Categories: ಲೇಖನ

“ಆಹಾರ ನೀತಿ ಸಂಹಿತೆ – 2025” ಜಾರಿಗೆ ಒತ್ತಾಯ

” ಅನ್ನ ದೇವರ ಮುಂದೆ

ಅನ್ಯ ದೇವರು ಉಂಟೆ,
ಅನ್ನವಿರುವತನಕ ಪ್ರಾಣವು,
ಜಗದೊಳಗನ್ನವೇ ದೈವ ಸರ್ವಜ್ಞ…….”

ವಿಶ್ವ ಆಹಾರ ದಿನದ ಸಂದರ್ಭದಲ್ಲಿ…..
ಅಕ್ಟೋಬರ್ 16…..

” ಆಹಾರ ನೀತಿ ಸಂಹಿತೆ – 2025 ”

ಇಡೀ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ “ಆಹಾರ ನೀತಿ ಸಂಹಿತೆ” ಜಾರಿಗೆ ಒತ್ತಾಯಿಸಿ ಆಹಾರ ಸಂರಕ್ಷಣಾ ಅಭಿಯಾನದ ವತಿಯಿಂದ ಮುಖ್ಯಮಂತ್ರಿಗಳು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಿಗೆ ಆಗ್ರಹ ಪೂರ್ವಕ ಮನವಿ…..

ಹಸಿವು ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನಗಳನ್ನು ಸ್ವಾಗತಿಸುತ್ತಾ……

ಸಾರ್ವಜನಿಕ ಸಮಾರಂಭಗಳಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ತೆಗೆದುಕೊಳ್ಳಬೇಕಾದ ಕೆಲವು ಕ್ರಮಗಳು ‌……..

1) ಆಹಾರ ಸಂರಕ್ಷಣೆಗಾಗಿ ಆಹಾರ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಕೂಡಲೇ ಜಾರಿಗೊಳಿಸಬೇಕು.

2) ಆಹಾರ ಸಂರಕ್ಷಣೆ ಕುರಿತಂತೆ ಮಕ್ಕಳಲ್ಲಿ ಅರಿವು ಮೂಡಿಸುವ ದಿಸೆಯಲ್ಲಿ ಶಾಲಾ ಪಠ್ಯದಲ್ಲಿ ಈ ವಿಷಯವನ್ನು ಅಳವಡಿಸಬೇಕು.

3) ಸಾರ್ವಜನಿಕ ಸಭೆ – ಸಮಾರಂಭಗಳಲ್ಲಿ ಆಹಾರ ಪೋಲಾಗುವುದನ್ನು ತಡೆಗಟ್ಟಲು ಜಾಗೃತಿ ಮೂಡಿಸುವುದು.

4) ವಿವಿಧ ಮಾಧ್ಯಮಗಳ ಮೂಲಕ ಸರ್ಕಾರ ನೀಡುವ ಜಾಹೀರಾತಿನಲ್ಲಿ ಆಹಾರ ಸಂರಕ್ಷಣೆ ಕುರಿತಂತೆ ಅರಿವು ಮೂಡಿಸುವುದು. ( ಧೂಮಪಾನ ಮತ್ತು ಮದ್ಯಪಾನದ ಅಪಾಯ ಕುರಿತು ಎಚ್ಚರಿಸುವಂತೆ. )

5) ಪ್ರತಿ ವರ್ಷ ಅಕ್ಟೋಬರ್ 16 ರಂದು ಸರ್ಕಾರದ ವತಿಯಿಂದ ವಿಶ್ವ ಆಹಾರ ದಿನವನ್ನು ರಾಜ್ಯ , ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಚರಿಸುವ ಮೂಲಕ ಆಹಾರ ಸಂರಕ್ಷಣೆ ಕುರಿತು ತಿಳಿವಳಿಕೆ ಮೂಡಿಸುವುದು.

6) ಆಹಾರ ಸಂರಕ್ಷಣೆ ಕುರಿತು ರೂಪುರೇಷೆಗಳ ಕರಡು ತಯಾರಿಕೆಗಾಗಿ ಕೃಷಿ ಮತ್ತು ಆಹಾರ ತಜ್ಞರನ್ನೊಳಗೊಂಡ ಸಮನ್ವಯ ಸಮಿತಿಯನ್ನು ರಚಿಸುವ ಮೂಲಕ ಆಹಾರ ಸಂರಕ್ಷಣೆಗೆ ವಿಶೇಷ ಒತ್ತು ನೀಡಬೇಕು.

7) ರಾಜ್ಯಾದ್ಯಂತ ಕಲ್ಯಾಣ ಮಂಟಪಗಳಲ್ಲಿ ಆಹಾರದ ಮಹತ್ವ ಸಾರುವ ಬರಹಗಳ ಫಲಕವನ್ನು ಅಳವಡಿಸಬೇಕು.

8) ರಾಜ್ಯದಾದ್ಯಂತ ಹೋಟೆಲು ಮತ್ತು ರೆಸ್ಟೋರೆಂಟ್, ಬೇಕರಿ, ಉಪಹಾರ ಮಂದಿರಗಳಲ್ಲಿ ಆಹಾರದ ಮಹತ್ವ ಸಾರುವ ಮತ್ತು ಆಹಾರ ವ್ಯರ್ಥ ಮಾಡದಿರುವ ಬಗ್ಗೆ ಫಲಕವನ್ನು ಅಳವಡಿಸಬೇಕು.

9) ಯಾವುದೇ ಮನರಂಜನಾ ಉದ್ಯಮಗಳಾದ ಧಾರವಾಹಿ, ಸಿನಿಮಾಗಳಲ್ಲಿ ಅಥವಾ ರಾಜಕೀಯ ಕಾರ್ಯಕ್ರಮಗಳಲ್ಲಿ ವ್ಯಕ್ತಿಗಳಿಗೆ ಹಾಲು , ಹಣ್ಣು ತರಕಾರಿ ಮುಂತಾದ ಆಹಾರ ಪದಾರ್ಥಗಳನ್ನು ಚೆಲ್ಲುವ, ನಾಶಮಾಡುವ ಅಥವಾ ದುರುಪಯೋಗಪಡಿಸುವುದನ್ನು ದಂಡಾರ್ಹ ಅಪರಾಧವೆಂದು ಘೋಷಿಸಬೇಕು / ನಿಷೇಧಿಸಬೇಕು.

10) ಈ ಜಾಗೃತಿಯ ಅನುಷ್ಠಾನಕ್ಕಾಗಿ ನೀತಿ ನಿಯಮಗಳನ್ನು ರೂಪಿಸಲು
” ಆಹಾರ ನೀತಿ ಸಂಹಿತೆಯ ” ಅಧ್ಯಯನ ಸಮಿತಿ ರಚಿಸಬೇಕು.
ಇದಕ್ಕೆ ಕನಿಷ್ಠ ಆರು ತಿಂಗಳ ಕಾಲಾವಧಿ ನಿಗದಿಪಡಿಸಬೇಕು.

11) ಇದರಲ್ಲಿ ಕನಿಷ್ಠ ‌ಹತ್ತು ಜನರ ವಿಷಯ ತಜ್ಞರನ್ನು ನೇಮಿಸಬೇಕು.
ಆಹಾರ ಇಲಾಖೆಯ ಕಾರ್ಯದರ್ಶಿ,
ಕಾನೂನು ಸಲಹೆಗಾರರು,
ಆಹಾರ ಜಾಗೃತಿ ಅಭಿಯಾನದ ಇಬ್ಬರು ಸದಸ್ಯರು,
ರೈತ ಮುಖಂಡರು,
ಆಹಾರ ಸಂಶೋಧನಾ ಕೇಂದ್ರದ ನಿರ್ದೇಶಕರು,
ಅಡಿಗೆ ಗುತ್ತಿಗೆದಾರರು,
ಹೋಟೆಲ್ ಮಾಲೀಕರ ಪ್ರತಿನಿಧಿ
ಕಡ್ಡಾಯವಾಗಿ ಇರಬೇಕು…

ಈ ಅಧ್ಯಯನ ವರದಿಯನ್ನು ಪರಿಶೀಲಿಸಿ ಕಾನೂನಾತ್ಮಕ ಜಾರಿ ಮಾಡಲು ಕಾಲ ಮಿತಿಯೊಳಗೆ ಶೀಘ್ರ ಕ್ರಮ ಕೈಗೊಳ್ಳಬೇಕು….

ಇದು ಕೆಲವು ಸಲಹೆಗಳಷ್ಟೆ. ಇದಕ್ಕಿಂತ ಉತ್ತಮ ಸಲಹೆಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿ ಜಾರಿಗೊಳಿಸಬೇಕು…..

ಇದರಿಂದಾಗಿ ಕೃಷಿ ಭೂಮಿಯ ಮೇಲಿನ ಒತ್ತಡ, ಆಹಾರದ ಹಂಚಿಕೆಯ ಮೇಲಿನ ಒತ್ತಡ, ಪೌಷ್ಟಿಕಾಂಶ ಕೊರತೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ….

ಪಾಶ್ಚಾತ್ಯ ದೇಶಗಳಲ್ಲಿ ನಾಗರಿಕ ಪ್ರಜ್ಞೆಯ ಕಾರಣದಿಂದ, ಇಸ್ಲಾಮಿಕ್ ದೇಶಗಳಲ್ಲಿ ಧಾರ್ಮಿಕ ನಂಬಿಕೆಯ ಕಾರಣ, ಬೌದ್ದ ಧರ್ಮದಲ್ಲಿ ಭಿಕ್ಷಾಟನೆ ನೀತಿಯ ಕಾರಣದಿಂದ, ಲಿಂಗಾಯತ ಸಮುದಾಯದಲ್ಲಿ ಶ್ರಮದ ಅನುಭಾವದ ಕಾರಣದಿಂದ ಆಹಾರ ವ್ಯರ್ಥವಾಗುವುದು ಕಡಿಮೆ. ಅದನ್ನು ಹೊರತುಪಡಿಸಿ ಭಾರತದಲ್ಲಿ ಬಹುತೇಕ ಶ್ರೀಮಂತರ ಒಣ ಪ್ರದರ್ಶನದ ಕಾರಣ ಆಹಾರ ತಯಾರಾದ ನಂತರ ಅತ್ಯಂತ ಹೆಚ್ಚು ನಷ್ಟವಾಗುತ್ತದೆ. ಅದನ್ನು ನಾವೆಲ್ಲರೂ ಸೇರಿ ತಡೆಗಟ್ಟುವ ನಿಟ್ಟಿನಲ್ಲಿ ಪ್ರಯತ್ನಿಸೋಣ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಯುವ ಆಪದ್ ಮಿತ್ರ ಯೋಜನೆ: ವಿಪತ್ತು ನಿರ್ವಹಣೆ ಕುರಿತು ಒಂದು ವಾರ ತರಬೇತಿ ಶಿಬಿರ

ಯುವ ಆಪದ್ ಮಿತ್ರ ಯೋಜನೆಯ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ದೊಡ್ಡಬಳ್ಳಾಪುರದ ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು…

8 hours ago

ಮಹಿಳೆಯರನ್ನು ಮಂಚಕ್ಕೆ ಕರೆದ ಆರೋಪ: ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅಮಾನತು

ಪೊಲೀಸ್ ಠಾಣೆಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರು ಕೊಡಲು ಬಂದ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಾರೆ ಎಂಬ ಆರೋಪದ ಮೇರೆಗೆ ಮೂಡುಬಿದಿರೆ…

8 hours ago

ಮುಂಗಾರು ಪೂರ್ವ ಮಳೆ: ಮಳೆಯಲ್ಲಿ ಸಾಲುಗಟ್ಟಿ ನಿಂತ ರಾಗಿ‌ ಮಾರಾಟ ಮಾಡಲು ಬಂದ ಟ್ರ್ಯಾಕ್ಟರ್ ಗಳು

ಇಂದು ಸಂಜೆ ಸುಮಾರು 4:30ರಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪ್ರಾರಂಭವಾದ ಮಳೆಯು ಸತತವಾಗಿ 7ಗಂಟೆಯವರೆಗೆ ಬಿದ್ದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿತು. ಅದೇರೀತಿ…

9 hours ago

ರಣ ಬಿಸಿಲಿನಿಂದ ಕಂಗೆಟ್ಟಿದ್ದ ಜನ: ಧರೆಗಿಳಿದ ವರ್ಷದ ಮೊದಲ ಮಳೆ: ಬಿಸಿಲಿನ ಬೇಗೆಗೆ ಬೆಂದಿದ್ದ ಭೂಮಿ ತಂಪು ತಂಪು: ಗುಡುಗು ಸಹಿತ ಬಿದ್ದ ಮಳೆ ಹನಿಗೆ ಜನ ಫುಲ್ ಖುಷ್

ಬಿಸಿಲಿನ ತಾಪ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರದ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಸಂಜೆ ವರ್ಷದ ಮೊದಲ ಮಳೆ ಸುರಿಯಿತು. ಬಂಗಾಳ…

10 hours ago

ನಾಳೆ (ಮಾ.18) ಎಸ್.ಎಸ್.ಎಲ್.ಸಿ ಪರೀಕ್ಷೆ -01: ಬೆಂ. ಗ್ರಾ ಜಿಲ್ಲೆಯಲ್ಲಿ 14,314 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ

2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮಾರ್ಚ್ 18 ಬುಧವಾರದಿಂದ ಏಪ್ರಿಲ್ 02 ಗುರುವಾರದ ವರೆಗೆ ಬೆಳಿಗ್ಗೆ 10:15 ಗಂಟೆಯಿಂದ ಮಧ್ಯಾಹ್ನ…

12 hours ago

ನೂತನ ಶಾಲಾ ಕಟ್ಟಡ ಮತ್ತು ಅಂಗನವಾಡಿ ಕೇಂದ್ರ ಉದ್ಘಾಟನೆ

ದೊಡ್ಡಬಳ್ಳಾಪುರ: ನಗರದ 4 ನೇ ವಾರ್ಡ್‌ನ ವಿನಾಯಕ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಸ್ಟಿಮೊ ಫೈ ಕಂಪನಿಯ…

19 hours ago