ಆಸ್ತಿ ವಿವಾದ: ಮಾವನ ಕೊಲೆಗೆ ಯತ್ನಿಸಿದ ತಂಗಿ ಮಗಳು: ಶೃತಿ & ಗ್ಯಾಂಗ್ ಲಾಂಗು ಮಚ್ಚು ಹಿಡಿದು ಮಧ್ಯರಾತ್ರಿ ಮನೆಗೆ‌ ನುಗ್ಗಿ ಕೊಲೆಗೆ‌ ಯತ್ನ: ದೃಶ್ಯ ಸಿಸಿಟಿವಿಯಲ್ಲಿ‌ ಸೆರೆ

ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಹೆಣ್ಣು ಮಕ್ಕಳ ದಬ್ಬಾಳಿಕೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಡುವೆ ಇದೀಗ‌ ಹಳೇ ದ್ವೇಷಕ್ಕೆ ಯುವತಿಯೊಬ್ಬಳು ತನ್ನ ಮಾವನನ್ನು ಕೊಲೆ ಮಾಡಲು ಗೂಂಡಾಗಳ ಗುಂಪು ಕಟ್ಟಿಕೊಂಡು ಪ್ರಯತ್ನ ಮಾಡಿದ್ದಾಳೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಮೂವರು ಪಾರಾಗಿದ್ದಾರೆ ಈ ಬಗ್ಗೆ ಕಂಪ್ಲೀಟ್ ರಿಪೋರ್ಟ್… ಇಲ್ಲಿದೆ ಓದಿ….

ಹೌದು…ಲಾಂಗು ಮಚ್ಚು ಹಿಡಿದು ಮಧ್ಯರಾತ್ರಿ ಮನೆಗೆ ಗುಂಪು ಕಟ್ಟಿಕೊಂಡು ನುಗ್ಗುತ್ತಿರುವ ದೃಶ್ಯ ಕಂಡು ಬಂದಿದ್ದು ಬೆಂಗಳೂರು ನಗರದ ಕುರುಡುಸೊಣ್ಣೇನಹಳ್ಳಿಯಲ್ಲಿ. ಪ್ರಭು ಎಂಬುವವರ ಮನೆ ಮೇಲೆ ತನ್ನ ತಂಗಿ ಮಗಳು ಶೃತಿ ಎಂಬುವಳು ಕೊಲೆ ಮಾಡುವ ಉದ್ದೇಶದಿಂದ ಮಧ್ಯರಾತ್ರಿ ಮನೆ ನುಗ್ಗಿದ್ದಾಳೆ. ನಾಲ್ಕೈದು ಗೂಂಡಾಗಳ ಗುಂಪು ಕಟ್ಟಿಕೊಂಡು ಪ್ರಭುನನ್ನು ಕೊಲೆ ಮಾಡಲು ಯತ್ನಸಿದ್ದಾಳೆ. ಆದರೆ ಅದೃಷ್ಟವಶಾತ್ ಪ್ರಭು ಮತ್ತು ಅವರ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಧ್ಯರಾತ್ರಿ ಏಕಾಏಕಿ ಮನೆಗೆ ನುಗ್ಗಿ ಶೃತಿ ಮತ್ತು ಗ್ಯಾಂಗ್ ಕಾಲಿಂಗ್ ಬೆಲ್ ಹೊಡೆದಿದ್ದಾರೆ. ಆಗ ಲಾಂಗು, ಮಚ್ಚು ಸೇರಿದಂತೆ ಇತರೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ.

ಇನ್ನೂ ಪ್ರಭು ಮತ್ತು ಶೃತಿ ಸಂಬಂಧಿಕರಾಗಿದ್ದು, ಜಮೀನು ವಿವಾದಕ್ಕೆ ಈ ರೀತಿ ಗೂಂಡಾಗಳನ್ನು ಗುಂಪು ಕಟ್ಟಿಕೊಂಡು ಕೊಲೆ ಪ್ರಯತ್ನ ಮಾಡಿದ್ದಾಳೆ. ಇನ್ನೂ ಕೊಲೆ ಮಾಡಲು ಪ್ರಯತ್ನಿಸಿದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಭುವನ್ನು ಕೊಲೆ ಮಾಡಲು ಯತ್ನಿಸಿದಾಗ ಮನೆಯ ಕಿಟಕಿ, ಬಾಗಿಲನ್ನು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಆವಲಹಳ್ಳಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಒಟ್ಟಾರೆ ಮಾವನನ್ನೇ ಕೊಲೆ ಮಾಡಲು ಶೃತಿ ಗೂಂಡಾಗಳನ್ನು ಗ್ಯಾಂಗ್ ಕಟ್ಟಿಕೊಂಡು ಬಂದಿರುವುದು ದುರದೃಷ್ಟಕರ ಸಂಗತಿ. ಏನಾದರೂ ಕಾನೂನಿನ ಮುಂದೆ ಎಲ್ಲರೂ ಒಂದೇ. ಈ ರೀತಿ ಮಧ್ಯೆ ರಾತ್ರಿ ಗ್ಯಾಂಗ್ ಕಟ್ಟಿಕೊಂಡು ರೌಡಿಸಂ ತೋರಿಸಲು ಬಂದವರನ್ನು ಪೊಲೀಸರು ಕೂಡಲೇ ಬಂಧಿಸಬೇಕಿದೆ.

Ramesh Babu

Journalist

Recent Posts

Документ_12

In der heutigen akademischen Welt steht die Qualität der schriftlichen Arbeiten im Mittelpunkt des Interesses.…

1 hour ago

‘ಆಸರೆ’ ಯೋಜನೆ: ಒಂಟಿ ಮಹಿಳೆಯರು ಮತ್ತು ಹಿರಿಯ ನಾಗರಿಕರ ಸುರಕ್ಷತೆ, ಭದ್ರತೆ, ಆರೋಗ್ಯ ನೆರವು ಹಾಗೂ ಯೋಗಕ್ಷೇಮ ವಿಚಾರಣೆ

'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…

9 hours ago

ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿಯಾದದ್ದು- ಸಿಎಂ ಸಿದ್ದರಾಮಯ್ಯ

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದ್ದಾರೆ..…

12 hours ago

ದಲಿತರ ಕಾಲೋನಿಗಿಲ್ಲ ಚರಂಡಿ ಭಾಗ್ಯ: ರಸ್ತೆ‌ ಮೇಲೆಯೇ ಹರಿಯುವ ಚರಂಡಿ ನೀರು: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಹಿಡಿ ಶಾಪ

ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ‌ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…

15 hours ago

ಸೆಲೂನ್ ನಲ್ಲಿ ಯುವಕನ‌ ಮೇಲೆ ಬಾಶೆಟ್ಟಿಹಳ್ಳಿ ಪ.ಪಂ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರಿಂದ ಹಲ್ಲೆ: ದೂರು ದಾಖಲು

ಸೆಲೂನ್ ನಲ್ಲಿ ಯುವಕನ‌ ಮೇಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ‌ಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರು ಹಲ್ಲೆ…

16 hours ago

ಬೆಂ.ಗ್ರಾ ನೂತನ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಆಗಿ ಎ.ವಿ ಲಕ್ಷ್ಮಿನಾರಾಯಣ ನೇಮಕ

ಎ.ವಿ ಲಕ್ಷ್ಮಿನಾರಾಯಣ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರನ್ನಾಗಿ ನೇಮಕ ಮಾಡಲಾಗಿದೆ.. ಈ ಹಿಂದೆ ತುಮಕೂರು…

18 hours ago