೆ ಎಂದರು.

ಪತ್ರಕರ್ತರಿಗಾಗಿಯೇ ಡಿಪ್ಲೋಮೋ ಕೋರ್ಸ್
ಬೆಂಗಳೂರು ಉತ್ತರ ವಿವಿಯಿಂದ ಹಾಲಿ ಪತ್ರಕರ್ತರಿಗಾಗಿಯೇ ಡಿಪ್ಲೋಮೋ ಕೋರ್ಸ್ ತೆರೆಯಲು ತಾವು ಸಿದ್ದರಿದ್ದು, ಶನಿವಾರ, ಭಾನುವಾರವೂ ತರಗತಿ ನಡೆಸುವ ಮೂಲಕ ನೀವು ಸಹಕಾರ ನೀಡಿದರೆ ಪತ್ರಿಕಾ ಭವನದಲ್ಲೇ ತರಗತಿ ನಡೆಸಿ ಪ್ರಮಾಣ ಪತ್ರ ನೀಡಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಪತ್ರಿಕೋದ್ಯಮದ ಮೌಲ್ಯ ಕಾಪಾಡಿಕೊಳ್ಳಲು ಭಾಷೆಯ ಅಗತ್ಯವಿದೆ, ಪತ್ರಿಕೋಧ್ಯಮ ತರಗತಿಗೆ ಬರುವ ಅನೇಕರಿಗೆ ಕನ್ನಡ,ಇಂಗ್ಲೀಷ್ ಬರೊಲ್ಲ ಆದ್ದರಿಂದ ಮೊದಲು ಭಾಷೆ ಕಟ್ಟುವ ಕೆಲಸವಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಹಾಗೂ ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ ಮಾತನಾಡಿ ಪ್ರತಿಭಾವಂತ ಪತ್ರಕರ್ತರು ಇಂದು ಪತ್ರಿಕಾರಂಗಕ್ಕೆ ಅಗತ್ಯವಿದ್ದು, ಪೋಷಕರು ತಮ್ಮ ಮಕ್ಕಳನ್ನು ಮೆಡಿಕಲ್,ಇಂಜಿನಿಯರಿಂಗ್‌ಗೆ ಸೀಮಿತ ಮಾಡದೇ ಪತ್ರಿಕೋದ್ಯಮ ಓದಲು ಪ್ರೇರಣೆ ನೀಡಬೇಕು ಎಂದು ತಿಳಿಸಿದರು.

ಪತ್ರಿಕೋದ್ಯಮ ಶಿಕ್ಷಣ ಪಡೆದರೆ ಪತ್ರಕರ್ತರೇ ಆಗಬೇಕಿಂದಿಲ್ಲ, ಸರ್ಕಾರಿ ಉದ್ಯೋಗಗಳು ಸಿಗಲಿದೆ, ಸಚಿವರು,ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿಯೂ ಕೆಲಸ ಪಡೆಯಬಹುದು ಇದಕ್ಕೆ ಹಿರಿಯ ಪತ್ರಕರ್ತರಾಗಿದ್ದು, ಇದೀಗ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿರುವ ಕೆ.ವಿ.ಪ್ರಭಾಕರ್ ಸಾಕ್ಷಿಯಾಗಿದ್ದಾರೆ ಎಂದರು.

ಇತ್ತೀದಿನ ದಿನಗಳಲ್ಲಿ ಉತ್ತರ ಕನ್ನಡ,ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು ರಾಜ್ಯ ಮಾಧ್ಯಮವಲಯದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ, ಬಯಲು ಸೀಮೆಯಿಂದಲೂ ಪ್ರತಿಭಾನ್ವಿತ ಪತ್ರಕರ್ತರ ಅಗತ್ಯವಿದೆ ಎಂಬುದನ್ನು ಮನಗಂಡು ಪತ್ರಿಕೋದ್ಯಮ ಶಿಕ್ಷಣ ಪಡೆಯಲು ಸಲಹೆ ನೀಡಿದರು.

ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದಿನ ತಲೆಮಾರಿನಲ್ಲಿ ಯುವ ಪತ್ರಕರ್ತರನ್ನು ಹುಡುಕುವ ಪರಿಸ್ಥಿತಿ ತಲೆದೋರಲಿದೆ, ಜಿಲ್ಲಾ ಪತ್ರಕರ್ತರ ಸಂಘವೂ ಯುವ ಪತ್ರಕರ್ತರಿಗೆ ತರಬೇತಿ ಆಯೋಜಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಸ್ವಂತ ಶಕ್ತಿಯಿಂದ ಹಾಗೂ ಸ್ವಂತ ಭವನದಲ್ಲೇ ನಮ್ಮ ಪತ್ರಿಕಾದಿನಾಚರಣೆ ಮಾಡಬೇಕು ಎಂಬ ಆಶಯ ಈಡೇರಿದೆ, ಸಂಘದ ಹಿರಿಯರ ಮಾರ್ಗದರ್ಶನದಲ್ಲಿ ಕಳೆದ ೨೫ ವರ್ಷಗಳಿಂದ ಆತ್ಮಸಾಕ್ಷಿಗನುಗುಣವಾಗಿ ಸಾಗಿ ಬಂದಿದ್ದೇವೆ ಎಂದರು.

ಇಂದು ಇಡೀ ಪತ್ರಿಕೋದ್ಯಮಕ್ಕೆ ಗೇಟ್ ಕೀಪರ್ ಅಗತ್ಯವಿದೆ, ನಾವು ಯಡವಟ್ಟು ಮಾಡಿ ಸುದ್ದಿ ಮಾಡಿದರೆ ಅದರಿಂದ ಸಮಾಜಕ್ಕೆ ಹಾನಿ ಎಂದು ಎಚ್ಚರಿಸಿದ ಅವರು, ಮಕ್ಕಳು ಕೇವಲ ಇಂಜಿನಿಯರ್ ಡಾಕ್ಟರ್ ಮಾತ್ರವಲ್ಲ ಪತ್ರಕರ್ತರಾಗಿ ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಬೆಳೆಯಬಹುದಾಗಿದೆ ಅದಕ್ಕೆ ನಮ್ಮ ಜಿಲ್ಲೆಯವರೇ ಆದ ಕಾಮರೂಪಿ ಪ್ರಭಾಕರ್, ಸಚ್ಚಿ, ಪ್ರಭಾಕರ್ ಮತ್ತಿತರರು ಸಾಕ್ಷಿಯಾಗಿದ್ದಾರೆ ಎಂದರು.

ರಾಜ್ಯ ಪತ್ರಕರ್ತರ ಸಂಘದ ಖಜಾಂಚಿ ವಾಸುದೇವಹೊಳ್ಳ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ಮುನಿರಾಜು ಕೆ.ಎಸ್ ಗಣೇಶ್ ಮಾತನಾಡಿದರು, ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಸಾಧನೆ ಮಾಡಿದ 32 ಮಂದಿ ಪತ್ರಕರ್ತರ ಮಕ್ಕಳಿಗೆ ನಗದು ಪುರಸ್ಕಾರ ನೀಡಲಾಯಿತು. ಜಿಲ್ಲೆಯ ಹಿರಿಯ ಸಾಧಕರ ಹೆಸರಿನಲ್ಲಿ 9 ಮಂದಿ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ನಗರದ ವಂಶೋದಯ ಆಸ್ಪತ್ರೆಯಿಂದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಪತ್ರಿಕಾರಂಗದಲ್ಲಿನ ಜಿಲ್ಲೆಯ ಸಾಧಕರು
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡುವ ವಾರ್ಷಿಕ ಪ್ರಶಸ್ತಿಗೆ ಭಾಜನರಾದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿದ್ದು, ದಿವಂಗತ ಜಿ.ನಾರಾಯಣಸ್ವಾಮಿ ನೆನಪಿನಲ್ಲಿ: ಕೋಲಾರದ ಪ್ರಿಯಪತ್ರಿಕೆ ದಿನಪತ್ರಿಕೆಯ ಸಂಪಾದಕ ಕೋ.ನಾ.ಮಂಜುನಾಥ್, ಕೆ.ಆರ್.ಕೃಷ್ಣಸ್ವಾಮಿ ನೆನಪಿನಲ್ಲಿ: ಶ್ರೀನಿವಾಸಪುರದ ವಿಜಯಧ್ವನಿ ದಿನಪತ್ರಿಕೆಯ ತಾಲೂಕು ವರದಿಗಾರ ಎನ್.ಕೃಷ್ಣಮೂರ್ತಿ, ಬಿ.ವಿ.ನರಸಿಂಹಮೂರ್ತಿ ನೆನಪಿನಲ್ಲಿ: ಕೋಲಾರದ ಕೋಲಾರ ಶಕ್ತಿ ದಿನಪತ್ರಿಕೆಯ ಸಂಪಾದಕಿ ಕೆ.ಗೋಪಿಕಾಮಲ್ಲೇಶ್, ಎಂ.ಮಲ್ಲೇಶ್ ನೆನಪಿನಲ್ಲಿ: ಬೂದಿಕೋಟೆ ಸಂಯುಕ್ತಕರ್ನಾಟಕ ದಿನಪತ್ರಿಕೆಯ ಹೋಬಳಿ ವರದಿಗಾರ ಪ್ಯಾರೇಜಾನ್, ಬಿ.ಎನ್.ಗುರುಪ್ರಸಾದ್ ನೆನಪಿನಲ್ಲಿ: ಮಾಲೂರಿನ ಈಸಂಜೆ ದಿನಪತ್ರಿಕೆಯ ತಾಲೂಕು ವರದಿಗಾರ ಎಸ್.ವಿ.ಲೋಕೇಶ್, ಹೆಚ್.ಎನ್.ಸೋಮಶೇಖರಗೌಡ ನೆನಪಿನಲ್ಲಿ: ಕೋಲಾರದ ಸುವರ್ಣ ಟಿ.ವಿ ಜಿಲ್ಲಾ ವರದಿಗಾರ ಸಿ.ದೀಪಕ್, ಬಿ.ಆರ್ಮುಗಂ ನೆನಪಿನಲ್ಲಿ: ಕೆ.ಜಿ.ಎಫ್ ಹೊಸದಿಗಂತ ದಿನಪತ್ರಿಕೆಯ ತಾಲೂಕು ವರದಿಗಾರ ಸಿ.ಎ.ಮುರಳೀಧರರಾವ್, ಸಿ.ಎಂ.ರಂಗಾರೆಡ್ಡಿ ನೆನಪಿನಲ್ಲಿ: ಮುಳಬಾಗಿಲಿನ ಕನ್ನಡಮಿತ್ರ ದಿನಪತ್ರಿಕೆಯ ತಾಲೂಕು ವರದಿಗಾರ ಪಿ.ಎಲ್.ಅಮೃತಯ್ಯ, ವಿ.ಎಂ.ನಾಗಪ್ಪ ಅವರ ನೆನಪಿನಲ್ಲಿ: ಕೋಲಾರದ ಪ್ರಜಾ ಟಿ.ವಿ ಕೆಮರಾಮೆನ್ ಸಿ.ಎನ್.ಪವನ್‌ಕುಮಾರ್‌ರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿಯಲ್ಲಿ ಉತ್ತಮ ಸಾಧನೆ ಮಾಡಿದ 32 ಮಂದಿ ಪತ್ರಕರ್ತರ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಮಹಮದ್ ಯೂನಸ್ ಉಪಸ್ಥಿತರಿದ್ದು, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ, ಸಂಘದ ಖಜಾಂಚಿ ಎ.ಜಿ.ಸುರೇಶ್ ಕುಮಾರ್ ನಿರೂಪಿಸಿದರು. ಟಿ.ಕೆ.ನಾಗರಾಜ್ ಸ್ವಾಗತಿಸಿದರು. ವಿವಿಧ ಸಂಘಟನೆಗಳ ಮುಖಂಡರು, ಜಿಲ್ಲೆಯ ಹಿರಿಯ ಪತ್ರಕರ್ತರು, ವಿವಿಧತಾಲ್ಲೂಕುಗಳ ಪದಾಧಿಕಾರಿಗಳು, ಪತ್ರಕರ್ತರು ಹಾಜರಿದ್ದರು.

Ramesh Babu

Journalist

Recent Posts

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ…

3 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ, ಹಲ್ಲೆ ಯತ್ನ ಪ್ರಕರಣ: ಆರೋಪಿ ಯಶಸ್ವಿನಿ‌ ಗೌಡ, ಬೇಕರಿ ರಘುಗೆ ನ್ಯಾಯಾಂಗ ಬಂಧನ: ಸತ್ಯಕ್ಕೆ ಸಿಕ್ಕ ಜಯ ಎಂದ ಪ್ರಥಮ್

ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ‌ ಗೌಡ,…

3 hours ago

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 25 ಪ್ರವಾಸಿ ತಾಣಗಳು ಗುರುತು

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…

6 hours ago

ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…

9 hours ago

ತಿರುಮಗೊಂಡನಹಳ್ಳಿ ರೈಲ್ವೆ ಮೇಲ್ಸೇತುವೆ ಅತೀ ಶೀಘ್ರದಲ್ಲಿ ನಿರ್ಮಾಣ- ಸಚಿವ ಕೆ.ಎಚ್ ಮುನಿಯಪ್ಪನವರು ಯಾರನ್ನೂ ಕಡೆಗಣಿಸುವುದಿಲ್ಲ- ಆರ್.ಮುರುಳಿಧರ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಾರ್ಗದಲ್ಲಿ…

12 hours ago

ಮದ್ದೂರಿನ ಗಣೇಶ – ಮಸೀದಿ – ಕಲ್ಲು ತೂರಾಟ ಮತ್ತು ಜನಸಾಮಾನ್ಯ……

ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ,…

16 hours ago