ನಾವು ಕಟ್ಟುತ್ತಿರುವ ತೆರಿಗೆ ಹಣ ನಮ್ಮ ಜೇಬಿಗೆ ವಾಪಾಸ್ ಬರಬೇಕಾದರೇ ಈ ಬಾರಿ ವಿಧಾನಸಭಾ ಚುನಾವಣೆ ಆಪ್ ಚುನಾವಣೆ ಆಗಬಾರದು, ಒಬ್ಬ ಅಭ್ಯರ್ಥಿ ಚುನಾವಣೆ ಆಗಬಾರದು, ಪ್ರತಿ ಮನೆಯ ಚುನಾವಣೆ ಇದಾಗಬೇಕು ಆಗಷ್ಟೆ ಬದಲಾವಣೆ ಸಾಧ್ಯ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕ ವಿಜಯ್ ಶರ್ಮ ಹೇಳಿದರು.
ನಗರದ ಆಪ್ ಕಛೇರಿಯಲ್ಲಿ ಪದಾಧಿಕಾರಿಗಳ ಆಯ್ಕೆ ಮತ್ತು ಬೈಕ್ ರ್ಯಾಲಿ ಕುರಿತು ಗುರುವಾರ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು, ದೆಹಲಿ ಚುನಾವಣೆಯಲ್ಲಿ ಹಿಂದು ಮುಸ್ಲಿಂ, ದಲಿತ, ಬ್ರಾಹ್ಮಣ, ಜಾತಿ, ಧರ್ಮ, ಭಾಷೆ ಎಲ್ಲಾ ಬಿಟ್ಟು ಒಂದಾದ ಮೇಲೆ 70 ಕ್ಷೇತ್ರಗಳಲ್ಲಿ ಗಳಿಗೆ 62 ಕ್ಷೇತ್ರದಲ್ಲಿ ಜಯಗಳಿಸಿ ದೆಹಲಿ ಗದ್ದುಗೆ ಏರಲು ಸಹಕಾರಿಯಾಯಿತು.
ಆಪ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಲ್ಲಿನ ಪ್ರತಿ ಮನೆಗೂ ಉಚಿತ ಮತ್ತು ಉತ್ತಮವಾದ ಆರೋಗ್ಯ, ಶಿಕ್ಷಣ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ವಿದ್ಯುತ್, ನೀರು, ಲೈಸೆನ್ಸ್ , ಹೀಗೆ ಹಲವು ಸೌಲಭ್ಯಗಳನ್ನು ಪಡೆಯಲು ಜನ ಕಛೇರಿ ಅಲೆದಾಟ ಇಲ್ಲ ಪ್ರತಿ ತಿಂಗಳು 10 ರಿಂದ 12 ಸಾವಿರ ಉಳಿತಾಯ ಪ್ರಾರಂಭವಾಗಿದೆ,
ನಾಲಾಯಕ್ ಕಾಂಗ್ರೆಸ್,ಜೆಡಿಎಸ್ ಪಕ್ಷ ಇಷ್ಟು ಅವಕಾಶ ನೀಡಿದ್ದೆವು ಇವರು ಯಾಕೆ ಮಾಡಿಲ್ಲ, ಸದ್ಯ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ ಇವರ ಕೈಲಿ ಯಾಕೆ ಮಾಡೊಕೆ ಆಗ್ತಾ ಇಲ್ಲ ಇದನ್ನು ರಾಜ್ಯದ ಜನತೆ ಯೋಚಿಸಬೇಕು ಎಂದರು.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಪುರುಷೋತ್ತಮ್ ಮಾತನಾಡಿ, ನಮ್ಮ ಪಕ್ಷ ಇತರೇ ಪಕ್ಷಗಳಂತೆ ಯಾವುದೇ ಆಮಿಷಗಳನ್ನು ಕೊಡುವುದಿಲ್ಲ, ಅರವಿಂದ್ ಕೇಜ್ರಿವಾಲ್ ಆದೇಶದಂತೆ ಪ್ರತಿ ಮನೆಗೂ ವಿದ್ಯೆ,ಆರೋಗ್ಯ ಮತ್ತು ನೆಮ್ಮದಿ ಅಂದೋಲನವನ್ನು ಮಾಡುತ್ತ ಹೋದರೇ ಜನಗಳೇ ಅರ್ಥ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ,
ಈಗ ತಾಲ್ಲೂಕಿನಾದ್ಯಂತ ದೇವಾಲಯಗಳಿಗೆ ಪ್ರವಾಸ, ಉಚಿತ ಸೀರೆ, ಕುಕ್ಕರ್ ಆಮಿಷಗಳಿಗೆ ಜನರು ಮರುಳಾಗುವುದಿಲ್ಲ ಮತ್ತು ಇವರ ಆಟ ಹೆಚ್ಚು ದಿನ ನಡೆಯುವುದಿಲ್ಲ, ಮತದಾರರು ಜಾಗೃತರಾಗಿದ್ದೂ ತಮ್ಮ ಮತಗಳನ್ನು ಹಣಕ್ಕಾಗಿ ಮಾರಿಕೊಳ್ಳದಿರಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಪದಾಧಿಕಾರಿಗಳು :
ತಾಲ್ಲೂಕು ಅಧ್ಯಕ್ಷರಾಗಿ ಜೆ.ಹರೀಶ್, ಉಪಾಧ್ಯಕ್ಷ ಇರ್ಫಾನ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಕೃಷ್ಣಮೂರ್ತಿ, ಕಾರ್ಯದರ್ಶಿ ಸುರೇಶ್,ಶೋಯೇಬ್ ಖಾನ್, ನರೇಂದ್ರಮೂರ್ತಿ, ವೀರಭದ್ರಯ್ಯ ಆಯ್ಕೆಯಾಗಿದ್ದಾರೆ.
ಈ ವೇಳೆ ಆಪ್ ನ ರಾಜ್ಯ ಕಾರ್ಯದರ್ಶಿ ಸುರೇಶ್ ರಾಥೋಡ್,ಜಂಟಿ ಕಾರ್ಯದರ್ಶಿ ಬಿ.ಕೆ.ಶಿವಪ್ಪ, ರಾಥೊಡ್ , ದೀಪಕ್ ಮತ್ತು ಕಾರ್ಯಕರ್ತರು ಇದ್ದರು.
ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…
ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…
ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…
2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಬಿಎಲ್‌ಒ ಅಥವಾ…