ಆಕಾಸ ಏರ್‌ ವಿಮಾನ ಸಂಸ್ಥೆಯಿಂದ ವಿಶೇಷ ಔತಣ ಕೊಡುಗೆ ಘೋಷಣೆ

ಬೆಂಗಳೂರು: ಆಕಾಸ ಏರ್‌ ವಿಮಾನ ಸಂಸ್ಥೆಯು ಪ್ರಯಾಣಿಕರಿಗೆ ವಿಶೇಷ ಔತಣದ ಮೇಲೆ ಕೊಡುಗೆ ಘೋಷಣೆ ಮಾಡಿದೆ.

ವಿಮಾನದಲ್ಲಿ ವಿಶೇಷ ಭೋಜನ ಮಾಡಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಕೆಲವೊಮ್ಮೆ ನಮಗೆ ಹೊಂದಿಕೆಯಾಗದ ಆಹಾರ ಇರುವ ಕಾರಣ ಭೋಜನ ಸೇವಿಸದೇ ಪ್ರಯಾಣ ಮಾಡಿರುತ್ತೇವೆ. ಅದಕ್ಕಾಗಿಯೇ ಆಕಾಸ ಏರ್‌, ವಿಶೇಷ ಔತಣದ ಕೊಡುಗೆ ನೀಡಿದೆ.

ಈ ವಿಶೇಷ ಔತಣದಲ್ಲಿ ಆಲೂ ಟಿಕ್ಕಿ ಹಾಗೂ ಖಾರದ ರಗ್ಡಾ, ನಮಕ್ ಪಾರಾ ಮತ್ತು ಕಾಜು ಕಟ್ಲಿ ಸಿಹಿ ತಿಂಡಿ ಹಾಗೂ ಪ್ರಯಾಣಿಕರ ಆಯ್ಕೆಯ ಪಾನೀಯವನ್ನು ಒದಗಿಸಲಾಗುತ್ತದೆ. ಈ ಕೊಡುಗೆಯು ನವೆಂಬರ್ 30 ರ ವರೆಗೆ ಆಕಾಸ ಏರ್‌ ನೆಟ್‌ವರ್ಕ್‌ನಲ್ಲಿ ಒದಗಿಸಲಾಗುತ್ತದೆ. ಈ ಸ್ಪೆಷಲ್ ಔತಣವನ್ನು ಆಕಾಸ ಏರ್ ವೆಬ್‌ಸೈಟ್ www.akasaair.com ಹಾಗೂ ಮೊಬೈಲ್ ಆಪ್‌ನಲ್ಲಿ ಪ್ರೀ ಬುಕ್ ಮಾಡಬಹುದಾಗಿದೆ.

2022 ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದಾಗಿನಿಂದಲೂ ಆಕಾಸ ಏರ್‌ ವಿಶೇಷವಾಗಿ ಕ್ಯುರೇಟ್ ಮಾಡಿದ ಊಟದ ಆಯ್ಕೆಗಳನ್ನು ಒದಗಿಸುತ್ತಿದ್ದು, ಆಚರಣೆಗಳಿಗೆ ಸೂಕ್ತವಾದ ಪ್ರಾದೇಶಿಕ ವಿಶೇಷತೆಯನ್ನೂ ಇದು ಪ್ರತಿನಿಧಿಸಯತ್ತದೆ. ಮಕರ ಸಂಕ್ರಾಂತಿಯಿಂದ ವ್ಯಾಲಂಟೈನ್ಸ್‌ ಡೇ, ಹೋಳಿ, ಈದ್, ತಾಯಂದಿರ ದಿನ, ಅಂತಾರಾಷ್ಟ್ರೀಯ ಯೋಗ ದಿನ, ಮಾನ್ಸೂನ್‌ ಸೀಸನ್‌, ನವ್‌ರೋಝ್‌, ಓಣಮ್, ಗಣೇಶ ಚತುರ್ಥಿ, ದಸರಾ, ದೀಪಾವಳಿ ಮತ್ತು ಕ್ರಿಸ್‌ಮಸ್‌ ಸಮಯದಲ್ಲಿ ಈ ವಿಶೇಷ ಊಟವನ್ನು ಒದಗಿಸುತ್ತದೆ. ಹಬ್ಬದ ಊಟಗಳ ಜೊತೆಗೆ ಹಾರಾಟದ ಅನುಭವವನ್ನೂ ಉತ್ತಮವಾಗಿ ಒದಗಿಸುವುದನ್ನು ಕೆಫೆ ಆಕಾಸ ಮುಂದುವರಿಸಲಿದೆ. ರೆಗ್ಯುಲರ್ ಮೆನುವಿನಲ್ಲಿ ಕೇಕ್‌ಗಳ ಪ್ರೀ ಸೆಲೆಕ್ಷನ್ ಅನ್ನೂ ಇದು ಒದಗಿಸುತ್ತಿದ್ದು, ತಮ್ಮ ಪ್ರೀತಿ ಪಾತ್ರರ ಜನ್ಮ ದಿನಾಚರಣೆಗಳನ್ನು ಆಕಾಶದಲ್ಲೇ ಆಚರಣೆ ಮಾಡಲು ಅನುವು ಮಾಡಿಕೊಡುತ್ತದೆ.

ಕೆಫೆ ಆಕಾಸ ಆಗಾಗ್ಗೆ ತನ್ನ ಮೆನುವನ್ನು ರಿಫ್ರೆಶ್ ಮಾಡುತ್ತಿರುತ್ತದೆ. ವಿವಿಧ ಗುರ್ಮೆ ಊಟಗಳು, ತಿಂಡಿ ತಿನಿಸುಗಳನ್ನು ಹಾಗೂ ರಿಫ್ರೆಶ್ ಮಾಡುವ ಪಾನೀಯಗಳನ್ನೂ ಇದರಲ್ಲಿ ಸೇರಿಸುತ್ತದೆ. ಎಲ್ಲ ವಿಧದ ಆಹಾರ ಪದ್ಧತಿಯವರಿಗೂ ಸೂಕ್ತವಾಗುವಂತೆ ಇದು ಇರುತ್ತದೆ. ಮೆನುವಿನಲ್ಲಿ 45 ಕ್ಕೂ ಹೆಚ್ಚು ಊಟದ ಆಯ್ಕೆಗಳಿವೆ. ಫ್ಯೂಷನ್ ಮೀಲ್ಸ್, ಆಪಟೈಸರ್ಸ್‌ ಜೊತೆಗೆ ಪ್ರಾದೇಶಿಕ ವೈವಿಧ್ಯತೆ, ರುಚಿಕರ ಡೆಸರ್ಟ್‌ಗಳು ಮತ್ತು ಜನಪ್ರಿಯ ಶೆಫ್‌ಗಳು ವಿಶೇಷವಾಗಿ ಕ್ಯುರೇಟ್ ಮಾಡಿದ ತಿನಿಸುಗಳು ಕೂಡಾ ಇದರಲ್ಲಿ ಇರಲಿದೆ.

Ramesh Babu

Journalist

Recent Posts

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಸಲಹೆ

ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…

8 hours ago

ಭಾರತೀಯರ ಆಹಾರ ವೈವಿಧ್ಯತೆ…. ರುಚಿ – ತೃಪ್ತಿ – ಸಮಾನತೆ…..

ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…

18 hours ago

ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…

1 day ago

ಕೊಡಿಪಾಳ್ಯ ಬಳಿ ಕ್ಯಾಂಟರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…

1 day ago

ಮೊಬೈಲ್ ಕಳೆದುಹೋದರೆ ಗಾಬರಿ ಬೇಡ: ತಕ್ಷಣದ ಕ್ರಮವೇ ರಕ್ಷಣೆ: ಮೊಬೈಲ್‌ ಕಳೆದುಹೋದ 10 ನಿಮಿಷಗಳಲ್ಲಿ ಮಾಡಬೇಕಾದ 7 ಕೆಲಸಗಳು ಇಲ್ಲಿವೆ ನೋಡಿ…

ಬೆಂಗಳೂರು ಗ್ರಾಮಾಂತರ: ಮೊಬೈಲ್‌ ಫೋನ್‌ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್‌ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್‌ ಕೇವಲ ಸಂಪರ್ಕ…

1 day ago

ಎಸ್ಐಆರ್ ಅಕ್ರಮ ಹಾಗೂ ಬರ ಪರಿಹಾರ ವಿಳಂಬ: ಕೇಂದ್ರ ಮತ್ತು ವಿಪಕ್ಷದ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…

1 day ago