ದೊಡ್ಡಬಳ್ಳಾಪುರ : ಬಡವರು ನಿರ್ಗತಿಕರಿಗೆ ಹಂಚಿಕೆ ಮಾಡಲಾದ ಆಶ್ರಯ ಮನೆಗಳು ಬಲಾಢ್ಯರ ಪಾಲಾಗಿವೆ, ಅಕ್ರಮವಾಗಿ ಮನೆಗಳ ಬೀಗ ಹೊಡೆದು ಅಶ್ರಯ ಮನೆಗಳನ್ನ ಕಬಳಿಸಲಾಗಿದೆ, ನಕಲಿ ದಾಖಲೆ ಸೃಷ್ಠಿಸಿ ಅಕ್ರಮವಾಗಿ ವಾಸವಾಗಿರುವರನ್ನ ತೆರವು ಮಾಡುವಂತೆ ಆಗ್ರಹಿಸಿ ದೊಡ್ಡಬಳ್ಳಾಪುರದ ನಗರಸಭೆಯ ಮುಂದೆ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಪ್ರತಿಭಟನೆ ನಡೆಸಿತು.
ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ 2002ರಲ್ಲಿ ಅಶ್ರಯ ಯೋಜನೆಯಡಿ ಬಡವರು, ನಿರ್ಗತಿಕರು ಮತ್ತು ದಲಿತರಿಗೆ ನಿವೇಶಗಳ ಹಂಚಿಕೆ ಮಾಡಲಾಗಿದೆ, ಸುಮಾರು 50ಕ್ಕೂ ಹೆಚ್ಚು ಮನೆಗಳು ಇಲ್ಲಿನ ಸ್ಥಳೀಯ ಮುಖಂಡರೆಂದು ಕರೆಸಿಕೊಳ್ಳುವರ ವಶದಲ್ಲಿವೆ, ಅಕ್ರಮವಾಗಿ ವಾಸವಾಗಿರುವ ನಿವಾಸಿಗಳ ಮನೆಗಳನ್ನ ಖಾಲಿ ಮಾಡಿಸಿ, ಅಸಲಿ ಹಕ್ಕುಪತ್ರ ವಾರಸುದಾರರಿಗೆ ಆಶ್ರಯ ಮನೆಗಳನ್ನ ನೀಡುವಂತೆ ಪ್ರಬುದ್ಧ ಭೀಮ ಸೇನೆ ಒತ್ತಾಯಿಸಿದೆ.
ಮಾಧ್ಯಮದೊಂದಿಗೆ ಮಾತನಾಡಿದ ರಾಜ್ಯಾಧ್ಯಕ್ಷರಾದ ಯು.ಮುನಿರಾಜು, ರಾಜೀವ್ ಗಾಂಧಿ ಬಡಾವಣೆಯಲ್ಲಿನ ಸ್ಥಳೀಯ ಕೆಲವು ಮುಖಂಡರು ಅಕ್ರಮವಾಗಿ ಮನೆಗಳ ಬೀಗ ಹೊಡೆದು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ, ಅಕ್ರಮವಾಗಿ ದಾಖಲೆಗಳನ್ನ ಸೃಷ್ಠಿಸಿ ಅಸಲಿ ಹಕ್ಕುದಾರರಿಗೆ ವಂಚನೆ ಮಾಡಿದ್ದಾರೆ, ಹಕ್ಕುಪತ್ರದ ವಾರಸುದಾರರು ಮನೆಗಳ ಬಳಿ ಬಂದರೆ ದಬ್ಬಾಳಿಕೆ ದೌರ್ಜನ್ಯ ನಡೆಸಿ ಅಲ್ಲಿಂದ ಓಡಿಸುತ್ತಾರೆ, ಪೌರಾಯುಕ್ತರು ಪ್ರತಿ ಮನೆಗೂ ಭೇಟಿ ನೀಡಿ ದಾಖಲೆಗಳನ್ನ ಪರಿಶೀಲನೆ ಮಾಡಬೇಕು, ನಕಲಿ ವಾಸಿಗಳನ್ನ ಪತ್ತೆ ಮಾಡಿ ಅಸಲಿ ಹಕ್ಕುಪತ್ರ ಇರುವ ಜನರಿಗೆ ಮನೆಗಳನ್ನ ನೀಡುವಂತೆ ಒತ್ತಾಯಿಸಿದರು.
ನಗರಸಭೆಯ ಎಸ್ ಡಿಎ ನೌಕರ ನಕಲಿ ದಾಖಲೆ ಸೃಷ್ಠಿಸಿ ಅಂಜಾದ್ ಖಾನ್ ರವರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕು, ಅವರು ನೀಡಿರುವ ಅಂಕಪಟ್ಟಿ ನಕಲಿಯಾಗಿದ್ದು, ಅದನ್ನು ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಗೌರವ ಅಧ್ಯಕ್ಷ ವಿ.ನಾಗರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಚನ್ನಿಗರಾಯಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎ.ಮಂಜುನಾಥ್, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಕಾರ್ಯಾಧ್ಯಕ್ಷ ರಘುಕುಮಾರ್, ದೇವನಹಳ್ಳಿ ತಾಲೂಕು ಅಧ್ಯಕ್ಷ ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶಶಿಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾಲಿಗೆ ವೆಂಕಟೇಶ್, ರಾಜ್ಯ ಕಾರ್ಯದರ್ಶಿ ಮಹೇಶ್.ಎಂಡಿ, ಅಲ್ಪ ಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಕದ್ದರ್, ದೇವನಹಳ್ಳಿ ಮಹಿಳಾ ಘಟಕ ಅಧ್ಯಕ್ಷ ಸುಜಾತ, ಸೇರಿದಂತೆ ಮುಖಂಡರಾದ ಮಹಮ್ಮದ್ ಪೈಜುಲ್ಲಾ, ಜಬೀವುಲ್ಲಾ, ಅಂಜಾದ್ ಪಾಷಾ, ರವಿಕುಮಾರ್ ಇದ್ದರು
ನಾವು ಅಕ್ರಮ ವಲಸಿಗರಲ್ಲ, ವಂಚಕರಲ್ಲ, ಈ ಮಣ್ಣಿನ ಮೂಲ ನಿವಾಸಿಗಳು. ದಯವಿಟ್ಟು ನಮ್ಮ ಅಸ್ತಿತ್ವವನ್ನು, ಸ್ವಾಭಿಮಾನವನ್ನು ಪ್ರಶ್ನಿಸಬೇಡಿ. ನಾವು ಭಾರತೀಯರು......…
ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…
ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…
ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…
ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…
ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…