ಅಸಹಾಯಕ ವೃದ್ಧೆಗೆ ಸಹಾಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಪಿಎಸ್ಐ ನಂಜುಂಡಯ್ಯ

ತನ್ನ ಕುಟುಂಬವನ್ನ ಕಳೆದುಕೊಂಡ ವೃದ್ಧೆ ಹಾದಿ ಬೀದಿಯಲ್ಲಿ ಬೇಡಿ ತಿನ್ನುತ್ತಾ, ರಸ್ತೆ ಬದಿಯಲ್ಲಿ ಕೂತು ಕಂಡ ಕಂಡವರನ್ನ ಸಹಾಯ ಕೇಳಿ ಪರದಾಡುತ್ತಿದ್ದ ವೃದ್ದೆಯನ್ನ ಗಸ್ತಿನಲ್ಲಿದ್ದ ಪೊಲೀಸ್ ಅಧಿಕಾರಿ ಕಂಡು ವೃದ್ದೆಗೆ ಸಹಾಯ ಹಸ್ತ ನೀಡಿದ್ದಾರೆ… ಅಸಹಾಯಕ ವೃದ್ದೆಗೆ ಸಹಾಯ ಹಸ್ತ ನೀಡಿದ್ದರಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೌದು…  ಶ್ರೀರಂಗಪಟ್ಟಣದ ಮೂಲದ ಲಕ್ಷ್ಮಮ್ಮ ಎಂಬ ಮಹಿಳೆ ಮೂವತ್ತು ವರ್ಷದ ಹಿಂದೆ ಚಿಕ್ಕಬಳ್ಳಾಪುರಕ್ಕೆ ವಲಸೆ ಬಂದು ನಿಮ್ಮಕಲಕುಂಟೆ ಗ್ರಾಮದಲ್ಲಿ ವಾಸವಾಗಿರ್ತಾಳೆ. ಇತ್ತೀಚೆಗೆ ಗಂಡ ಮಕ್ಕಳು ತೀರಿ ಹೋಗಿದ್ದು, ಮನೆ ಮಠ ಇಲ್ಲದೆ ಕೂಲಿ ನಾಲಿ ಮಾಡಿ ಹೊಟ್ಟೆ ತುಂಬಿಸಿಕೊಂಡು ದೇವಸ್ಥಾನದ ಅವರಣದಲ್ಲಿ ಜೀವನ ಮಾಡ್ತಿದ್ದಳು. ಕಾಲ ಕಳೆದಂತೆ ವಯಸ್ಸಾಗಿ ದುಡಿಯಲು ಕೈಲಾಗದೆ ಬೇಡಿ ತಿನ್ನುತ್ತಾ ಜೀವನ ಸಾಗಿಸುತ್ತಿದ್ದಳು. ಕಂಡ ಕಂಡವರ ಬಳಿ ಸಹಾಯ ಮಾಡುವಂತೆ ಅಂಗಲಾಚುತ್ತಿದ್ದಳು. ಈ ವೃದ್ಧಿ ಅಸಹಾಯಕತೆ ಕಂಡ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಂಜುಂಡಯ್ಯ, ಮಹಿಳೆಯ ಬಳಿ ಹೋಗಿ ವಿಚಾರಿಸಿದಾಗ, ಮಳೆ ಗಾಳಿಗೆ ರಸ್ತೆಯಲ್ಲಿ ಕೂರಲಾಗುತ್ತಿಲ್ಲ, ಜೊತೆಗೆ ಜೀವನ ಪರ್ಯಾಂತ ದುಡಿದ ಒಂದು ಲಕ್ಷ ಹಣ ಬಳಿ ಇದ್ದು, ದರೋಡೆಯ ಭಯದಿಂದ ಬದುಕಬೇಕಿದೆ ಎಂದು ಅಳಲು ತೋಡಿಕೊಂಡಿದ್ದಾಳೆ.

ಕೂಡಲೇ, ಪೊಲೀಸ್ ಅಧಿಕಾರಿ ಮಹಿಳೆ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ಆ ಹಣ ಖಾತೆಯಲ್ಲಿರಿಸಿದ್ದು,  ಶ್ರೀನಿವಾಸಪುರದ ಆಶ್ರಮವೊಂದರಲ್ಲಿ ವಿಚಾರಿಸಿ ಅಮ್ಮ ಆಂಬುಲೆನ್ಸ್ ಸಹಾಯದಿಂದ ಆಶ್ರಮಕ್ಕೆ ಕಳುಹಿಸಿ ಕೊಟ್ಟಿದ್ದಾರೆ…

PSI ನಂಜುಂಡಯ್ಯ ಮಾಡಿದ ಈ ಸಹಾಯಕ್ಕೆ ವೃತ್ತ ನಿರೀಕ್ಷಕ ಮಂಜುನಾಥ್ ಶ್ಲಾಘೀಸಿದ್ದಾರೆ…

ಇನ್ನು, ವೃದ್ದೆ ಈ ಹಿಂದೆ ವಾಸವಿದ್ದ ಸುತ್ತಮುತ್ತಲಿನ ಜನರು ಕುಟುಂಬದ ಸದಸ್ಯರನ್ನ ದೂರದ ಊರಿಗೆ ಕಳಿಸುವ ಹಾಗೆ ಕಣ್ಣೀರುಸುರಿಸಿ ಭಾವನಾತ್ಮಕ ಬೀಳ್ಕೊಡುಗೆ ಕೊಟ್ಟಿದ್ದು ನೋಡುಗರ ಕಣ್ಣಲ್ಲಿ ಕಣ್ಣೀರು ತರಿಸುವಂತಿತ್ತು..

Ramesh Babu

Journalist

Recent Posts

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

11 hours ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

19 hours ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

21 hours ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

22 hours ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

1 day ago

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಬೆಳೆ ವಿಮೆಗೆ ನೊಂದಾಯಿಸಿ

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…

1 day ago