ತಾಲೂಕಿನ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿ.ಕಾಂ ಓದುತ್ತಿರುವ ವಿದ್ಯಾರ್ಥಿಯೊಬ್ಬ ಡ್ರೀಮ್ 11 ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡಲು ಹೋಗಿ ಬರೋಬ್ಬರಿ 2,38,995 ರೂ. ಕಳೆದುಕೊಂಡಿದ್ದಾನೆ.
ಈ ವಿದ್ಯಾರ್ಥಿ ಮೊದಲಿನಿಂದಲೂ ಡ್ರೀಮ್ 11 ನಲ್ಲಿ ಬೆಟ್ಟಿಂಗ್ ಆಡುತ್ತಿರುತ್ತಾನೆ. ಇನ್‌ಸ್ಟಾಗ್ರಾಮ್ ಅನ್ನು ಬಳಸುತ್ತಿದ್ದಾಗ, ಅದರಲ್ಲಿ ಒಂದು ಟೆಲಿಗ್ರಾಮ್ ಲಿಂಕ್ ಅನ್ನು ಕೊಟ್ಟಿದ್ದು, ನೀವು ಸೇರಿಕೊಂಡರೆ ನಾವು ನಿಮಗೆ 7 ಕ್ರಿಕೆಟ್ ತಂಡಗಳನ್ನು ನೀಡುತ್ತೇವೆ ಅವುಗಳನ್ನು ತೆಗೆದುಕೊಂಡು ಡ್ರೀಮ್ 11 ರಲ್ಲಿ ತಂಡವನ್ನು ರಚಿಸಿದರೆ, ನೀವು 1 ಕೋಟಿ ಹಣವನ್ನು ಗೆಲ್ಲಬಹುದು ಎಂದು ತಿಳಿಸುತ್ತಾರೆ. ನೀವು ಈ ಗುಂಪಿಗೆ ಸೇರಲು ಬಯಸಿದರೆ, ನೀವು ಹಣ ಕಟ್ಟಬೇಕೆಂದು ಹೇಳಿ ಜೂ.20 ರಂದು ಬೆಳಿಗ್ಗೆ 9.09 ಗಂಟೆಗೆ QR ಕೋಡ್ ಕಳುಹಿಸಲಾಗಿದ್ದು, ಇದಕ್ಕಾಗಿ ಈ ಯುವಕ ಫೋನ್ ಪೇ ಮೂಲಕ 1,999, 14,999, 21,999, 49,999 ಸೇರಿ ಒಟ್ಟು 88,996 ರೂ. ಹಣ ಪಾವತಿಸಿ ರಾಮ್ ಚೌಧರಿ ಎಂಬ ಹೆಸರಿನ ಟೆಲಿಗ್ರಾಮ್ ಗುಂಪಿಗೆ ಸೇರುತ್ತಾನೆ.
ಆ ದಿನವೇ ಭಾರತ vs ಅಫ್ಘಾನಿಸ್ತಾನ ಕ್ರಿಕೆಟ್ ಪಂದ್ಯವಿದ್ದು, ಟೆಲಿಗ್ರಾಮ್ ನಲ್ಲಿ 7 ಪಂದ್ಯಗಳನ್ನು ಕಳುಹಿಸುತ್ತಾರೆ. ಈ 7 ಪಂದ್ಯಗಳ ಪೈಕಿ ಡ್ರೀಮ್ 11 ರಲ್ಲಿ ಪಂದ್ಯಗಳನ್ನು ಆಯ್ಕೆ ಮಾಡುವಷ್ಟರಲ್ಲಿ ಸಮಯ ಆಗಿದ್ದರಿಂದ ಕೇವಲ 3 ಪಂದ್ಯಗಳನ್ನು ಮಾತ್ರ ಆಯ್ಕೆ ಮಾಡಿದ್ದಾನೆ. ಪಂದ್ಯ ಮುಗಿದ ನಂತರ ಅವರು ಕಳುಹಿಸಿದ 7 ತಂಡಗಳಲ್ಲಿ ಕೊನೆಯ ತಂಡವು ಗೆದ್ದಿದ್ದು, ಆತನಿಗೆ ಹಣ ಸಿಗಲಿಲ್ಲ.ಆಗ ಆತ ನನ್ನ ಹಣ ವಾಪಸ್ ಕೊಡಿ ಎಂದು ಕೇಳಿದ್ದಕ್ಕೆ ನಿಮ್ಮ ಹಣವನ್ನು ವಾಪಸ್ ಕೊಡುವುದಿಲ್ಲ. ನಿಮ್ಮ ಡೀಮ್ 11 ಐಡಿ ಮತ್ತೆ ಕ್ರಿಕೆಟ್ ಪಂದ್ಯದಲ್ಲಿ ತಂಡಗಳನ್ನು ಕಳುಹಿಸಿ ನಿಮ್ಮನ್ನು ಗೆಲ್ಲಿಸಿ ನಿಮ್ಮ ವಾಲೆಟ್ ಗೆ ಹಣ ಬರುತ್ತದೆ ಎಂದು ತಿಳಿಸುತ್ತಾರೆ.
ಆಗ ಜೂ.22ರಂದು ರಾತ್ರಿ 9.30ಕ್ಕೆ ಭಾರತ ಮತ್ತು ಬಾಂಗ್ಲಾದೇಶ ಪಂದ್ಯಗಳು ಇದ್ದಾಗ ಟೆಲಿಗ್ರಾಮ್‌ನಲ್ಲಿ ವಿದ್ಯಾರ್ಥಿಗೆ ನಿಮ್ಮ ಡ್ರೀಮ್ 11 ID ಅನ್ನು ಕಳುಹಿಸಿ ನಾವೇ ಟೀಮ್ ನ್ನು ಕಟ್ಟಿ ನಿಮ್ಮನ್ನು ಗೆಲ್ಲಿಸಿ ನಿಮ್ಮ ಹಣವನ್ನು ನಿಮಗೆ ಬರುವಂತೆ ಮಾಡುತ್ತೇವೆಂದು ಹೇಳಿ ಡ್ರೀಮ್ 11ಗೆ ಸೇರಿಸಲು ಹಣ ಕಟ್ಟಬೇಕೆಂದು ಹೇಳಿ 50 ಸಾವಿರ ರೂ.ಗಳನ್ನು ಫೋನ್ ಪೇ ಮಾಡಿಸಿಕೊಳ್ಳುತ್ತಾರೆ.
ಪಂದ್ಯ ಮುಗಿದ ನಂತರ, ನೀವು ಡ್ರೀಮ್ 11 ಪಂದ್ಯದಲ್ಲಿ 1.5 ಕೋಟಿ ಗೆದ್ದಿದ್ದೀರಾ ಎಂದು ಹೇಳಿ ಫೈನಲ್ ಪ್ರೋಸೆಸ್ ಗೆ ಹಣ ಬೇಕೆಂದು ಒಂದು ಬಾರಿ ರೂ. 54,999/- ಮತ್ತು ಇನ್ನೊಂದು ಬಾರಿ ರೂ. 45,000/-ಗಳನ್ನು ಫೋನ್ ಪೇ ಮೂಲಕ ಪಾವತಿ ಮಾಡಿಸಿಕೊಂಡಿರುತ್ತಾರೆ.
ನಂತರ ಆ ಯುವಕ ಹಣ ಕೇಳಿದರೆ ಮತ್ತೆ 25,000/- ಹಾಕಿದರೆ ನಿಮ್ಮ ಹಣ ನಿಮ್ಮ ವಾಲೆಟ್ ಗೆ ಹಾಕುತ್ತೇವೆ ಎನ್ನುತ್ತಾರೆ. ಹೀಗೆ ಮೋಸ ಮಾಡಿ ವಿದ್ಯಾರ್ಥಿಯ ಫೋನ್ ಪೇಯಿಂದ ಒಟ್ಟು ರೂ.2,38,995 ಪಾವತಿ ಮಾಡಿಸಿಕೊಂಡಿದ್ದಾರೆ.
ಮೋಸ ಹೋದ ನಂತರ ವಿದ್ಯಾರ್ಥಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿ, ಠೇವಣಿ ಮಾಡಿದ ರಾಮ್ ಚೌಧರಿ ಟೆಲಿಗ್ರಾಮ್ ಗ್ರೂಪ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾನೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಾರ್ಗದಲ್ಲಿ…
ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ,…
ಮಂಗಳವಾರ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಬೆಂಬಲಿತ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರು ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಅವರು ಉಪರಾಷ್ಟ್ರಪತಿ…
ದೊಡ್ಡಬಳ್ಳಾಪುರ : 40 ಕೋಟಿ ಮೌಲ್ಯದ ಸರ್ಕಾರಿ ಆಸ್ತಿಯನ್ನ ಸರ್ಕಾರದ ವಶಕ್ಕೆ ಪಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ ಬಸವರಾಜುರವರ…