Categories: ಲೇಖನ

ಅಳಬೇಡಿ ಸ್ವಾಮಿ ಅಳಬೇಡಿ, ದಯವಿಟ್ಟು ಅಳಬೇಡಿ, ಸ್ವಲ್ಪ ನಕ್ಕು ಬಿಡಿ…..

ನಾನು ವಿದ್ಯಾವಂತನಾಗಿರಲಿಲ್ಲ,
ಅದರಿಂದಾಗಿ ಯಶಸ್ವಿಯಾಗಲಿಲ್ಲ.

ನಾನು ಬುದ್ದಿವಂತನಾಗಿರಲಿಲ್ಲ,
ಅದರಿಂದಾಗಿ ಜನಪ್ರಿಯನಾಗಲಿಲ್ಲ.

ನಾನು ಪ್ರತಿಭಾವಂತನಾಗಿರಲಿಲ್ಲ,
ಅದರಿಂದಾಗಿ ಪ್ರಖ್ಯಾತನಾಗಲಿಲ್ಲ.

ನಾನು ಶ್ರೀಮಂತನಾಗಿರಲಿಲ್ಲ,
ಅದರಿಂದಾಗಿ ಗೌರವ ಪಡೆಯಲಿಲ್ಲ,

ನಾನು ದೊಡ್ಡ ಪ್ರಬಲ ಸಮುದಾಯಕ್ಕೆ ಸೇರಿರಲಿಲ್ಲ.
ಅದರಿಂದಾಗಿ ಸಹಕಾರ ಸಿಗಲಿಲ್ಲ.

ನಾನು ದೊಡ್ಡವರ ಮನೆ ಮಗನಾಗಿರಲಿಲ್ಲ,
ಅದರಿಂದಾಗಿ ಮಾರ್ಗದರ್ಶನ ದೊರೆಯಲಿಲ್ಲ.

ನಾನು ಸುರಸುಂದರನಾಗಿರಲಿಲ್ಲ.
ಅದರಿಂದಾಗಿ ಯಾರೂ ಗುರುತಿಸಲಿಲ್ಲ.

ನಾನು ನೇರ ನಿಷ್ಠುರವಾದಿಯಾಗಿದ್ದುದರಿಂದ ಯಾರೂ ಹತ್ತಿರವಾಗಲಿಲ್ಲ.

ಆದರೆ…… ಆದರೆ….. ಆದರೆ………

ನಾನು,
ಪ್ರಾಮಾಣಿಕನಾಗಿದ್ದೆ,
ಸೃಷ್ಠಿಗೆ ನಿಯತ್ತಾಗಿದ್ದೆ,
ಅದಕ್ಕಾಗಿಯೇ,
ಇಂದು ನಾನು,
ಅನಾಮಧೇಯನಾಗಿದ್ದೇನೆ,
ಅನಾಥನಾಗಿದ್ದೇನೆ,
ಮತ್ತು,
ಎಂದೆಂದಿಗೂ…….

Success at any cost,
Killing instinct,
Balance the situation with intelligence,
Manage the things by smart work,
Boss is always right,
Attacking is the best defence…….

ಇದೆಲ್ಲಾ ಆಧುನಿಕ ಸಮಾಜದ ಯಶಸ್ಸಿನ ಮೂಲ ಮಂತ್ರಗಳು.

ಅದೇ ಇಂದಿನ ಶಿಕ್ಷಣ,
ಅದೇ ಇಂದಿನ ಸ್ಪೂರ್ತಿ,
ಅದೇ ಇಂದಿನ ಆದರ್ಶ,
ಅದೇ ಇಂದಿನ ಮಾರ್ಗದರ್ಶನ,
ಅದೇ ಇಂದಿನ ಮೌಲ್ಯ…………

ಅದಿಲ್ಲದ ” ನಾನು ”
ಅಜ್ಞಾತ.

ಏಕೆಂದರೆ,
ಮಂತ್ರಿ ಗಿರಿ ಸಿಗಲಿಲ್ಲ, ಒಳ್ಳೆಯ ಖಾತೆ ಸಿಗಲಿಲ್ಲ ಎಂದು ಅಳುತ್ತಿರುವವರನ್ನು ನೋಡಿದಾಗ……

ಅಯ್ಯೋ ಸ್ವಾಮಿ,
ಅಳಬೇಡಿ ಸ್ವಾಮಿ,
ದಯವಿಟ್ಟು ಅಳಬೇಡಿ…….

ಅಲ್ಲಿ ನೋಡಿ ತನ್ನ ಕಣ್ಣ ಮುಂದೆಯೇ ಮಗಳು ನೀರಿನಲ್ಲಿ ಕೊಚ್ಚಿ ಹೋದಾಗ ಇನ್ನೂ ಅಳುತ್ತಿರುವ ಆ ತಾಯಿಗೆ ಅವಮಾನ ಮಾಡಬೇಡಿ………

ಮದುವೆಯಾಗಿ 6 ತಿಂಗಳಿಗೇ ಗಂಡ ಅಪಘಾತದಲ್ಲಿ ತೀರಿ ಹೋದದ್ದರಿಂದ ಇನ್ನೂ ಅಳುತ್ತಿರುವ ಆ ಹೆಣ್ಣಿಗೆ ಅವಮಾನ ಮಾಡಬೇಡಿ…..

3 ವರ್ಷ ಮತ್ತು 5 ವರ್ಷದ ಇಬ್ಬರೂ ಮಕ್ಕಳು ತಂದೆ ತಾಯಿಗಳನ್ನು ಕೊರೋನಾದಿಂದ ಕಳೆದುಕೊಂಡು ಅನಾಥರಾಗಿ ರೋದಿಸುತ್ತಿರುವ ಆ ಮಕ್ಕಳಿಗೆ ಅವಮಾನ ಮಾಡಬೇಡಿ…….

ಇಳಿವಯಸ್ಸಿನಲ್ಲಿ ತನಗೆ ಅನ್ನ ಹಾಕುತ್ತಿದ್ದ ಒಬ್ಬನೇ ಮಗ ಕ್ಯಾನ್ಸರಿನಿಂದ ಸತ್ತ ನೆನಪಿನಲ್ಲಿ ದುಃಖಿಸುತ್ತಿರುವ ತಂದೆ ತಾಯಿಯಗೆ ಅವಮಾನ ಮಾಡಬೇಡಿ…..

ಅಳಬೇಡಿ ಸ್ವಾಮಿ ದಯವಿಟ್ಟು ಅಳಬೇಡಿ…….

ಅಲ್ಲಿ ನೋಡಿ,
ಬಸ್ ನಿಲ್ದಾಣದಲ್ಲಿ ರಾತ್ರಿಯ ಮಳೆ, ಚಳಿ, ಗಾಳಿಗೆ ತತ್ತರಿಸಿ ಎಲ್ಲಿಗೆ ಹೋಗಬೇಕೆಂದು ತಿಳಿಯದೆ, ಅಪರಿಚಿತ ನಗರದಲ್ಲಿ ಹಸಿವಿನಿಂದ ಪರಿತಪ್ಪಿಸುತ್ತಿರುವ ಹಳ್ಳಿಯಿಂದ ಗುಳೆ ಬಂದ ಅಲೆಮಾರಿ ರೈತ ಕುಟುಂಬವನ್ನು…….

ಬೀದಿ ಬದಿಯಲ್ಲಿ ಅಲಂಕಾರ ಮಾಡಿಕೊಂಡು ತನ್ನ ದೇಹವನ್ನು ಹಣಕ್ಕೆ ಮಾರಿಕೊಂಡು ಹಿಂಸೆ, ನರಕಯಾತನೆ ಅನುಭವಿಸಿ ತನ್ನ ಮಕ್ಕಳನ್ನು ಸಾಕಲು ಶ್ರಮಪಡುತ್ತಿರುವ ಮಹಿಳೆಯರನ್ನು………

ರಾತ್ರಿ ಹನ್ನೆರಡಾದರೂ ಇನ್ನೂ ಗಿರಾಕಿಗಳು ತಿಂದು ಕುಡಿದ ಎಂಜಲು ಎಲೆಗಳನ್ನು, ತಟ್ಟೆಗಳನ್ನು ಎತ್ತುತ್ತಾ ಅವರಿಂದ ಅವಮಾನಕರ ಮಾತುಗಳನ್ನು ಕೇಳುತ್ತಾ, ತಮ್ಮ ಹಸಿವನ್ನು ನುಂಗಿಕೊಂಡು ದುಡಿಯುತ್ತಿರುವ ಆ ಎಳೆಯ ಬಾಲ ಕಾರ್ಮಿಕರನ್ನು…..

ಇನ್ನೂ ಎಷ್ಟು ಬೇಕು ಕೇಳಿ ಸ್ವಾಮಿ ಹೇಳುತ್ತಾ ಹೋಗುತ್ತೇನೆ……..

ಮನೆ ಬಾಡಿಗೆ ಕಟ್ಟದ, ಮಕ್ಕಳ ಶಾಲೆಯ ಫೀಜು ತುಂಬದ, ಖಾಯಿಲೆಗೆ ಚಿಕಿತ್ಸೆ ಪಡೆಯಲು ಹಣವಿಲ್ಲದ, ನಿರುದ್ಯೋಗದಿಂದ ಪರಿತಪ್ಪಿಸುತ್ತಿರುವ, ಪ್ರೇಮ ವೈಫಲ್ಯದಿಂದ ವೇದನೆ ಪಡುತ್ತಿರುವ ಎಷ್ಟೋ ಜನ ನಮ್ಮ ನಡುವೆಯೇ ಇದ್ದಾರೆ…..

ನೀವು ಈ ರಾಜ್ಯದ ಅತ್ಯಂತ ಪ್ರಮುಖ ವ್ಯಕ್ತಿಗಳು, ಶ್ರೀಮಂತರು ಬದುಕು ನಿಮಗೆ ಸಾಕಷ್ಟು ನೀಡಿದೆ.
ಒಬ್ಬ ವ್ಯಕ್ತಿಯ ಬದುಕಿನಲ್ಲಿ ಬರಬಹುದಾದಂತಹ ಬಹುದೊಡ್ಡ ಸ್ಥಾನಮಾನ ನಿಮಗೆ ದೊರೆತಿದೆ.

ಹೌದು ಬ್ರದರ್ಸ್,
ನೀವು ಮನುಷ್ಯರು. ನಿಮಗೂ ಭಾವನೆಗಳಿವೆ. ಅದನ್ನು ಒಪ್ಪುತ್ತೇವೆ. ಆದರೆ,
ರಾಜಕೀಯ ಕಾರಣಗಳಿಗಾಗಿ ಸಾರ್ವಜನಿಕವಾಗಿ ಅಳಬೇಡಿ. ಅದನ್ನು ನೋಡಲಾಗುವುದಿಲ್ಲ.

ನೀವೂ ಸಾಚಾ ಅಲ್ಲ. ನಿಮ್ಮ ವಿರೋಧಿಗಳು ಸಾಚಾ ಅಲ್ಲ. ಸದ್ಯದ ರಾಜಕೀಯ ವ್ಯವಸ್ಥೆ ಇರುವುದೇ ಹೀಗೆ.

ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುತ್ತಾ, ಒಬ್ಬರ ತಲೆಯನ್ನು ಇನ್ನೊಬ್ಬರು ಹಿಡಿಯುತ್ತಾ ಸಾಗುವುದು…..

ಬಂದದ್ದೆಲ್ಲಾ ಬರಲಿ. ನಗುನಗುತ್ತಾ ಜನರಿಗೆ ಒಳ್ಳೆಯದನ್ನು ಮಾಡಿ.

ನಿಮ್ಮಂತ ಅದೃಷ್ಟವಂತರೇ ಅತ್ತರೆ ಇನ್ನು ನಮ್ಮಂತ ನತದೃಷ್ಟರ ಪಾಡೇನು.
ಒಮ್ಮೆ ನಮ್ಮತ್ತ ನೋಡಿ ಬ್ರದರ್………

ನಗಿ ಸ್ವಾಮಿ ನಗಿ…
ದಯವಿಟ್ಟು ನಕ್ಕು ಬಿಡಿ …..

ಜಗವೆಲ್ಲ ನಗುತಿರಲಿ,
ಜಗದಳವು ನನಗಿರಲಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆ

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್‌ (MIL)…

40 minutes ago

ಸ್ಟಿಂಗ್ ಆಪರೇಷನ್ ವಿವಾದ: ಸಿದ್ದರಾಮಯ್ಯನವರದ್ದು ಕುಮಾರಸ್ವಾಮಿ ತರಹದ ಚರಿತ್ರೆಯಲ್ಲ: ಎಚ್.ಡಿ.ಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ

ಸ್ಟಿಂಗ್ ಆಪರೇಷನ್ ಮಾಡಿಸುವುದಕ್ಕೆ ಮುಖ್ಯಮಂತ್ರಿಗಳಿಗೆ ತಲೆ ಕೆಟ್ಟಿದೆಯೇ? ಪದೇಪದೇ ಈ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಎಳೆದು ತರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ…

13 hours ago

ರಾಜಾನುಕುಂಟೆ ಬಳಿ ರೈಲು ಬೋಗಿಗಳಿಗೆ ಬೆಂಕಿ: ಎರಡು ಬೋಗಿಗಳು ಸುಟ್ಟು ಭಸ್ಮ

ದೊಡ್ಡಬಳ್ಳಾಪುರ: ಯಲಹಂಕ ಸಮೀಪದ ರಾಜಾನುಕುಂಟೆ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿಗಳ ಮೇಲೆ ನಿಲ್ಲಿಸಿದ್ದ ಎರಡು ರೈಲು ಬೋಗಿಗಳಿಗೆ ಬೆಂಕಿ…

18 hours ago

ಮಧುರೆ ಕೆರೆಯಲ್ಲಿ ಮಣ್ಣು ದಂಧೆ ಆರೋಪ: ಸುಮಾರು 35 ಟ್ರ್ಯಾಕ್ಟರ್, 5 ಜೆಸಿಬಿಗಳ ಅಬ್ಬರ; ಮಣ್ಣು ತೆಗೆಯುವುದಕ್ಕೆ ಗ್ರಾಮಸ್ಥರ ಬ್ರೇಕ್!

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸುಮಾರು 35 ಟ್ರ್ಯಾಕ್ಟರ್‌ಗಳು…

19 hours ago

ನಮ್ಮ ತೆರಿಗೆ ನಮ್ಮ ಹಕ್ಕು…

ನಮ್ಮ ತೆರಿಗೆ ನಮ್ಮ ಹಕ್ಕು, ಈ ವಿಷಯದಲ್ಲಿ ರಾಜಕೀಯ ಮೀರಿ ವೈಜ್ಞಾನಿಕ ಸಮತೋಲನ ಸಾಧಿಸಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ..... ಕೇಂದ್ರದ…

1 day ago

ದೇವನಹಳ್ಳಿ ಬಳಿ ಭೀಕರ ಅಪಘಾತ: ಓರ್ವ ಸಾವು: ಹಲವರಿಗೆ ಗಾಯ

ದೇವನಹಳ್ಳಿ: ನಿಧಾನವಾಗಿ ಸಾಗುತ್ತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ರೇಂಜ್ ರೋವರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಮೊಳಕಾಲ್ಮೂರು ಕ್ಷೇತ್ರದ…

1 day ago